ಅಟಲ್, ಸಿಂಗ್, ದೇವೇಗೌಡರ ಮನೆ ತೆರವು ಭೀತಿ

Published : Jan 08, 2018, 10:13 AM ISTUpdated : Apr 11, 2018, 12:51 PM IST
ಅಟಲ್, ಸಿಂಗ್, ದೇವೇಗೌಡರ ಮನೆ ತೆರವು ಭೀತಿ

ಸಾರಾಂಶ

ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ ಸಿಂಗ್ ಹಾಗೂ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಹಾಗೂ ಪ್ರಣಬ್ ತಮಗೆ ದಿಲ್ಲಿಯಲ್ಲಿ ನೀಡಲಾಗಿರುವ ಅಧಿಕೃತ ಸರ್ಕಾರಿ ಬಂಗಲೆ ತೆರವುಗೊಳಿಸಬೇಕಾಗಬಹುದು.

ನವದೆಹಲಿ: ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ ಸಿಂಗ್ ಹಾಗೂ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಹಾಗೂ ಪ್ರಣಬ್ ತಮಗೆ ದಿಲ್ಲಿಯಲ್ಲಿ ನೀಡಲಾಗಿರುವ ಅಧಿಕೃತ ಸರ್ಕಾರಿ ಬಂಗಲೆ ತೆರವುಗೊಳಿಸಬೇಕಾಗಬಹುದು.

ಸುಪ್ರೀಂ ಕೋರ್ಟ್‌ಗೆ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಅವರು ಈ ಕುರಿತು ವರದಿ ಸಲ್ಲಿಸಿದ್ದು, ವರದಿಯನ್ನು ಕೋರ್ಟು ಒಪ್ಪಿಕೊಂಡು ಆದೇಶ ಹೊರಡಿಸಿದರೆ ಬಂಗಲೆಯನ್ನು ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳು ತೆರವು ಮಾಡಬೇಕಾಗಿ ಬರಬಹುದು ಎಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ವರ್ಷ ಆಗಸ್ಟ್ 23ರಂದು ರಂಜನ್ ಗೊಗೋಯ್ ಮತ್ತು ನವೀನ್ ಸಿನ್ಹಾ ಅವರು ಗೋಪಾಲ್ ಸುಬ್ರಮಣಿಯಂ ಅವರನ್ನು ನ್ಯಾಯಾಲಯದ ಸಲಹೆಗಾರರೆಂದು ನೇಮಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ‘ಲೋಕ ಪ್ರಹರಿ’ ಎಂಬ ಎನ್‌ಜಿಒ, ಅತಿಗಣ್ಯ ಮಾಜಿಗಳಿಗೆ ಸರ್ಕಾರಿ ಬಂಗಲೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಈ ಕ್ರಮ ಜರುಗಿಸಿತ್ತು.

‘ಉಚ್ಚ ಸಾಂವಿ ಧಾನಿಕ ಹುದ್ದೆ ಯಲ್ಲಿದ್ದ ವ್ಯಕ್ತಿಗಳು ಅಧಿಕಾರ ಕಳೆದು ಕೊಂಡ ಬಳಿಕ ಸಾಮಾನ್ಯ ಖಾಸಗಿ ನಾಗರಿಕರೇ ಆಗುತ್ತಾರೆ. ಹುದ್ದೆಯಲ್ಲಿದ್ದಾಗ ಇರುವ ಸವಲತ್ತುಗಳನ್ನು ಪದತ್ಯಾಗದ ಬಳಿಕ ಕಳೆದುಕೊಳ್ಳುತ್ತಾರೆ.

ಹೀಗಾಗಿ ಅವರಿಗೆ ಅಧಿಕೃತ ಬಂಗಲೆ ನೀಡುವ ಅಗತ್ಯವಿಲ್ಲ’ ಎಂದು ಸುಬ್ರಮಣಿಯಂ ಅವರು ವರದಿಯಲ್ಲಿ ಹೇಳಿದ್ದಾರೆ. ಹೀಗಾಗಿ ಕೋರ್ಟು ಸುಬ್ರಮಣಿಯಂ ಅವರ ವರದಿ ಅಂಗೀಕರಿಸಿದರೆ ದೇವೇಗೌಡರು ಸೇರಿದಂತೆ ಮಾಜಿ ಪ್ರಧಾನಿಗಳು ಹಾಗೂ ಮಾಜಿ ರಾಷ್ಟ್ರಪತಿಗಳು ಬಂಗಲೆ ಕಳೆದುಕೊಳ್ಳುವ ಸಂಭವವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆತಂಕಕಾರಿ ಹಂತಕ್ಕೆ ದೆಹಲಿ ಹವೆ: 430ರ ಗಡಿ ದಾಟಿದ ವಾಯು ಗುಣಮಟ್ಟ ಸೂಚ್ಯಂಕ: ವಾರದಲ್ಲಿ ಕೆಲವೇ ದಿನ ಮಕ್ಕಳಿಗೆ ಶಾಲೆ
ಈ 6 ದೇಶಗಳಲ್ಲಿ ‘ಧುರಂಧರ್’ ಬ್ಯಾನ್; ಆದ್ರೂ ಕಲೆಕ್ಷನ್‌ಗೆ ಸ್ವಲ್ಪವೂ ಹೊಡೆತವಿಲ್ಲ, ಅದು ಹೇಗೆ..!