
ಲಂಡನ್(ಸೆ.12): ದೇಶದ ಶ್ರೀಮಂತ ಉದ್ಯಮಿಗಳ, ನಟರ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳುತ್ತಾರೆ. ಈ ಮಕ್ಕಳ ಜೀವನ ಶೈಲಿ, ಓಡಾಟ, ಸುತ್ತಾಟ ಆಗಾಗ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುತ್ತದೆ.
ಆದರೆ ಅವರಾರೂ ಲಂಡನ್‌ನ 'ಐಷಾರಾಮಿ ವಿದ್ಯಾರ್ಥಿ' ಎಂದು ಕರೆಸಿಕೊಂಡಿರಲಿಲ್ಲ. ಆದರೆ ಈಗ ಭಾರತೀಯ ಮೂಲದ ಆಗರ್ಭ ಶ್ರೀಮಂತ ಉದ್ಯಮಿಯೊಬ್ಬರ ಮಗಳು ಲಂಡನ್‌ನಲ್ಲಿ ಅತ್ಯಂತ ಐಷಾರಾಮಿ ವಿದ್ಯಾರ್ಥಿನಿ ಎಂದು ಕರೆಸಿಕೊಂಡಿದ್ದಾರೆ.
ಈ ವಿದ್ಯಾರ್ಥಿನಿ ಲಂಡನ್ ನ ಅತೀ ಐಷಾರಾಮಿ ವಿದ್ಯಾರ್ಥಿನಿ ಎಂದು ಕರೆಸಿಕೊಳ್ಳಲು ಕಾರಣವೂ ಇದೆ. ಊಟ, ಬಟ್ಟೆ, ಮೇಕಪ್ ನಿಂದ ಹಿಡಿದು ಆಕೆಯ ಸಂಪೂರ್ಣ ವೈಯಕ್ತಿಕ ಕೆಲಸಗಳನ್ನು ನಿರ್ವಹಿಸಲು 12 ಸಿಬ್ಬಂದಿ ಬೇಕಿದ್ದಾರೆ ಎಂದು ಅವರ ಪೋಷಕರು ಜಾಹಿರಾತು ನೀಡಿದ್ದಾರೆ.
ಮಗಳು ಸಾಮಾನ್ಯ ವಿದ್ಯಾರ್ಥಿ ನಿಲಯದಲ್ಲಿ ಇರುವುದು ಬೇಡವೆಂದು ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಈ ಉದ್ಯಮಿ. ಈಕೆಯ ಉಪಚಾರಕ್ಕಾಗಿ ನೇಮಕವಾಗುವ ಸಿಬ್ಬಂದಿಯನ್ನೂ ಅದೇ ಬಂಗಲೆ ಯಲ್ಲಿ ಇರಿಸಲಾಗುವುದು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಆದರೆ ಆ ಉದ್ಯಮಿ ಯಾರು ಎಂಬುದನ್ನು ಭದ್ರತೆಯ ಕಾರಣಕ್ಕೆ ಬಹಿರಂಗಪಡಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.