ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಮಾರ್ಚ್‌ನಿಂದ ವೈಫೈ

By Suvarna Web DeskFirst Published Oct 13, 2017, 12:51 PM IST
Highlights

ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ ನೀಡಿರುವ ಉಚಿತ ವೈಫೈ ಸೇವೆ ಮಾರ್ಚ್‌ನಿಂದ ರಾಜ್ಯಾದ್ಯಂತ ವಿಸ್ತರಣೆ ಮಾಡಲಿದ್ದೇವೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.

ದಾವಣಗೆರೆ: ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ ನೀಡಿರುವ ಉಚಿತ ವೈಫೈ ಸೇವೆ ಮಾರ್ಚ್‌ನಿಂದ ರಾಜ್ಯಾದ್ಯಂತ ವಿಸ್ತರಣೆ ಮಾಡಲಿದ್ದೇವೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.

ಈಗಾಗಲೇ ಕೆಲ ಕಡೆ ಪ್ರಾಯೋಗಿಕವಾಗಿ ವೈಫೈ ಸೇವೆಯನ್ನು ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಒದಗಿಸಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಯಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

Latest Videos

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಐಟಿ ಕಂಪನಿಗೆ ವೈಫೈ ಸೇವೆ ಕಲ್ಪಿಸಲು ಟೆಂಡರ್ ನೀಡಿದ್ದು, 200 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಮಾರ್ಚ್ ತಿಂಗಳಿನಿಂದ ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದರು.

ಅವಕಾಶ ಇದ್ದರೆ ಪುತ್ರನೂ ಸ್ಪರ್ಧೆ: ರಾಜಕಾರಣಕ್ಕೆ ಬರುವವರೆಲ್ಲ ಸನ್ಯಾಸಿಗಳಲ್ಲ. ಅಧಿಕಾರದ ಆಸೆ ಸಹಜವಾಗಿಯೇ ಎಲ್ಲರನ್ನೂ ಇರುತ್ತದೆ. ಮುಂದಿನ ದಿನಗಳಲ್ಲಿ ತಮ್ಮ ಪುತ್ರನೂ ರಾಜಕಾರಣಕ್ಕೆ ಬರಬಹುದು ಎಂದು ರೇವಣ್ಣ ಹೇಳಿದರು.

 

click me!