ಪತಿಯಿಂದಲೇ ಬಲವಂತದ ಲೈಂಗಿಕ ಕ್ರಿಯೆ: ದೂರು

Published : Jun 18, 2017, 10:24 AM ISTUpdated : Apr 11, 2018, 12:36 PM IST
ಪತಿಯಿಂದಲೇ ಬಲವಂತದ ಲೈಂಗಿಕ ಕ್ರಿಯೆ: ದೂರು

ಸಾರಾಂಶ

ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವಿನ ಕಲಹವು ವಿಚಿತ್ರ ತಿರುವು ಪಡೆದುಕೊಂಡಿದ್ದು, ‘ಪತಿ ನನ್ನೊಂದಿಗೆ ಬಲವಂತದ ಲೈಂಗಿಕ ಕ್ರಿಯೆ' ನಡೆಸಿದ್ದಾರೆ ಎಂದು ಆರೋಪಿಸಿ 35 ವರ್ಷದ ಮಹಿಳೆಯೊಬ್ಬರು ಭಾರತಿ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವಿನ ಕಲಹವು ವಿಚಿತ್ರ ತಿರುವು ಪಡೆದುಕೊಂಡಿದ್ದು, ‘ಪತಿ ನನ್ನೊಂದಿಗೆ ಬಲವಂತದ ಲೈಂಗಿಕ ಕ್ರಿಯೆ' ನಡೆಸಿದ್ದಾರೆ ಎಂದು ಆರೋಪಿಸಿ 35 ವರ್ಷದ ಮಹಿಳೆಯೊಬ್ಬರು ಭಾರತಿ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಇದರೊಂದಿಗೆ ಎರಡು ವರ್ಷದ ಹಿಂದೆ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತು ಜೈಲು ಸೇರಿದ್ದ ಆತ, ಈಗ ಮತ್ತೊಂದು ಸಂಕಷ್ಟಎದುರಾಗಿದೆ. ಮಹಿಳೆ ನೀಡಿದ ದೂರು ಆಧಾರಿಸಿ ಪೊಲೀಸರು ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಮುಂದಿನ ಕ್ರಮಕ್ಕೆ ಕಾನೂನು ತಜ್ಞರ ಅಭಿಪ್ರಾಯ ಕೇಳಿದ್ದಾರೆ.

ನಾಟಕೀಯ ಬೆಳವಣಿಗೆ: ತಾನು ದುಷ್ಕರ್ಮಿ ಗಳಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ದೂರುದಾರ ಮಹಿಳೆಯು ಶುಕ್ರವಾರ ಸಂಜೆ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಕೂಡಲೇ ಭಾರತಿನಗರ ಠಾಣೆ ಪೊಲೀಸರು, ಆಸ್ಪತ್ರೆಗೆ ಧಾವಿಸಿ ಸಂತ್ರಸ್ತೆಯನ್ನು ವಿಚಾರಣೆ ನಡೆಸಿದರು. ಮೊದಲು ಕೆ.ಆರ್‌.ಪುರದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು ಎಂದು ಆಕೆ, ಇದಾದ ಕೆಲ ಹೊತ್ತಿನ ಬಳಿಕ ಹೇಳಿಕೆ ಬದಲಿಸಿ ‘ಅತ್ಯಾಚಾರ ನಡೆದಿದ್ದು ರಾಮಮೂರ್ತಿ ನಗರದಲ್ಲಿ ಎಂದರು. ಈ ವಿಚಾರವು ಕೆ.ಆರ್‌.ಪುರ ಠಾಣೆ ಪೊಲೀಸರು ಆಸ್ಪತ್ರೆ ಆಗಮಿಸಿದ್ದರು. ತದನಂತರ ಜಂಬೂ ಸವಾರಿ ದಿಣ್ಣೆಯಲ್ಲಿ ನಾಲ್ವರು ಅಪರಿಚಿತ ಯುವಕರು ಅಡ್ಡಗಟ್ಟಿಅತ್ಯಾಚಾರ ಎಸಗಿದರು. ಇದಕ್ಕೆ ಪ್ರತಿರೋಧ ತೋರಿದ್ದಕ್ಕೆ ಸಿಗರೇಟಿನಿಂದ ದೇಹದ ವಿವಿಧೆಡೆ ಸುಟ್ಟರು ಎಂದು ಆಕೆ ದೂರಿದ್ದರು.

ಹೀಗೆ ಅವರು ಪದೇ ಪದೇ ಹೇಳಿಕೆ ಬದಲಿ ಸುತ್ತಿದ್ದರಿಂದ ಪೊಲೀಸರು ಗೊಂದಲಕ್ಕೀಡಾ ದರು. ಅಂತಿಮವಾಗಿ ಮಹಿಳಾ ಸಿಬ್ಬಂದಿ ಹೆಚ್ಚಿನ ವಿಚಾರಣೆ ಒಳಪಡಿಸಿದಾಗ ‘ನನ್ನ ಗಂಡ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದರು. ಅವರ ವಿರುದ್ಧ ಕ್ರಮ ಜರುಗಿಸಿ' ಎಂದರು. ಹಾಗೆಯೇ ದೂರನ್ನು ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನವಿಡೀ ಗೊಂದಲಕಾರಿ ಹೇಳಿಕೆಗಳಿಂದ ಕೆ.ಆರ್‌.ಪುರ, ಭಾರತಿನಗರ ಹಾಗೂ ರಾಮಮೂರ್ತಿ ನಗರ ಠಾಣೆ ಪೊಲೀಸರ ತಲೆ ನೋವು ತಂದಿತ್ತು. ಕೊನೆಗೆ ವೈದ್ಯರು, ದೂರುದಾರ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗುತ್ತಿಲ್ಲ ಎಂದು ಹೇಳಿದ ಬಳಿಕವಷ್ಟೆಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ