
ಚೆನ್ನೈ (ಜು.9): ಮುಂದಿನ ಲೋಕಸಭಾ ಚುನಾವಣಾ ತಯಾರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಗರಕ್ಕೆ ಆಗಮಿಸುವ ಮುನ್ನ ಟ್ವೀಟರ್‌ನಲ್ಲಿ #GoBackAmithShah ಟ್ರೆಂಡ್ ಆಗಿತ್ತು.
ಸೋಮವಾರ ಬೆಳಗ್ಗೆ 10ರ ಸುಮಾರಿಗೆ #GobackAmitShahಎಂದು ಸುಮಾರು 15 ಸಾವಿರ ಬಾರಿ ಟ್ವೀಟ್, ರೀಟ್ವೀಟ್ ಆಗಿವೆ.
'ತಮಿಳುನಾಡು ಸಮಾನತೆ ಸಾರುವ ಭೂಮಿ. ನಾವು ನಿಮ್ಮಂಥ ಉಗ್ರರನ್ನು ಪ್ರವೇಶಿಸಲು ಬಿಡೋಲ್ಲ....' #GobackAmitShah ಎಂದು @iam_jafeth ಎನ್ನುವ ಟ್ವೀಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿತ್ತು.
ಅಲ್ಲದೇ ಮತ್ತೊಂದು ಟ್ವೀಟರ್ ಹ್ಯಾಂಡಲ್‌ನಿಂದ 'ಇದು ಭಾರತವಲ್ಲ, ತಮಿಳುನಾಡು. ನಾವು ಪ್ರಜಾಪ್ರಭುತ್ವ ಜೂಜುಕೋರರನ್ನು ಸ್ವೀಕರಿಸುವುದಿಲ್ಲ,' ಎಂದು ಟ್ವೀಟಿಗೆ ಪ್ರತಿಕ್ರಿಯೆ ನೀಡಲಾಗಿತ್ತು.
'ತೂತುಕುಡಿ ಹತ್ಯಾಕಾಂಡವಾದಾಗ ತುಟಿ ಪಿಟಕ್ ಎನ್ನದ ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಯಾವ ನೈತಿಕತೆಯೂ ಇಲ್ಲವೇ?' ಎಂದು @dr_madras ಎನ್ನುವ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.
Srikanth Sarma@srikant0009 ಎನ್ನುವವರು ಶಾ ಅವರನ್ನು 'ನಗದು ಅಮಾನ್ಯಕರಣ ಹಗರದ ರೂವಾರಿ ವಾಪಾಸ್ಸು ಹೋಗಿ..' ಎಂದು ಟ್ವೀಟ್ ಮಾಡಿದ್ದಾರೆ.
ಮೋದಿ ಆಗಮನಕ್ಕೂ ಇತ್ತು ವಿರೋಧ:
ಚೆನ್ನೆೈಗೆ ಕಳೆದ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದಾಗ #GobackModi ಎಂಬ ಟ್ವೀಟ್ ಟ್ರೆಂಡ್ ಆಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರಕಾರ ಕಾವೇರಿ ನಿರ್ವಹಣಾ ಪ್ರಾಧಿಕಾರವನ್ನು ರಚಿಸುವಲ್ಲಿ ಧೋರಣೆ ತೋರುತ್ತಿದ್ದ ಸಂದರ್ಭದಲ್ಲಿ ಮೋದಿ ನಗರಕ್ಕೆ ಭೇಟಿ ನೀಡಿದ್ದನ್ನು ವಿರೋಧಿಸಿ, ತಮಿಳಿಗರು ಸಿಡಿದೆದ್ದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.