370 ನೇ ವಿಧಿಯಿಂದ ಯಾರಿಗೆ ಲಾಭವಾಯಿತು? ಇದು ಅತ್ಯಂತ ನ್ಯಾಯಸಮ್ಮತವಾದ ಪ್ರಶ್ನೆ. ಭಾರತ ಸ್ವತಂತ್ರವಾದ 73 ವರ್ಷಗಳ ಬಳಿಕ ನಾವೆಲ್ಲರೂ ಇದನ್ನು ಕೇಳಲೇಬೇಕು. ನಿಸ್ಸಂಶಯವಾಗಿ ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಜನರಿಗೆ ಇದರಿಂದ ಪ್ರಯೋಜನವಾಗಿಲ್ಲ.
ಶ್ರೀನಗರ (ಆ. 19): ಜಮ್ಮು ಮತ್ತು ಕಾಶ್ಮೀರದ ಶ್ರೀಸಾಮಾನ್ಯರ ಪ್ರಯೋಜನಕ್ಕಾಗಿ 370ನೇ ವಿಧಿ ಹೋಗಲೇಬೇಕಾಗಿತ್ತು. 70 ವರ್ಷಗಳಷ್ಟುಹಳೆಯ ಸಮಸ್ಯೆಯನ್ನು ಅಧಿಕಾರ ವಹಿಸಿಕೊಂಡ 70 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಕೊನೆಗಾಣಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧೈರ್ಯ ಮತ್ತು ಗೃಹ ಸಚಿವ ಅಮಿತ್ ಶಾ ಅವರ ದೃಢ ನಿಶ್ಚಯವನ್ನು ನಾವು ಶ್ಲಾಘಿಸಲೇಬೇಕು.
ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರಿ ಮುಖಭಂಗ, ವಹಿಸಿಕೊಂಡು ಮಂಗನಾದ ಚೀನಾ!
undefined
ನ್ಯಾಯೋಚಿತವಲ್ಲದ ಸನ್ನಿವೇಶದಲ್ಲಿ 370ನೇ ವಿಧಿಯನ್ನು ತಾತ್ಕಾಲಿಕ ನಿಬಂಧನೆ (Provision)ಯಾಗಿ ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಗಿತ್ತು. 560ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳು 370ನೇ ವಿಧಿಯಂಥ ಯಾವುದೇ ತಾತ್ಕಾಲಿಕ ವ್ಯವಸ್ಥೆಯಿಲ್ಲದೆ ಭಾರತದ ಭಾಗವಾಗಿದ್ದವು.
ಈ ಎಲ್ಲ ಸಂಸ್ಥಾನಗಳಲ್ಲಿ ಎಲ್ಲ ಸಮುದಾಯಗಳ ಜನರು ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಬಾಳುತ್ತಿದ್ದರು. ಹೀಗಿದ್ದೂ, ಅದ್ಭುತ ಬುದ್ಧಿವಂತಿಕೆ ಮತ್ತು ದೂರದರ್ಶಿತ್ವವನ್ನು ಹೊಂದಿದ್ದ ನಾಯಕರಾಗಿದ್ದ ನಮ್ಮ ಭಾರತೀಯ ಸಂವಿಧಾನದ ನಿರ್ಮಾತೃಗಳು 370ರಂಥ ಯಾವುದೇ ನಿರ್ಬಂಧಗಳನ್ನು ಈ ರಾಜಪ್ರಭುತ್ವವಿದ್ದ ಸಂಸ್ಥಾನಗಳಿಗೆ ಕೊಡಮಾಡಲಿಲ್ಲ.
ಟಿಟ್ ಫಾರ್ ಟ್ಯಾಟ್: ಥಾರ್ ಲಿಂಕ್ ಎಕ್ಸಪ್ರೆಸ್ ರದ್ದುಗೊಳಿಸಿದ ಭಾರತ!
ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಉಳಿದ 560 ಕ್ಕೂ ಹೆಚ್ಚು ರಾಜಪ್ರಭುತ್ವಗಳೆಲ್ಲವನ್ನೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ನಿರ್ವಹಿಸಿದ್ದರು ಮತ್ತು ಅವೆಲ್ಲವೂ ಇಂದು ಭಾರತದ ಹೆಮ್ಮೆಯ ಭಾಗವಾಗಿವೆ. ಆದರೆ, ಜಮ್ಮು ಮತ್ತು ಕಾಶ್ಮೀರವನ್ನು ಜವಾಹರಲಾಲ್ ನೆಹರು ನಿರ್ವಹಿಸಿದ್ದರು. ಇದು, ಉಪಪ್ರಧಾನಮಂತ್ರಿಯಾಗಿ ಗೃಹ ಸಚಿವಾಲಯ ನಿರ್ವಹಿಸುತ್ತಿದ್ದ ಮತ್ತು ಸಂಸ್ಥಾನಗಳನ್ನು ನಿರ್ವಹಿಸಬೇಕಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ಮುಜುಗರಕ್ಕೂ ಕಾರಣವಾಗಿತ್ತು.
42000 ಜೀವಗಳ ಹಾನಿ
ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯ ವಿಚಾರದಲ್ಲಿ ಕಾಲಹರಣ ಮಾಡಿ ಇಂದಿಗೆ 70 ವರ್ಷಗಳೇ ಕಳೆದಿವೆ. ಸುಮಾರು 42 ಸಾವಿರ ಜೀವಗಳ ಹಾನಿಯಾಗಿದೆ. ಕಾಶ್ಮೀರಿ ಪಂಡಿತರು ಬಲವಂತವಾಗಿ ಒತ್ತಡಕ್ಕೆ ಸಿಲುಕಿ ಮನೆಗಳನ್ನು ತೊರೆದಿದ್ದಾರೆ. ವಿಶೇಷ ವ್ಯವಸ್ಥೆ ಎನಿಸಿಕೊಂಡಿದ್ದು, ಪ್ರತ್ಯೇಕತೆಗೆ ಕಾರಣವಾಗಿದ್ದಲ್ಲದೆ ಭಾರತವಿರೋಧಿ ಶಕ್ತಿಗಳನ್ನು ಉತ್ತೇಜಿಸಿತು. ಶೇಖ್ ಅಬ್ದುಲ್ಲಾ ಸೆರೆಯಾದರು ಮತ್ತು ಅವರನ್ನು 11 ವರ್ಷಗಳ ಕಾಲ ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಾರಾಗೃಹದಲ್ಲಿಟ್ಟಿತ್ತು.
1990 ಮತ್ತು 1996ರ ಅವಧಿಯಲ್ಲಿ ಸರಾಸರಿ ವರ್ಷದಲ್ಲಿ 200 ದಿನಗಳ ಕಾಲ ಕಣಿವೆ ಕರ್ಫ್ಯೂನಲ್ಲಿಯೇ ಇತ್ತು. ಪುನರಾವಲೋಕನ ಮಾಡಿದಾಗ, ನೆಹರು ಅವರ ಭಾವನಾತ್ಮಕ ಬಾಂಧವ್ಯವು ಜಮ್ಮು ಮತ್ತು ಕಾಶ್ಮೀರದ ಬಗೆಗಿನ ವಸ್ತುನಿಷ್ಠ ಮೌಲ್ಯಮಾಪನವನ್ನು ಮರೆಮಾಡಿತು.
370ನೇ ವಿಧಿಯಿಂದ ಯಾರಿಗೆ ಲಾಭವಾಯಿತು? ಇದು ಅತ್ಯಂತ ನ್ಯಾಯಸಮ್ಮತವಾದ ಪ್ರಶ್ನೆ. ಭಾರತ ಸ್ವತಂತ್ರವಾದ 73 ವರ್ಷಗಳ ಬಳಿಕ ನಾವೆಲ್ಲರೂ ಇದನ್ನು ಕೇಳಲೇಬೇಕು. ನಿಸ್ಸಂಶಯವಾಗಿ ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಜನರಿಗೆ ಇದರಿಂದ ಪ್ರಯೋಜನವಾಗಿಲ್ಲ. ಪಹಾಡಿಗಳು, ಶಿಯಾ ಸಮುದಾಯ, ಗುಜ್ಜರ್‌ಗಳು, ಬಕ್ರ್ಕಾವಾಲರು, ಗದ್ದೀಗಳು ಇತರ ಪರಿಶಿಷ್ಟಪಂಗಡಗಳು, ಪರಿಶಿಷ್ಟಜಾತಿ ಮತ್ತು ಲಡಾಖ್ ಹಾಗೂ ಕಾರ್ಗಿಲ… ನಲ್ಲಿ ವಾಸಿಸುತ್ತಿರುವ ಜನರು ಈ ವಿಧಿಯಿಂದ ರೂಪಿಸಲಾದ ವ್ಯವಸ್ಥೆಯಿಂದ ಯಾವುದೇ ಪ್ರಯೋಜನವನ್ನು ಪಡೆಯಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಪರವಾಗಿದ್ದ ದೋಷಪೂರಿತ ವಿಧಾನದಿಂದಾಗಿ ಬಳಲುತ್ತಿದ್ದರು.
'ವಿಶೇಷ' ಸ್ವಾತಂತ್ರ್ಯ ದಿನಾಚರಣೆ: ಕಣಿವೆಯಲ್ಲಿ ತ್ರಿವರ್ಣ ಧ್ವಜಕ್ಕೆ ಉತ್ತುಂಗದ 'ಸ್ಥಾನಮಾನ'!
ಕೆಲ ಕುಟುಂಬಗಳಿಗಷ್ಟೇ ಲಾಭ!
ಜಮ್ಮು ಮತ್ತು ಕಾಶ್ಮೀರದ ಕೆಲವು ಕುಟುಂಬಗಳನ್ನು ಸೂಕ್ತವಾಗಿ ನಿಭಾಯಿಸಿದರೆ, ಇಡೀ ರಾಜ್ಯದ ಸಮಸ್ಯೆಗಳನ್ನು ನಿರ್ವಹಿಸಬಹುದು ಎಂಬ ಚಿಂತನೆ ನವದೆಹಲಿಯಲ್ಲಿತ್ತು. ಈ ಕೆಲವು ಕುಟುಂಬಗಳು ತಮ್ಮ ಅಧಿಕಾರವನ್ನು ಶಾಶ್ವತಗೊಳಿಸಿಕೊಳ್ಳಲು ತಮ್ಮ ನಿಯಂತ್ರಣವನ್ನು ಬಲಪಡಿಸಿಕೊಳ್ಳಲು, ಹೆಚ್ಚಿನ ಭ್ರಷ್ಟಾಚಾರಕ್ಕೆ 370ನೇ ವಿಧಿಯನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದರು. ಹೊಣೆಗಾರಿಕೆ ಪ್ರಶ್ನೆ ಬಂದಾಗ, ಅವರು 370ನೇ ವಿಧಿಯ ಹಿಂದೆ ಆಶ್ರಯ ಪಡೆಯುತ್ತಿದ್ದರು.
ಭ್ರಷ್ಟಾಚಾರ ಮತ್ತು ಅಧಿಕಾರದ ದುರ್ಬಳಕೆಗಾಗಿ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳಿಬ್ಬರ ವಿರುದ್ಧವೂ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೇರುವ ವಿಸ್ತಾರವಾದ ಕಾನೂನು ನಿಬಂಧನೆಗಳ- ಭ್ರಷ್ಟಾಚಾರ ನಿಗ್ರಹ ಕಾಯ್ದೆ- ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಅನ್ವಯಿಸುವುದಿಲ್ಲ ಎಂಬುದನ್ನು ಯಾರಾದರೂ ಹೇಗೆ ಸಮರ್ಥಿಸಲು ಸಾಧ್ಯ? ಶಿಕ್ಷಣದ ಹಕ್ಕು ಕಾಯಿದೆ, ಬಾಲ್ಯವಿವಾಹ ನಿಷೇಧ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಮತ್ತು ಮಲ ಹೊರುವುದನ್ನು ನಿಷೇಧಿಸುವ ಕಾಯಿದೆ ಇವು ಆ ರಾಜ್ಯಕ್ಕೆ ಏಕೆ ಅನ್ವಯವಾಗುವುದಿಲ್ಲ? 370ನೇ ವಿಧಿಯನ್ನು ರಾಜ್ಯದ ಜನರಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಿರಾಕರಿಸುವುದಕ್ಕೂ ದುರ್ಬಳಕೆ ಮಾಡಿಕೊಳ್ಳಲಾಗಿದೆ. ದೀರ್ಘಕಾಲದ ಬಳಿಕ ಜಮ್ಮು ಕಾಶ್ಮೀರದಲ್ಲಿ ನ್ಯಾಯಸಮ್ಮತವಾಗಿ ನಡೆದ ಚುನಾವಣೆಯೆಂದರೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಗಳಾಗಿದ್ದಾಗ ನಡೆದ ಚುನಾವಣೆ ಎಂಬುದನ್ನು ಜನ ಇನ್ನೂ ನೆನಪಿಸಿಕೊಳ್ಳುತ್ತಾರೆ.
ಸೇನಾ ಅಧಿಕಾರಿ ಉಮ್ಮರ್ ಫಯಾಜ್, ರೈಫಲ್ ಮ್ಯಾನ್ ಔರಂಗಜೇಬ್ ಮತ್ತಿತರರು ಹಲವು ಧೈರ್ಯಶಾಲಿ ಕಾಶ್ಮೀರಿ ಮುಸ್ಲಿಮರನ್ನು ಭಯೋತ್ಪಾದಕರು ಅತ್ಯಂತ ಹೇಯವಾಗಿ ಹತ್ಯೆ ಮಾಡಿದಾಗ 370ನೇ ವಿಧಿಯ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡುತ್ತಿದ್ದವರು ದಿವ್ಯಮೌನ ತಾಳಿದ್ದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲರಾದ ಜಗಮೋಹನ್ ತಮ್ಮ ಕೃತಿ ಋy ಊ್ಟಟ್ಢಛ್ಞಿ T್ಠ್ಟಚ್ಠ್ಝಿಛ್ಞ್ಚಿಛಿ ನಲ್ಲಿ ಕೆಲವೇ ಕೆಲವು ಕುಟುಂಬಗಳು ತಮ್ಮ ಲಾಭಕ್ಕಾಗಿ ರಾಜ್ಯದ ಬಹುಪಾಲು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಪಡೆದುಕೊಳ್ಳಲು ಮಾಡಿದ 370ನೇ ವಿಧಿಯ ದುರ್ಬಳಕೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಈ ಎಲ್ಲದರಿಂದಾಗಿ ರಾಜ್ಯವು ಗಣನೀಯ ಪ್ರಮಾಣದ ಆದಾಯವನ್ನು ಕಳೆದುಕೊಂಡಿತು. ಇದನ್ನು ಆರೋಗ್ಯ ಸೇವೆ ಮತ್ತು ಶಿಕ್ಷಣ ಇತ್ಯಾದಿಗೆ ಬಳಸಬಹುದಾಗಿತ್ತು.
ಜಮ್ಮುವಿನಲ್ಲಿ ನಿಷೇಧಾಜ್ಞೆ ಹಿಂಪಡೆತ: ಕಾಶ್ಮೀರದಲ್ಲಿ ಅವ್ಯಾಹತ!
ಕಾಶ್ಮೀರದ ಸಂವಿಧಾನದಲ್ಲಿ ಏನಿತ್ತು?
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಂವಿಧಾನ ರಚನಾ ಸಭೆ (constitute assembly) 1956ರಲ್ಲಿ ತನ್ನ ರಾಜ್ಯಕ್ಕೆ ಸಂವಿಧಾನ ಮಾಡಿಕೊಂಡಿದ್ದನ್ನು ನಾವು ಸ್ಮರಿಸಬಹುದು. ಅದರ ಭಾಗ 2,ವಿಧಿ 3ರ ಅನ್ವಯ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ ಮತ್ತು ಆಗಿರುತ್ತದೆ.
ಆ ಸಂವಿಧಾನದಲ್ಲಿ ಜಮ್ಮು ಕಾಶ್ಮೀರದ ಸ್ವಾಯತ್ತೆಗೆ ನಿರ್ದಿಷ್ಟಅವಕಾಶಗಳನ್ನು ನೀಡಲಾಗಿತ್ತು. ವಿಧಿ 147ರ ವಿಭಾಗ 12ರಲ್ಲಿ ಈ ಸಂವಿಧಾನದ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಅದರ ಸೆಕ್ಷನ್ 3ರ ನಿಬಂಧನೆ (ಜೆ ಮತ್ತು ಕೆ ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿರುತ್ತದೆ)ಯಲ್ಲಿ ಯಾವುದೇ ಬದಲಾವಣೆ ತರಲು ಬಯಸುವ ಯಾವುದೇ ವಿಧೇಯಕ ಅಥವಾ ತಿದ್ದುಪಡಿಯನ್ನು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆ, ಹೆಮ್ಮೆಯಿಂದ ಒಮ್ಮೆ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಘೋಷಿಸಿದ ಮೇಲೆ ಅದು ಬದಲಾವಣೆಯಾಗದ್ದಾಗಿದ್ದು, ಹಲವು ಸ್ವರೂಪದಲ್ಲಿ 370ನೇ ವಿಧಿ ತನ್ನ ಪ್ರಸ್ತುತತೆಯನ್ನೇ ಕಳೆದುಕೊಂಡಿತ್ತು.
370ನೇ ವಿಧಿಯನ್ನು ಉದ್ದೇಶಪೂರ್ವಕವಾಗಿ ತಾತ್ಕಾಲಿಕ ನಿಬಂಧನೆಯಾಗಿ ಉಳಿಸಿಕೊಳ್ಳಲಾಗಿತ್ತು ಎಂಬುದನ್ನು ಪ್ರಧಾನ ಮಂತ್ರಿಯವರು ಸರಿಯಾಗಿಯೇ ಗಮನಿಸಿದ್ದಾರೆ ಮತ್ತು ಇದನ್ನು ಬೆಂಬಲಿಸುವವರು ಏಕೆ ಅದನ್ನು ಕಾಯಂ ಮಾಡುವ ಧೈರ್ಯ ತೋರಲಿಲ್ಲ ಎಂದು ಕೇಳಿದ್ದಾರೆ. ಸಂವಿಧಾನ ರಚನಾ ಸಭೆಯು ಒಮ್ಮೆ ಸಂವಿಧಾನವನ್ನು ಜಾರಿಗೆ ತಂದ ಬಳಿಕ ಅದು ತನ್ನ ಉದ್ದೇಶವನ್ನು ಪೂರೈಸಿರುತ್ತದೆ ಮತ್ತು ರಾಜ್ಯ ಸಂವಿಧಾನದ 147ನೇ ವಿಧಿಯ ರೀತ್ಯ ಯಾವುದೇ ತಿದ್ದುಪಡಿಯನ್ನು ರಾಜ್ಯ ವಿಧಾನಸಭೆಗೆ ನೀಡಲಾಗುತ್ತದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ.
ಹೀಗಾಗಿ, ಈ ನಿಟ್ಟಿನಲ್ಲಿ, 370(3)ನೇ ವಿಧಿ ಅನ್ವಯ ಸಂವಿಧಾನ ರಚನಾ ಸಭೆಯನ್ನು ರಾಜ್ಯ ವಿಧಾನಸಭೆಯೆಂದೇ ಪರಿಗಣಿಸಬೇಕು ಮತ್ತು ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಕಾರಣ, ರಾಷ್ಟ್ರಪತಿಯವರ ಅಧಿಸೂಚನೆ ಸಂಪೂರ್ಣವಾಗಿ ಸಮರ್ಥನೀಯವಾಗಿದೆ ಮತ್ತು ಸಂಸತ್ತು ಭಾರತದ ಸಂವಿಧಾನದ 356(1) (ಬಿ) ವಿಧಿ ಅನ್ವಯ ತನ್ನ ಸಂವಿಧಾನಾತ್ಮಕ ಅಧಿಕಾರ ಚಲಾಯಿಸಿದೆ.
‘ಚಿದಂಬರಂ ಭೂಮಿ ಮೇಲಿನ ದೊಡ್ಡ ಹೊರೆ’ ಹುಟ್ಟೂರಲ್ಲೇ ಎಂಥಾ ಟೀಕಾಪ್ರಹಾರ
ಈಶಾನ್ಯ ರಾಜ್ಯಗಳಿಗೆ ಸಮಸ್ಯೆಯಿಲ್ಲ
ಸಂಸತ್ತಿನ ಉಭಯ ಸದನಗಳಲ್ಲಿ ನಡೆದ ಚರ್ಚೆಯ ವೇಳೆ, ಜಮ್ಮು ಮತ್ತು ಕಾಶ್ಮೀರದ ಎಲ್ಲ ವಲಯದ ಧ್ವನಿಯನ್ನೂ ಆಲಿಸಲಾಯಿತು. 370ನೇ ವಿಧಿಯನ್ನು ತೆಗೆದುಹಾಕುವ ಭರವಸೆಯನ್ನು ನೀಡಿದ್ದ ಬಿಜೆಪಿಗೆ ಭಾರತದ ಜನತೆ ಭರ್ಜರಿ ಜನಾದೇಶವನ್ನು ನೀಡಿದ್ದಾರೆ ಎಂದು ಈ ಅಂಶವನ್ನೂ ಒತ್ತಿ ಹೇಳಬೇಕಾಗುತ್ತದೆ.
ಈಶಾನ್ಯ ವಲಯ ಮತ್ತು ಬುಡಕಟ್ಟು ಪ್ರದೇಶಗಳ ಕಲ್ಯಾಣಕ್ಕಾಗಿ 370ರ ರೀತಿಯಲ್ಲೇ ಇರುವ ವಿಶೇಷ ನಿಬಂಧನೆಗಳನ್ನೂ ತೆಗೆದುಹಾಕಬೇಕು ಎಂಬಂಥ ವಾದಗಳಿಗೆ ಅರ್ಥವೇ ಇಲ್ಲ. 371 (ಎ)ರಿಂದ (ಜೆ) ವರೆಗಿನ ವಿಧಿಗಳು ವಿಶೇಷ ನಿಬಂಧನೆಗಳೇ ಹೊರತು ತಾತ್ಕಾಲಿಕ ನಿಬಂಧನೆಗಳಲ್ಲ ಮತ್ತು ಅವು ಹಾಗೆಯೇ ಇರುತ್ತವೆ.
ಹೊಸ ರಾಜ್ಯಗಳ ರಚನೆಯ ಬಳಿಕವೂ ವಿಶೇಷ ನಿಬಂಧನೆಗಳು, ನಿರ್ದಿಷ್ಟಪ್ರದೇಶದ ಅಥವಾ ನಿರ್ದಿಷ್ಟಬುಡಕಟ್ಟಿನ ಅಭಿವೃದ್ಧಿಗಾಗಿ ಹಾಗೆಯೇ ಅಂತರ್ಗತವಾಗಿರುತ್ತವೆ. ಈ ವಿಶೇಷ ನಿಬಂಧನೆಗಳು ಕಾಯಂ ಸ್ವರೂಪದ್ದಾಗಿವೆ.
ಕಾಶ್ಮೀರಿ ಮುಸ್ಲಿಮರಿಂದಲೇ ಮೆಚ್ಚುಗೆ
ಕಾಶ್ಮೀರ ಕಣಿವೆಯ ಮುಸ್ಲಿಂ ಯುವತಿಯರು ಹೊರ ರಾಜ್ಯದವರನ್ನು ಮದುವೆಯಾಗಿ, ತಮ್ಮ ಎಲ್ಲ ಹಕ್ಕು ಕಳೆದುಕೊಂಡಿರುವ ಹಲವು ಉದಾಹರಣೆಗಳಿವೆ. ಇತ್ತೀಚೆಗೆ, ನಾನು ಅಖಿಲ ಭಾರತೀಯ ಸೇವೆಯಲ್ಲಿರುವ ಜಮ್ಮುವಿನ ಯುವ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿದ್ದೆ. ಆಕೆ ಹಿಂದು. ಅವರು ತಮ್ಮ ತವರು ರಾಜ್ಯದ ಹೊರಗಿನ ನಾಗರಿಕ ಸೇವಾ ಅಧಿಕಾರಿಯನ್ನು ಮದುವೆಯಾದ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ತಮ್ಮ ಎಲ್ಲ ಹಕ್ಕು ಕಳೆದುಕೊಂಡಿದ್ದಾಗಿ ನನಗೆ ತಿಳಿಸಿದರು. ಒದ್ದೆಯಾದ ಕಣ್ಣುಗಳೊಂದಿಗೆ ಆಕೆ 370ನೇ ವಿಧಿ ರದ್ದು ಮಾಡುವ ಮೂಲಕ ತಮಗೆ ನ್ಯಾಯ ಒದಗಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಪಾಕಿಸ್ತಾನದಂತಹ ಮೂರ್ಖರ ಸ್ವರ್ಗದಲ್ಲಿ ಇರಬೇಡಿ: ಪಾಕ್ ಸಚಿವನ ಪಾಠ
ಪ್ರತ್ಯೇಕತಾವಾದಿಗಳಿಗೆ ಜಾಗವಿಲ್ಲ
ಭಾರತ ಸರ್ಕಾರದ ಅಭಿವೃದ್ಧಿ ಉಪಕ್ರಮಗಳೊಂದಿಗೆ ಇಂದು ಬಿಪಿಓಗಳು ಶ್ರೀನಗರ, ಸೊಪೋರ್, ಬುದ್ಗಾಮ್, ಭದೇರ್ವಾ ಮತ್ತು ಜಮ್ಮುವಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. 3158 ಸಾಮಾನ್ಯ ಸೇವಾ ಕೇಂದ್ರಗಳು ರಾಜ್ಯದಲ್ಲಿ ನಾಗರಿಕರಿಗೆ ಡಿಜಿಟಲ… ಸೇವೆಯನ್ನು ಒದಗಿಸುವ ಗವಾಕ್ಷಿಯಾಗಿ ಕಾರ್ಯಾಚರಣೆ ಮಾಡುತ್ತಿವೆ. ನಾನು ಯಾವಾಗ ಅವರನ್ನು ಭೇಟಿ ಮಾಡುತ್ತೇನೋ ಆಗ ಅವರ ಕಣ್ಣುಗಳಲ್ಲಿ ಹೊಳಪು ಕಾಣುತ್ತೇನೆ. ಬಾಲಕ-ಬಾಲಕಿಯರು, ತಮ್ಮ ಉಜ್ವಲ ಭವಿಷ್ಯಕ್ಕಾಗಿ ತಮಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರಕಬೇಕು ಎಂದು ಹೇಳುತ್ತಾರೆ.
ಖಂಡಿತವಾಗಿ, ಇದು ಜಮ್ಮು ಹಾಗೂ ಕಾಶ್ಮೀರದವನ್ನು ಒಳಗೊಂಡ ಅಭಿವೃದ್ಧಿಯ ನವೋದಯ. ಇದು ವಂಚಿತರಿಗೆ ಮತ್ತು ದುರ್ಬಲರಿಗೆ ಧ್ವನಿ ನೀಡುತ್ತದೆ. ನಿಸ್ಸಂಶಯವಾಗಿ, ಭಯೋತ್ಪಾದನೆಯ ಮತ್ತು ಪ್ರತ್ಯೇಕತಾವಾದದ ಪೋಷಕರು ಅಸಂತುಷ್ಟರಾಗುತ್ತಾರೆ. ಆದರೆ ಇದು ಖಂಡಿತವಾಗಿಯೂ ಅಂಥವರು ನೆಲೆ ಕಂಡುಕೊಳ್ಳುವ ಭಾರತ ಅಲ್ಲ.
ಶಿಕ್ಷಣದ ಹಕ್ಕು ಕಾಯಿದೆ, ಬಾಲ್ಯವಿವಾಹ ನಿಷೇಧ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಮತ್ತು ಮಲ ಹೊರುವುದನ್ನು ನಿಷೇಧಿಸುವ ಕಾಯಿದೆಗಳು ಜಮ್ಮು ಕಾಶ್ಮೀರಕ್ಕೆ ಏಕೆ ಅನ್ವಯವಾಗುತ್ತಿರಲಿಲ್ಲ? 370ನೇ ವಿಧಿಯನ್ನು ಆ ರಾಜ್ಯದ ಜನರಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಿರಾಕರಿಸುವುದಕ್ಕೂ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ವಿಧಿಯಿಂದ ಲಾಭವಾಗಿದ್ದು ಕೆಲ ರಾಜಕೀಯ ಮತ್ತು ಪಟ್ಟಭದ್ರ ಕುಟುಂಬಗಳಿಗೆ ಮಾತ್ರ.
- ರವಿಶಂಕರ್ ಪ್ರಸಾದ್
ಕೇಂದ್ರ ಕಾನೂನು ಮತ್ತು ನ್ಯಾಯ, ಸಂಪರ್ಕ ಮತ್ತು ವಿದ್ಯುನ್ಮಾನ, ಐಟಿ ಸಚಿವ