
ನವದೆಹಲಿ(ಸೆ.14): ವೈವಾಹಿಕ ಸಮಸ್ಯೆಗಳು ಮತ್ತು ಇತರೆ ವಿಚಾರಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರ ವಿವಾಹಗಳ ನೋಂದಣಿಗೆ ಆಧಾರ್ ಕಡ್ಡಾಯಗೊಳಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಎನ್‌ಆರ್'ಐ ಪತಿಗಳಿಂದ ಅನ್ಯಾಯಕ್ಕೊಳಗಾಗುವ ಅಥವಾ ಆಂತರಿಕ ಹಿಂಸಾಚಾರದ ಸಂತ್ರಸ್ತೆ ಮತ್ತು ವಿದೇಶಗಳಲ್ಲಿ ವರದಕ್ಷಿಣೆ ಕಿರುಕುಳದಿಂದ ರಕ್ಷಿಸುವ ನಿಟ್ಟಿನಲ್ಲಿ ಭಾರತೀಯ ಪಾಸ್'ಪೋರ್ಟ್ ಹೋಲ್ಡರ್'ಗಳ ಮೇಲಿನ ವಿಶೇಷ ಸಮಿತಿ ಈ ಪ್ರಸ್ತಾವನೆ ಸಲ್ಲಿಸಿದೆ.
ಕೇಂದ್ರ ಸರ್ಕಾರ ಆಧಾರ್ ಕಡ್ಡಾಯ ಮಾಡುತ್ತಿರುವ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್'ನಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಕಳೆದ ತಿಂಗಳು ಸರ್ವೊಚ್ಚ ನ್ಯಾಯಾಲಯ ಖಾಸಗಿತನದ ಹಕ್ಕು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸರ್ವಾನುಮತದಿಂದ ತೀರ್ಪನ್ನು ನೀಡಿತ್ತು. ಇದೀಗ ಆಧಾರ್ ಕಡ್ಡಾಯ ಮಾಡುವುದರಿಂದ ವ್ಯಕ್ತಿಯ ಖಾಸಗೀತನ ಉಲ್ಲಂಘನೆಯಾಗುತ್ತಿದೆಯೇ ಎನ್ನುವುದರ ಕುರಿತಂತೆ ಸುಪ್ರೀಂ ಕೋರ್ಟ್'ನ ತ್ರಿ ಸದಸ್ಯ ಪೀಠ ನವೆಂಬರ್'ನಲ್ಲಿ ತೀರ್ಪು ನೀಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.