ತಾಜ್ ಮಹಲ್ ನಮ್ಮ ಸಂಸ್ಕೃತಿ ಅಲ್ಲ ಎನ್ನುವುದಾದರೆ ಅದರ ದಾಸ್ಯದ ಸಂಕೇತವಾಗಿರುವ ರಾಷ್ಟ್ರಪತಿ ಭವನ, ಕುತುಬ್ ಮಿನಾರ್, ಲಾಲ್ ಕ್ವೈಲಾವನ್ನು ಕೆಡವಿ ಬಿಡಿ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಕರೆ ನೀಡಿದ್ದಾರೆ.
ನವದೆಹಲಿ (ಅ.17): ತಾಜ್ ಮಹಲ್ ನಮ್ಮ ಸಂಸ್ಕೃತಿ ಅಲ್ಲ ಎನ್ನುವುದಾದರೆ ಅದರ ದಾಸ್ಯದ ಸಂಕೇತವಾಗಿರುವ ರಾಷ್ಟ್ರಪತಿ ಭವನ, ಕುತುಬ್ ಮಿನಾರ್, ಕೆಂಪುಕೋಟೆಯನ್ನು ಕೆಡವಿ ಬಿಡಿ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಕರೆ ನೀಡಿದ್ದಾರೆ.
ಹಿಂದೂಗಳನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದ' ಮೊಘಲ್ ದೊರೆ ಷಹಜಹಾನ್‌ನನ್ನು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ 'ನಾವು ಇತಿಹಾಸವನ್ನೇ ಬದಲಿಸುತ್ತೇವೆ' ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ನಿನ್ನೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಜಂ ಖಾನ್, ತಾಜ್ ಮಹಲ್ ಒಂದೇ ಯಾಕೆ? ರಾಷ್ಟ್ರಪತಿ ಭವನ, ಕುತುಬ್ ಮಿನಾರ್, ಕೆಂಪುಕೋಟೆಯನ್ನು ಯಾಕೆ ಕೆಡವಬಾರದು? ಇವೆಲ್ಲವೂ ದಾಸ್ಯದ ಸಂಕೇತವಲ್ಲವೇ? ಆರ್’ಎಸ್’ಎಸ್’ನವರು ಇದನ್ನು ದೇಶದ್ರೋಹದ ಸಂಕೇತವೆಂದು ಕರೆಯಲಿ ನೋಡೋಣ. ಒಂದು ವೇಳೆ ಅದನ್ನು ಕೆಡವುದಾದರೆ ಮಾತ್ರ ತಾಜ್ ಮಹಲನ್ನು ಕೆಡವಬೇಕು ಎಂದು ಅಜಂ ಖಾನ್ ಹೇಳಿದ್ದಾರೆ.