
ನವದೆಹಲಿ[ಏ. 19] ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿವರ್ಷ ಕುರ್ತಾ,ಸಿಹಿತಿಂಡಿಯನ್ನು ನನಗೆ ಉಡುಗೊರೆಯನ್ನಾಗಿ ಕಳಿಸುತ್ತಾರೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ನಡೆದ ರಾಜಕಿಯೇತರ ಸಂದರ್ಶನದ ವೇಳೆ ಮೋದಿ ನೀಡಿದ್ದ ಹೇಳಿಕೆಯ ನಂತರದ ಘಟನಾವಳಿಗಳಿಗೆ ರಾಜಕಾರಣದ ವಾಸನೆ ಬಡಿದುಕೊಂಡಿದೆ.
ಮೋದಿ ಕಾಲೆಳೆಯಲು ರಮ್ಯಾ ಬಳಸಿದ್ದ ಹಿಟ್ಲರ್ ಪೋಟೋದ ಅಸಲಿ ಕತೆ ಇಲ್ಲಿದೆ!
ನಾನು ಪಶ್ಚಿಮ ಮಂಗಾಳದ ಮಣ್ಣಿನಿಂದ ತಯಾರಿಸಿದ್ದ ರಸಗುಲ್ಲಾ ಕಳುಹಿಸಬಲ್ಲೆ, ಆದರೆ ಎಂದಿಗೂ ಬಿಜೆಪಿ ಪರವಾಗಿ ನಿಲ್ಲಲಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ, ಪಶ್ಚಿಮ ಬಂಗಾಳ ಮಹಾನ್ ಚೇತನಗಳ ಹುಟ್ಟಿಗೆ ಕಾರಣವಾದ ನಾಡು. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಸಾಧನೆಯ ನಾಡು. ಅಲ್ಲಿಯ ಮಣ್ಣು ಮತ್ತು ಕಲ್ಲಿನಿಂದ ತಯಾರಿಸಿದ ರಸಗುಲ್ಲಾವನ್ನು ಪ್ರಸಾದದ ರೀತಿ ಸ್ವೀಖರಿಸುತ್ತೇನೆ ಎಂದು ಹೇಳಿದ್ದಾರೆ.
ಒಂದು ಕಡೆ ಮಮತಾ ಬ್ಯಾನರ್ಜಿಗೆ ಭರ್ಜರಿ ತಿರುಗೇಟು ನೀಡಿದ್ದರೆ ಇನ್ನೊಂದು ಕಡೆ ಪಶ್ಚಿಮ ಬಂಗಾಳ ನೆಲವನ್ನು ಕೊಂಡಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.