ಅಮೆರಿಕಾ ಗುಪ್ತಚರ ಸಂಸ್ಥೆಯಿಂದ ಆಧಾರ್ ಮಾಹಿತಿ ಕಳುವು? ವಿಕಿಲೀಕ್ಸ್'ನಿಂದ ಸ್ಫೋಟಕ ಮಾಹಿತಿ

Published : Aug 26, 2017, 08:16 PM ISTUpdated : Apr 11, 2018, 12:40 PM IST
ಅಮೆರಿಕಾ ಗುಪ್ತಚರ ಸಂಸ್ಥೆಯಿಂದ ಆಧಾರ್ ಮಾಹಿತಿ ಕಳುವು? ವಿಕಿಲೀಕ್ಸ್'ನಿಂದ ಸ್ಫೋಟಕ ಮಾಹಿತಿ

ಸಾರಾಂಶ

ಆಧಾರ್ ಬಗ್ಗೆ ಪರ-ವಿರೊಧ ಚರ್ಚೆಗಳು ನಡೆಯುತ್ತಿರುವಾಗಲೇ ವಿಕಿಲೀಕ್ಸ್ ಸ್ಫೋಟಕ ವಿಷಯವನ್ನು ಬಹಿರಂಗಪಡಿಸಿದೆ. ಬೇಹುಗಾರಿಕಾ ತಂತ್ರಜ್ಞಾನಗಳನ್ನು ಬಳಸಿ ಅಮೆರಿಕಾದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಿಲೆಜೆನ್ಸ್ ಏಜನ್ಸಿಯು (CIA) ಭಾರತೀಯರ ಆಧಾರ್ ವಿವರಗಳನ್ನು ಪಡೆದಿದೆ ಎಂದು ಹೇಳಲಾಗಿದೆ.

ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ಎಂಬ ಸಂಸ್ಥೆಯು ಅಬಿವೃದ್ಧಿಪಡಿಸಿರುವ ತಂತ್ರಜ್ಞಾನವನ್ನು ಸಿಐಏಯು ಬಳಸುತ್ತಿದೆ. ಆಘಾತಕಾರಿ ವಿಷಯವೆಂದರೇ, ಅದೇ ಸಂಸ್ಥೆ ಭಾರತದ ಆಧಾರ್ ಯೋಜನೆಗೆ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಒದಗಿಸಿದೆ. ಆದುದರಿಂದ ಭಾರತೀಯರ ಆಧಾರ್ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗಿದೆ.

ಭಾರತೀಯರ ಆಧಾರ್ ಮಾಹಿತಿಯನ್ನು ಸಿಐಏ ಕಳುವು ಮಾಡಿದೆಯೇ? ಎಂದು ವಿಕಿಲೀಕ್ಸ್ ಶುಕ್ರವಾರ ಟ್ವೀಟಿಸಿ ಲೇಖನವೊಂದರ ಕೊಂಡಿಯನ್ನು ಪೋಸ್ಟ್ ಮಾಡಿದೆ.  ಇನ್ನೊಂದು ಟ್ವೀಟಿನಲ್ಲಿ, 'ಬೇಹುಗಾರರ ಕೈಯಲ್ಲಿ ಆಧಾರ್' ಎಂಬ ಲೇಖನವನ್ನು ಪೋಸ್ಟ್ ಮಾಡಿದೆ.

ಆದರೆ ಈ ವರದಿಗಳನ್ನು ಆಧಾರರಹಿತವೆಂದು ಸರ್ಕಾರವು ಹೇಳಿದೆಯೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.  ಈ ವರದಿಗಳಿಗೆ ಯಾವುದೇ ಆಧಾರವಿಲ್ಲ. ಆಧಾರ್ ಮಾಹಿತಿಯು ಸುರಕ್ಷಿತವಾಗಿದೆ. ಯಾರೂ ಅದನ್ನು ಪಡೆಯುವ ಹಾಗಿಲ್ಲವೆಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?