ಮ್ಯಾಟ್ರಿಮೋನಿಗೆ ಜಾಹೀರಾತು ನೀಡಿ ವಂಚನೆಗೆ ಒಳಗಾದ!

By Suvarna Web DeskFirst Published Oct 17, 2017, 3:13 PM IST
Highlights

ಕನ್ನಡ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ವಿವಾಹಾಕಾಂಕ್ಷೆಯ ಜಾಹೀರಾತು ಹಾಕಿದ್ದ ಮೂಲ್ಕಿಯ ವ್ಯಕ್ತಿಯೊಬ್ಬರು ವಿದೇಶಿಗರಿಂದ ವಂಚನೆಗೊಳಗಾಗಿ ಲಕ್ಷಾಂತರ ರು. ಕಳೆದುಕೊಂಡಿದ್ದಾರೆ. ಒಟ್ಟು 11,39,535 ರು.ಗಳನ್ನು ಕಳೆದುಕೊಂಡ ಬಳಿಕ ಕೊನೆಗೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು: ಕನ್ನಡ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ವಿವಾಹಾಕಾಂಕ್ಷೆಯ ಜಾಹೀರಾತು ಹಾಕಿದ್ದ ಮೂಲ್ಕಿಯ ವ್ಯಕ್ತಿಯೊಬ್ಬರು ವಿದೇಶಿಗರಿಂದ ವಂಚನೆಗೊಳಗಾಗಿ ಲಕ್ಷಾಂತರ ರು. ಕಳೆದುಕೊಂಡಿದ್ದಾರೆ. ಒಟ್ಟು 11,39,535 ರು.ಗಳನ್ನು ಕಳೆದುಕೊಂಡ ಬಳಿಕ ಕೊನೆಗೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ವೆಬ್ ಸೈಟ್‌ನಲ್ಲಿ ಮೂಲ್ಕಿ ವ್ಯಕ್ತಿಯ ಜಾಹೀರಾತು ನೋಡಿದ ಇಂಗ್ಲೆಂಡ್ ಪ್ರಜೆ ಸ್ಟೆಲ್ಲಾ ಮೋರಿಸ್ ಮದುವೆಯ ಇಚ್ಛೆಯನ್ನು ವಾಟ್ಸಪ್ ಮೂಲಕ ವ್ಯಕ್ತಪಡಿಸಿದ್ದರು. ಇಂಗ್ಲೆಂಡ್‌ನಲ್ಲಿ ಕೆಲಸ ಕೊಡಿಸುವುದಾಗಿಯೂ ಭರವಸೆ ನೀಡಿದ್ದರು. ಬಳಿಕ ಈ ಕುರಿತು ಮೈಕಲ್ ಆ್ಯಂಟನಿ ಎಂಬ ವ್ಯಕ್ತಿಯನ್ನು ಸಂಪರ್ಕಿಸುವಂತೆ ತಿಳಿಸಿ ಆತನ ಮೊಬೈಲ್ ನಂಬ್ರವನ್ನು ಮೂಲ್ಕಿಯ ವ್ಯಕ್ತಿಗೆ ನೀಡಿದ್ದರು.

ಇದೆಲ್ಲ ಸತ್ಯ ಎಂದು ಭ್ರಮಿಸಿದ ಇವರು ಮೈಕಲ್ ಆ್ಯಂಟನಿ ಎಂಬಾತನಿಗೆ ಕರೆ ಮಾಡಿದ್ದು, ಆತನಿಗೆ ವೀಸಾ ಭರ್ತಿ ಮಾಡುವ ಫಾರಂ ಮತ್ತು ಅದಕ್ಕೆ ತಗಲುವ ಶುಲ್ಕ 26,560 ರು.ಗಳನ್ನು ಆರಂಭದಲ್ಲಿ ಕಿನ್ನಿಗೋಳಿಯ ಕೆನರಾ ಬ್ಯಾಂಕ್ ಖಾತೆಯಿಂದ ನೆಫ್ಟ್ ಮೂಲಕ ಕಳುಹಿಸಿದ್ದಾರೆ.

ನಂತರ ಹಂತ ಹಂತವಾಗಿ ಮೂಲ್ಕಿಯ ವ್ಯಕ್ತಿಯಿಂದ ಹಣ ಪೀಕಿಸಿದ್ದಾರೆ. ಕೊನೆಗೆ ಲಕ್ಷಾಂತರ ರು. ಕಳೆದುಕೊಂಡ ಬಳಿಕ ಸಂಶಯಗೊಂಡ ಇವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

 

click me!