ನೋಟು ಅಪನಗದೀಕರಣ : ಹೊಸ ನೋಟಿಗೆ ಖರ್ಚು ಮಾಡಿದ್ದೆಷ್ಟು..?

First Published Jul 9, 2018, 11:08 AM IST
Highlights

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವತ ಸರ್ಕಾರದಿಂದ ನೋಟು ಅಪನಗದೀಕರಣದ ಬಳಿಕ ಹೊಸ 2000 ಮತ್ತು 500 ರು. ನೋಟುಗಳನ್ನು ಸಾಗಿಸಲು ವಾಯು ಸೇನೆಯ ಅತ್ಯಾಧುನಿಕ  ವಿಮಾನಗಳನ್ನು ಬಳಸಿಕೊಂಡಿದ್ದುದಕ್ಕೆ 29.41 ಕೋಟಿ ರು. ವೆಚ್ಚವಾಗಿದೆ. 
 

ನವದೆಹಲಿ: ನೋಟು ಅಪನಗದೀಕರಣದ ಬಳಿಕ ಹೊಸ 2000 ಮತ್ತು 500 ರು. ನೋಟುಗಳನ್ನು ಸಾಗಿಸಲು ವಾಯು ಸೇನೆಯ ಅತ್ಯಾಧುನಿಕ  ವಿಮಾನಗಳನ್ನು ಬಳಸಿಕೊಂಡಿದ್ದುದಕ್ಕೆ 29.41 ಕೋಟಿ ರು. ವೆಚ್ಚವಾಗಿದೆ. 

ನೋಟು ಮುದ್ರಣ ಮಾಡುವ ಘಟಕಗಳಿಂದ ದೇಶದ ವಿವಿಧ ಭಾಗಗಳಿಗೆ ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಹೊಸ ನೋಟುಗಳ ಸಾಗಾಟಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್, ಸೇನೆಯ ಅತ್ಯಾಧುನಿಕ ಸರಕು ಸಾಗಣೆ ವಿಮಾನಗಳಾದ ಸಿ-17 ಮತ್ತು ಸಿ-130 ಜೆ ಸುಪರ್ ಹರ್ಕ್ಯುಲಸ್ ಬಳಸಿಕೊಂಡಿತ್ತು. 

ಈ ವಿಮಾನಗಳನ್ನು ಬಳಸಿ ನೋಟು ಮುದ್ರಣಾಲಯಗಳಿಂದ ನಿಗದಿತ ಸ್ಥಳಕ್ಕೆ ಹೊಸ ನೋಟುಗಳನ್ನು 91 ಬಾರಿ ಸಾಗಿಸಲಾಗಿತ್ತು. ಇದಕ್ಕೆ ಭಾರತೀಯ ವಾಯುಪಡೆ 29.41 ಕೋಟಿ ಬಿಲ್ ಅನ್ನು ಆರ್‌ಬಿಐಗೆ ರವಾನಿಸಿತ್ತು. ಈ ಮಾಹಿತಿಯನ್ನು ಭಾರತೀಯ ವಾಯುಪಡೆಯು ನಿವೃತ್ತ ಅಧಿಕಾರಿ ಕಮಾಂಡರ್ ಲೋಕೇಶ್ ಬಾತ್ರ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿದೆ.

click me!