ಬಾಬರಿ ಮಸೀದಿ ವಿವಾದವನ್ನು ಸುಪ್ರೀಂ ಕೋರ್ಟ್ ಬಗೆಹರಿಸಲಿ: ಮುಸ್ಲಿಮ್ ಮಂಡಳಿ

Published : Apr 16, 2017, 11:04 AM ISTUpdated : Apr 11, 2018, 01:11 PM IST
ಬಾಬರಿ ಮಸೀದಿ ವಿವಾದವನ್ನು ಸುಪ್ರೀಂ ಕೋರ್ಟ್ ಬಗೆಹರಿಸಲಿ: ಮುಸ್ಲಿಮ್ ಮಂಡಳಿ

ಸಾರಾಂಶ

ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನ ವಲೀ ರಹ್ಮಾನಿ, ಬಾಬರಿ ಮಸೀದಿ- ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಮುಸ್ಲಿಮ್ ಸಮುದಾಯವು ಸ್ವಾಗತಿಸುವುದಾಗಿ ಹೇಳಿದ್ದಾರೆ.

ನವದೆಹಲಿ (ಏ.16): ಬಾಬರಿ ಮಸೀದಿ- ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ, ಸುಪ್ರೀಂ ಕೋರ್ಟ್ ತೀರ್ಪನ್ನು ಮುಸ್ಲಿಮ್ ಸಮುದಾಯವು ಸ್ವಾಗತಿಸುವುದಾಗಿ ಅಖಿಲ ಭಾರತೀಯ ಮುಸ್ಲಿಮ್ ವೈಯುಕ್ತಿಕ ಕಾನೂನು ಮಂಡಳಿ (ಏಐಎಂಪಿಎಲ್’ಬಿ) ಪುನಾರವರ್ತಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನ ವಲೀ ರಹ್ಮಾನಿ, ಬಾಬರಿ ಮಸೀದಿ- ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಮುಸ್ಲಿಮ್ ಸಮುದಾಯವು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಈ ಹಿಂದೆ ಬಾಬರಿ ಮಸೀದಿ- ರಾಮಮಂದಿರ ವಿವಾದವನ್ನು ಕಕ್ಷಿದಾರರು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು.

ತ್ರಿವಳಿ ತಲಾಖ್ ಪದ್ದತಿಯ ಬಗ್ಗೆ ಜನಜಾಗೃತಿಯನ್ನುಂಟು ಮಾಡಲಾಗುತ್ತಿದೆ, ಯಾವುದೇ ಕಾರಣವಿಲ್ಲದೇ ತ್ರಿವಳಿ ತಲಾಖ್ ದುರ್ಬಳಕೆ  ಮಾಡುವವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುವುದೆಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ