ನಡುರಸ್ತೆಯಲ್ಲೇ ಬೈಕ್‌ ಸವಾರನ ಮೇಲೆ ವಿಂಗ್‌ ಕಮಾಂಡರ್‌ ದೌರ್ಜನ್ಯ, ಭಾಷಾ ತಾರತಮ್ಯದ ಕಥೆ ಕಟ್ಟಿದ ಹೆಂಡ್ತಿ!

Published : Apr 21, 2025, 08:06 PM ISTUpdated : Apr 21, 2025, 08:33 PM IST
ನಡುರಸ್ತೆಯಲ್ಲೇ ಬೈಕ್‌ ಸವಾರನ ಮೇಲೆ ವಿಂಗ್‌ ಕಮಾಂಡರ್‌ ದೌರ್ಜನ್ಯ, ಭಾಷಾ ತಾರತಮ್ಯದ ಕಥೆ ಕಟ್ಟಿದ ಹೆಂಡ್ತಿ!

ಸಾರಾಂಶ

ಬೆಂಗಳೂರಿನಲ್ಲಿ ಡಿಆರ್‌ಡಿಓ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ಪ್ರಕರಣದಲ್ಲಿ ತಿರುವು. ಬೈಕ್ ಸವಾರನ ಮೇಲೆ ಮೊದಲು ಹಲ್ಲೆ ಮಾಡಿದ್ದು ವಿಂಗ್ ಕಮಾಂಡರ್ ಎಂದು ಸಿಸಿಟಿವಿ ದೃಶ್ಯಾವಳಿ ಬಹಿರಂಗಪಡಿಸಿದೆ. ಭಾಷಾ ಜಗಳದ ಸುಳ್ಳು ಕಟ್ಟಿದ್ದ ಬೋಸ್, ಸ್ವತಃ ಹಲ್ಲೆ ಮಾಡಿ ಮೊಬೈಲ್ ಎಸೆದಿರುವುದು ದೃಢಪಟ್ಟಿದೆ.

ಬೆಂಗಳೂರು (ಏ.21): ಡಿಆರ್‌ಡಿಓ ವಿಂಗ್‌ ಕಮಾಂಡರ್‌ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಭಾರೀ ಟ್ವಿಸ್ಟ್‌ ಸಿಕ್ಕಿದೆ. ಶಿಲಾದಿತ್ಯ ಬೋಸ್ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕನ್ನಡ ಹಾಗೂ ಹಿಂದಿ ಭಾಷೆ ಜಟಾಪಟಿ ಎನ್ನುವಂತೆ ಕಥೆ ಕಟ್ಟಿದ್ದರು. ಆದರೆ, ಇಡೀ ಪ್ರಕರಣದ ಸಿಸಿಟಿವಿ ಫೂಟೇಜ್‌ ಹೊರಬಂದಿದ್ದು, ಬೈಕ್‌ ಸವಾರ ವಿಕಾಸ್‌ ಮೇಲೆ ವಿಂಗ್‌ ಕಮಾಂಡರ್‌ ಮೊದಲಿಗರಾಗಿ ಹಲ್ಲೆ ಮಾಡಿರುವುದು ಗೊತ್ತಾಗಿದೆ.

ಇಂದು ಬೆಳಗ್ಗೆ ಸಿವಿ ರಾಮನ್‌ ನಗರದಲ್ಲಿ ನಡೆದಿದ್ದ ಘಟನೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದಲ್ಲದೆ, ರಾಷ್ಟ್ರೀಯ ಮಾಧ್ಯಮಗಳು ಭಾಷಾ ವಿಚಾರವಾಗಿ ವಿಂಗ್‌ ಕಮಾಂಡರ್‌ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ಮಾಡಲಾಗಿದೆ ಎಂದು ವರದಿ ಮಾಡಿದ್ದವು.

ಸೋಶಿಯಲ್‌ ಮೀಡಿಯಾ ವಿಡಿಯೋದಲ್ಲಿ ತನ್ನ ಮೇಲೆ ಬೈಕ್‌ ಸವಾರ ಹಲ್ಲೆ ಮಾಡಿದ್ದಾನೆ ಎಂದು ಸುಳ್ಳು ಹೇಳಿದ್ದ. ಆದರೆ, ಸಿಸಿಟಿವಿ ವಿಡಿಯೋದಲ್ಲಿ ವಿಂಗ್‌ ಕಮಾಂಡರ್‌, ಬೈಕ್‌ ಸವಾರನನ್ನು ರಸ್ತೆಗೆ ಬೀಳಿಸಿ, ಕಾಲಿನಿಂದ ಒದ್ದು ಹಲ್ಲೆ ಮಾಡಿರುವುದು ಗೊತ್ತಾಗಿದೆ. ಅದು ಮಾತ್ರವಲ್ಲದೆ, ಆತನ ಮೊಬೈಲ್‌ಅನ್ನು ಎಸೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಒಟ್ಟು ನಾಲ್ಕು ವಿಡಿಯೋಗಳು ಬಂದಿದ್ದು, ನಾಲ್ಕೂ ವಿಡಿಯೋದಲ್ಲಿ ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ ಅವರೇ ಮೊದಲೇ ಹಲ್ಲೆ ಮಾಡಿರುವುದು ಗೊತ್ತಾಗಿದೆ.

ಇದರೊಂದಿಗೆ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಆರೋಪಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಂತಾಗಿದೆ. ಕನ್ನಡಿಗ ಬೈಕ್ ಸವಾರನ ಮೇಲೆ ಮೊದಲು ವಾಯುಪಡೆಯ ಅಧಿಕಾರಿಯೇ  ಹಲ್ಲೆ ಮಾಡಿದ್ದ ಎನ್ನುವುದು ಸಿಸಿಟಿವಿಯಲ್ಲಿ ಬಯಲಾಗಿದೆ.

ಬೈಕ್ ಸವಾರನಿಗೆ ಶಿಲಾದಿತ್ಯ ಬೋಸ್ ಹಿಗ್ಗಾಮುಗ್ಗಾ ಥಳಿಸಿದ್ದ. ಬಳಿಕ ತನ್ನ ಮೇಲೆ ಹಲ್ಲೆಯಾಗಿದೆ ಎಂದು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ರಿಲೀಸ್‌ ಮಾಡಿದ್ದ. ಈ ನಡುವೆ ಬೈಕ್ ಸವಾರನ ಮೇಲೆ ಶಿಲಾದಿತ್ಯ ಬೋಸ್‌ ಮನಸೋಇಚ್ಛೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಸಿ.ವಿ ರಾಮನ್ ನಗರದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿತ್ತು. ಕನ್ನಡಿಗ ಬೈಕ್ ಸವಾರನ ಮೇಲೆ ದರ್ಪ ಮಾಡಿದ್ದ ವಿಂಗ್ ಕಮಾಂಡರ್ ಮೇಲೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಸ್ಥಳದಲ್ಲಿದ್ದವರು ಬಿಡಿಸಲು ಹೋದರೂ ಬಿಡದೇ ಮನಸೋ ಇಚ್ಛೆ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್‌ ಆಗಿದೆ.

ಹಿಂದಿವಾಲಾಗಳ ನಾಟಕ: ಸಿಸಿಟಿವಿ ದೃಶ್ಯದೊಂದಿಗೆ  ಹಿಂದಿವಾಲ ಅಧಿಕಾರಿಯ ಮಹಾ ನಾಟಕ ಕೂಡ ಬಯಲಾಗಿದೆ. ತಾನೇ ಹಲ್ಲೆ ಮಾಡಿ ಕನ್ನಡಿಗ ಯುವಕನ  ಮೇಲೆ ಅಧಿಕಾರಿ ಗೂಬೆ ಕೂರಿಸಿದ್ದ. ಸಿಸಿಟಿವಿಯಲ್ಲಿ  ಅಧಿಕಾರಿಯ ರಾಕ್ಷಸೀಯ ವರ್ತನೆ ಬಯಲಾಗಿದೆ.
ತಾನೇ ಮನಬಂದಂತೆ ಥಳಿಸಿ, ನನ್ನ ಮೇಲೆಯೇ ಹಲ್ಲೆ ಎಂದು ನಾಟಕ ಮಾಡಿದ್ದ. ವಿಡಿಯೋ ಹೇಳಿಕೆ ಕೊಟ್ಟು ಅನುಕಂಪ ಗಿಟ್ಟಿಸಲು  ಅಧಿಕಾರಿ ಪ್ರಯತ್ನಿಸಿದ್ದ. ಕನ್ನಡಿಗನ ಮೇಲೆಯೇ ಹಲ್ಲೆ ಮಾಡಿದ್ದು ಸಿಸಿಟಿವಿಯಲ್ಲಿ ಬಯಲಾಗಿದೆ.

ಬೆಂಗಳೂರಿನಲ್ಲಿ ಲಾ & ಆರ್ಡರ್‌ಗೆ ಕ್ಯಾರೇ ಇಲ್ಲ, ನಡು ರಸ್ತೆಯಲ್ಲೇ ವಿಂಗ್‌ ಕಮಾಂಡರ್‌ ಮೇಲೆ ಬೈಕ್‌ ಸವಾರನ ಹಲ್ಲೆ!

ಬಳಕ ಪತ್ನಿ ಮೂಲಕ ಕನ್ನಡಿಗ ಯುವಕನ ಮೇಲೆ ಅಧಿಕಾರಿ ದೂರು ಕೊಡಿಸಿದ್ದ . ಬೆಂಗಳೂರಲ್ಲಿ ವಲಸಿಗರಿಗೆ ರಕ್ಷಣೆಯಿಲ್ಲ ಎಂಬರ್ಥದಲ್ಲಿ ಬಿಂಬಿಸಿದ್ದ ಕನ್ನಡ ಮಾತನಾಡದೇ ಇದ್ದಿದ್ದಕ್ಕೆ ಹಲ್ಲೆ ಎಂದು ಬಿಂಬಿಸಲು ಪ್ರಯತ್ನ ಮಾಡಿದ್ದ. ಇದೇ ಅಂಶವನ್ನು ಎಫ್‌ಐಆರ್‌ನಲ್ಲೂ ದಾಖಲಿಸಲಾಗಿತ್ತು.

ಬೆಂಗಳೂರು: ಜೆಸಿ ರಸ್ತೆಯಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಅಂಕಲ್, ಜಪ್ಪಯ್ಯ ಅಂದ್ರೂ ಜರುಗಲಿಲ್ಲ!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
ಹೊರನಾಡು ಅನ್ನಪೂರ್ಣೇಶ್ವರಿಗೆ ಹೋಗಿದ್ದ 48 ಜನರಿದ್ದ ಪ್ರವಾಸಿಗರ ಬಸ್ ಪಲ್ಟಿ!