ಹಳಿ ತಪ್ಪಿದ ‘ವಯಸ್ಕ ಪ್ರೇಮ’ ಪ್ರಸಂಗ: ಅಕ್ರಮ ಸಂಬಂಧ ಆಕ್ಷೇಪಿಸಿದ ಪತಿ ಹತ್ಯೆಗೆ ಪತ್ನಿ ಸಂಚು!

Published : Sep 14, 2017, 01:07 PM ISTUpdated : Apr 11, 2018, 12:56 PM IST
ಹಳಿ ತಪ್ಪಿದ ‘ವಯಸ್ಕ ಪ್ರೇಮ’ ಪ್ರಸಂಗ: ಅಕ್ರಮ ಸಂಬಂಧ ಆಕ್ಷೇಪಿಸಿದ ಪತಿ ಹತ್ಯೆಗೆ ಪತ್ನಿ ಸಂಚು!

ಸಾರಾಂಶ

ತನ್ನ ಅಕ್ರಮ ಸಂಬಂಧ ಆಕ್ಷೇಪಿಸಿದ್ದ ಎಂದು ಕೋಪಗೊಂಡ ಮಹಿಳೆಯೊಬ್ಬರು, ಪ್ರಿಯಕರ ಜತೆ ಸೇರಿ ಪತಿ ಹತ್ಯೆಗೆ ಸಂಚು ರೂಪಿಸಿ ಈಗ ಜ್ಞಾನಭಾರತಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜ್ಯೋತಿನಗರದ ಜಿ.ಎಸ್. ಶೈಲಜಾ(42) ಹಾಗೂ ಆಕೆ ಪ್ರಿಯಕರ ಆನಂದ್(50) ಬಂಧಿತರು. ಕೆಲ ದಿನಗಳ ಹಿಂದೆ ಊಟದಲ್ಲಿ ವಿಷ ಮಿಶ್ರಣ ಮಾಡಿ ಪತಿ ಪ್ರಸನ್ನ ಕುಮಾರ್ ಹತ್ಯೆಗೆ ಶೈಲಜಾ ಸಂಚು ರೂಪಿಸಿದ್ದರು. ಆದರೆ ಪತ್ನಿ ಮೇಲೆ ಅನುಮಾನಗೊಂಡಿದ್ದ ಅವರು, ಈ ಬಗ್ಗೆ ನೀಡಿದ ದೂರಿನ್ವಯ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು: ತನ್ನ ಅಕ್ರಮ ಸಂಬಂಧ ಆಕ್ಷೇಪಿಸಿದ್ದ ಎಂದು ಕೋಪಗೊಂಡ ಮಹಿಳೆಯೊಬ್ಬರು, ಪ್ರಿಯಕರ ಜತೆ ಸೇರಿ ಪತಿ ಹತ್ಯೆಗೆ ಸಂಚು ರೂಪಿಸಿ ಈಗ ಜ್ಞಾನಭಾರತಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜ್ಯೋತಿನಗರದ ಜಿ.ಎಸ್. ಶೈಲಜಾ(42) ಹಾಗೂ ಆಕೆ ಪ್ರಿಯಕರ ಆನಂದ್(50) ಬಂಧಿತರು. ಕೆಲ ದಿನಗಳ ಹಿಂದೆ ಊಟದಲ್ಲಿ ವಿಷ ಮಿಶ್ರಣ ಮಾಡಿ ಪತಿ ಪ್ರಸನ್ನ ಕುಮಾರ್ ಹತ್ಯೆಗೆ ಶೈಲಜಾ ಸಂಚು ರೂಪಿಸಿದ್ದರು. ಆದರೆ ಪತ್ನಿ ಮೇಲೆ ಅನುಮಾನಗೊಂಡಿದ್ದ ಅವರು, ಈ ಬಗ್ಗೆ ನೀಡಿದ ದೂರಿನ್ವಯ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಆಯಿಲ್ ವ್ಯಾಪಾರಿ ಪ್ರಸನ್ನಕುಮಾರ್ ಹಾಗೂ ಶೈಲಜಾ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜ್ಯೋತಿ ನಗರದಲ್ಲಿ ಪ್ರಸನ್ನ ಕುಮಾರ್ ಕುಟುಂಬ ನೆಲೆಸಿದೆ.

ಐದು ವರ್ಷಗಳ ಹಿಂದೆ ಶೈಲಜಾ ಅವರಿಗೆ ಆನಂದ್ ಜತೆ ಗೆಳೆತನವಾಗಿದ್ದು, ಕ್ರಮೇಣ ಅವರಲ್ಲಿ ಆತ್ಮೀಯತೆ ಮೂಡಿಸಿದೆ. ಅಷ್ಟರಲ್ಲಿ ಈ ಸ್ನೇಹದ ಮಾಹಿತಿ ಪಡೆದ ಪ್ರಸನ್ನ ಕುಮಾರ್, ಪತ್ನಿಗೆ ಆನಂದ್ ಜತೆ ಸಂಪರ್ಕ ಕಡಿದುಕೊಳ್ಳುವಂತೆ ತಾಕೀತು ಮಾಡಿದ್ದರು. ಇದೇ ವಿಷಯವಾಗಿ ಸತಿ-ಪತಿ ಮಧ್ಯೆ ಜಗಳವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಲಾಟೆ ವಿಷಯ ತಿಳಿದ ಆನಂದ್, ಮೂರು ತಿಂಗಳ ಹಿಂದೆ ಉಲ್ಲಾಳು ಮುಖ್ಯರಸ್ತೆಯ ಕೂಲ್ ಪಾಯಿಂಟ್ ಹೋಟೆಲ್ ಬಳಿ ಪ್ರಸನ್ನ ಕುಮಾರ್ ಮೇಲೆ ಆನಂದ್ ಹಲ್ಲೆ ನಡೆಸಿದ್ದ. ಈ ಸಂಬಂಧ ಪೊಲೀಸರಿಗೆ ಪ್ರಸನ್ನ ದೂರು ನೀಡಿದ್ದರು. ಆಗ ಠಾಣೆಗೆ ಆನಂದ್ ಹಾಗೂ ಶೈಲಜಾ ಅವರನ್ನು ಕರೆಸಿದ ಪೊಲೀಸರು, ಅವರಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕೊಂಡು ಕಳುಹಿಸಿದ್ದರು. ಇದಾದ ನಂತರ ಆಗಸ್ಟ್ 29ರಂದು ಸಂಜೆ ನನ್ನ ಕೊಲೆ ಸಂಚು ರೂಪಿಸುವ ಸಂಬಂಧ ಆನಂದ್ ಜತೆ ಶೈಲಜಾ ಮೊಬೈಲ್ ಸಂಭಾಷಣೆ ಆಡಿಯೋ ಸಿಕ್ಕಿತು.

ಅವರಿಬ್ಬರು ಊಟದಲ್ಲಿ ವಿಷ ಮಿಶ್ರಣ ಕೊಲ್ಲುವ ಸಂಚು ರೂಪಿಸಿದ್ದರು. ಕೂಡಲೇ ಜಾಗ್ರತಗೊಂಡು ಪೊಲೀಸರಿಗೆ ದೂರು ನೀಡಿದ್ದಾಗಿ ಪ್ರಸನ್ನ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೊಬೈಲ್ ರೆಕಾರ್ಡ್ ರಹಸ್ಯ: ತಮ್ಮ ಪತ್ನಿ ಶೈಲಜಾ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಆನಂದ್ ನಡುವಿನ ‘ವಯಸ್ಕ ಪ್ರೇಮ’ ಪ್ರಸಂಗವನ್ನು ಪ್ರಸನ್ನ ಪತ್ತೆ ಹಚ್ಚಿದ್ದು ರೋಚಕ ವಾಗಿದೆ. ಶೈಲಜಾ ಅವರು ತಮ್ಮ ಮಕ್ಕಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಆನಂದ್ ಪರಿಚಯವಾಗಿದೆ. ಆದರೆ ಈ ಸ್ನೇಹದ ಬಗ್ಗೆ ಶೈಲಜಾ ಪೋಷಕರಿಗೂ ಪ್ರಸನ್ನಕುಮಾರ್ ಹೇಳಿದರೂ ಯಾರೂ ನಂಬಲಿಲ್ಲ. ಇದರಿಂದ ಬೇಸರಗೊಂಡ ಅವರು, ಸಾಕ್ಷಿ ಸಮೇತ ಪ್ರೇಮ ಪ್ರಣಯ ಸಾಬೀತಪಡಿಸಲು ಮುಂದಾದರು.

ಆಗ ಪತ್ನಿಗೆ ತಿಳಿಯದೆ ಅವರ ಮೊಬೈಲ್‌ಗೆ ಸಂಭಾಷಣೆ ರೆಕಾರ್ಡ್ ಮಾಡಿಕೊಂಡಿದ್ದರು. ಹೀಗೆ ಶೈಲಜಾ ಹಾಗೂ ಆನಂದ್ ಮಾತನಾಡುವ ವೇಳೆ ಪ್ರಸನ್ನ ಕುಮಾರ್‌ಗೆ ಒಂದು ಗತಿ ಕಾಣಿಸಬೇಕು ಎಂದು ಹೇಳಿಕೊಂಡಿದ್ದರು. ಈ ಮಾಹಿತಿಯನ್ನು ಪೊಲೀಸರು ಹಾಗೂ ಕುಟುಂಬದವರಿಗೆ ಪತ್ನಿ ವಿರುದ್ಧ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.

(ಸಾಂದರ್ಭಿಕ ಚಿತ್ರ)

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿ ಗಲಭೆ: ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿ 10ಕ್ಕೂ ಹೆಚ್ಚು ಜನರ ವಿರುದ್ಧ FIR
ಗಾಲಿ ರೆಡ್ಡಿ ವಿರುದ್ಧ FIR ಆಗುವವರೆಗೂ ಸ್ಥಳ ಬಿಟ್ಟು ಹೋಗಲ್ಲ ಎಂದ ಭರತ್ ರೆಡ್ಡಿ: ಒಂದೇ ಸಮಯಕ್ಕೆ ಇಬ್ಬರು ನಾಯಕರ ಸುದ್ದಿಗೋಷ್ಠಿ