
ಭೋಪಾಲ್(ನ. 08): ಎಂಟು ಶಂಕಿತ ಉಗ್ರರು ಇತ್ತೀಚೆಗೆ ಜೈಲಿನಿಂದ ತಪ್ಪಿಸಿಕೊಂಡು ಎನ್'ಕೌಂಟರ್'ಗೊಳಗಾದ ಪ್ರಕರಣ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ, ಕೈದಿಗಳು ಜೈಲಿನಿಂದ ಪರಾರಿಯಾಗುವುದು ಇದು ಹೊಸತಲ್ಲ. ಭಾರತದಲ್ಲಿ ಇದು ತೀರಾ ಸಾಮಾನ್ಯವೆನಿಸಿಬಿಟ್ಟಿದೆ. ಕಳೆದ ವರ್ಷ ಬರೋಬ್ಬರಿ 371 ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿರುವುದು ದಾಖಲಾಗಿದೆ. ಆದರೆ, ವಿಚಿತ್ರವೆಂದರೆ ಪರಾರಿಯಾದವರ ಪೈಕಿ ಮುಕ್ಕಾಲು ಪಾಲು ಕೈದಿಗಳು ಪೊಲೀಸರ ಕೈಗೆ ಸಿಕ್ಕದೇ ಇನ್ನೂ ಹೊರಗೆ ತಿರುತ್ತಲೇ ಇದ್ದಾರೆ. ಪಂಜಾಬ್'ನಲ್ಲಂತೂ 2015ರಲ್ಲಿ ತಪ್ಪಿಸಿಕೊಂಡ ಯಾವೊಬ್ಬ ಕೈದಿಯೂ ಮರುಬಂಧಿತರಾಗಿಲ್ಲವಂತೆ. ಹೀಗಾಗಿ, ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳಲು ಮುಂದಾಗುವುದು ತೀರಾ ಸಹಜವೆನಿಸಿಬಿಟ್ಟಿದೆ.
2015ರಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಕೈದಿಗಳು ತಪ್ಪಿಸಿಕೊಂಡಿದ್ದಾರೆ?
1) ಉತ್ತರಪ್ರದೇಶ: 53
2) ರಾಜಸ್ಥಾನ: 33
3) ಪಂಜಾಬ್: 32
4) ಮಹಾರಾಷ್ಟ್ರ: 29
5) ಗುಜರಾತ್: 28
6) ಛತ್ತೀಸ್'ಗಡ: 27
7) ಆಂಧ್ರಪ್ರದೇಶ: 23
8) ಮಧ್ಯಪ್ರದೇಶ: 23
9) ಕರ್ನಾಟಕ: 17
10) ಅಸ್ಸಾಮ್: 13
11) ಪಶ್ಚಿಮ ಬಂಗಾಳ: 11
12) ಇತರೆ: 82
ಪರಾರಿಯಾಗಿ ಮರುಬಂಧಿತರಾದ ಕೈದಿಗಳು ಪ್ರಮಾಣ:
1) ಮಹಾರಾಷ್ಟ್ರ: 58.6%
2) ರಾಜಸ್ಥಾನ: 54.5%
3) ಛತ್ತೀಸ್'ಗಢ: 51.9%
4) ಮಧ್ಯಪ್ರದೇಶ: 43.5%
5) ಉತ್ತರಪ್ರದೇಶ: 37.7%
6) ಆಂಧ್ರಪ್ರದೇಶ: 34.8%
7) ಗುಜರಾತ್: 32.1%
8) ಕರ್ನಾಟಕ: 17.6%
9) ಪಶ್ಚಿಮ ಬಂಗಾಳ: 9.1%
10) ಅಸ್ಸಾಂ: 7.7%
11) ಪಂಜಾಬ್: 00
12) ಇತರೆ: 36.6%
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.