30 ಮಸೂದೆ ಅಂಗೀಕಾರ: ಲೋಕಸಭೆ ಹೊಸ ದಾಖಲೆ, 67 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು!

By Web DeskFirst Published Aug 4, 2019, 9:04 AM IST
Highlights

ಮಸೂದೆ ಅಂಗೀಕಾರ: ಲೋಕಸಭೆ 67 ವರ್ಷಗಳ ಹೊಸ ದಾಖಲೆ| 30 ವಿಧೇಯಕಗಳಿಗೆ ಅಂಗೀಕಾರ ಪಡೆದ ಲೋಕಸಭೆ

ನವದೆಹಲಿ[ಆ.04]: ಪ್ರಸ್ತುತ ಲೋಕಸಭೆ ಅಧಿವೇಶನ ಮುಕ್ತಾಯಕ್ಕೆ ಇನ್ನೂ 3 ದಿನ ಮಾತ್ರ ಬಾಕಿಯಿದೆ. ಆದರೆ ಈಗಾಗಲೇ ಮಂಡನೆಯಾದ 36 ಮಸೂದೆಗಳಲ್ಲಿ 30 ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವ ಮೂಲಕ ಲೋಕಸಭೆ 67 ವರ್ಷಗಳಲ್ಲೇ ಹೊಸ ದಾಖಲೆ ಸ್ಥಾಪಿಸಿದೆ. 1952ರಲ್ಲಿ ಲೋಕಸಭೆಯಲ್ಲಿ 27 ಮಸೂದೆ ಮಂಡಿಸಿ ಅಂಗೀಕಾರ ಪಡೆದುಕೊಂಡಿದ್ದ ದಾಖಲೆಯನ್ನು ಇದೀಗ ಮುರಿಯಲಾಗಿದೆ.

ಈ ಬಾರಿಯ ಲೋಕ ಕಲಾಪ ಉತ್ಪಾದಕತೆ 20 ವರ್ಷಗಳ ಗರಿಷ್ಠ

ಲೋಕಸಭೆಯಲ್ಲಿ ಈಗಾಗಲೇ 30 ಮಸೂದೆ ಮತ್ತು ರಾಜ್ಯಸಭೆಯಲ್ಲಿ 25 ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಅಧಿವೇಶನ ಅಂತ್ಯಕ್ಕೆ ಮೂರು ದಿನ ಮಾತ್ರ ಉಳಿದಿದ್ದು, ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ) ವಿಧೇಯಕ, ಅಣೆಕಟ್ಟುಗಳ ಸುರಕ್ಷತೆ ವಿಧೇಯಕ, ಚಿಟ್‌ಫಂಡ್‌ ತಿದ್ದುಪಡಿ ವಿಧೇಯಕ, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ವಿಧೇಯಕಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಈ ವಿಧೇಯಕಗಳ ಮೇಲೆ ಚರ್ಚೆ ಕೂಡ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಮಸೂದೆಗಳಿಗೆ ಸಂಸತ್ತಿನ ಅಂಗೀಕಾರ ಪಡೆಯುವ ವಿಶ್ವಾಸದಲ್ಲಿದೆ. ಆಡಳಿತಾರೂಢ ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿದ್ದರೂ ಯುಎಪಿಎ, ತ್ರಿವಳಿ ತಲಾಖ್‌ ಮಸೂದೆ ಮತ್ತಿತರ ವಿಧೇಯಕಗಳನ್ನು ತ್ವರಿತಗತಿಯಲ್ಲಿ ಮಂಡಿಸಿ ಅಂಗೀಕಾರವೂ ಪಡೆದುಕೊಂಡು ಯಶಸ್ವಿಯಾಗಿದೆ.

18 ವರ್ಷಗಳಲ್ಲೇ ಮೊದಲು, ಮಧ್ಯರಾತ್ರಿವರೆಗೂ ನಡೆಯಿತು ಲೋಕಸಭಾ ಕಲಾಪ!

ಅಧಿವೇಶನ ಅವಧಿ ಮುಕ್ತಾಯದೊಳಗೆ ಎಲ್ಲ ಮಸೂದೆಗಳ ಅಂಗೀಕಾರಕ್ಕೆ ಪ್ರಯತ್ನಿಸಲಾಗುವುದು. ಈಗಾಗಲೇ 36 ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. 30 ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಲಾಗಿದೆ. ಮಂಡನೆಯಾದ ಉಳಿದ ವಿಧೇಯಕಗಳೂ ಅಂಗೀಕಾರವಾದಲ್ಲಿ ಈ ಬಾರಿಯ ಅಧಿವೇಶನ ಅತಿಹೆಚ್ಚು ಮಸೂದೆ ಅಂಗೀಕರಿಸಿದ ಮತ್ತು ದೀರ್ಘ ಸಮಯ ನಡೆದ ಅಧಿವೇಶನವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ತಿಳಿಸಿದ್ದಾರೆ.

click me!