ಸತೀಶ್, ರಮೇಶ್ ವಿಚಾರಿಸಲು ಮುಂದಾದ ಮತ್ತೋರ್ವ ನಾಯಕ?

By Web DeskFirst Published 12, Sep 2018, 12:48 PM IST
Highlights

ರಾಜ್ಯ ರಾಜಕಾರಣದಲ್ಲಿ ಪ್ರಹಸನವನ್ನೇ ಉಂಟು ಮಾಡುತ್ತಿರುವ ಜಾರಕಿಹೊಳಿ ಸಹೋದರರ ಜೊತೆಗೆ ಮಾತುಕತೆ ನಡೆಸಲು ಇದೀಗ ಮತ್ತೋರ್ವ ಕಾಂಗ್ರೆಸ್ ಮುಖಂಡ ಮುಂದಾಗಿದ್ದಾರೆ. ಇಬ್ಬರನ್ನು ವಿಚಾರಿಸುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. 

ಕಲಬುರಗಿ: ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ನಿಷ್ಠಾ ವಂತ ಕಾರ್ಯಕರ್ತರಾಗಿ ದ್ದಾರೆ. ಪಕ್ಷಕ್ಕೆ ಹಾನಿ ತರುವ ಯಾವುದೇ ಕೆಲಸಕ್ಕೆ ಅವರು ಕೈ ಹಾಕಲ್ಲ ಎಂಬ ವಿಶ್ವಾಸ ನಮಗಿದೆ. 

ಶೀಘ್ರದ ಲ್ಲಿಯೇ ಈ ಬಗ್ಗೆ ಜಾರಕಿಹೊಳಿ ಸಹೋದರರ ಜತೆ ಮಾತುಕತೆ ನಡೆಸುತ್ತೇನೆ ಎಂದು ಲೋಕಸಭೆ ಸಂಸ ದೀಯ ಗುಂಪಿನ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ರಮೇಶ್ ತಮಗೆ ಆತ್ಮೀಯನಾಗಿದ್ದು, ಆತ ತುಂಬಾ ಸ್ವಾಭಿಮಾನಿಯಾಗಿದ್ದಾನೆ. ಆದರೆ, ಪಕ್ಷವನ್ನು ಬಿಡಲು ಯಾಕೆ ಮುಂದಾಗಿದ್ದಾರೆ ಎಂಬುದನ್ನು ವಿಚಾರಿಸುವೆ. 

ಈ ವಿಚಾರದ ಬಗ್ಗೆ ಸತೀಶ್,  ರಮೇಶ್ ಇಬ್ಬರಲ್ಲಿಯೂ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷ ಬಿಡಲು ಇರುವ ಕಾರಣ, ಅತೃಪ್ತಿ ಪತ್ತೆ ಹಚ್ಚಿ ಅವುಗಳ ಶಮನಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು.

Last Updated 19, Sep 2018, 9:23 AM IST