16 ದಿನಗಳ ಬಳಿಕ ಗುಹೆಯಿಂದ ಹೊರಬಂದ ಥಾಯ್ ಬಾಲಕರು : ರಕ್ಷಣೆ ನಡೆದಿದ್ದು ಹೇಗೆ.?

First Published Jul 9, 2018, 11:17 AM IST
Highlights

6 ದಿನಗಳಿಂದ ಇಲ್ಲಿನ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ12  ಬಾಲಕರು ಮತ್ತು ಓರ್ವ ಕೋಚ್ ಪೈಕಿ ನಾಲ್ವರು ಬಾಲಕರನ್ನು ಭಾನುವಾರ ರಾತ್ರಿ ವೇಳೆಗೆ ಸುರಕ್ಷಿ ತವಾಗಿ ಹೊರಕ್ಕೆ ಕರೆತರಲಾಗಿದೆ. ಈ ವೇಳೆ ಕತ್ತಲು ಮುಸುಕಿದ ಕಾರಣ, ಉಳಿದವರ ತೆರವಿನ ಕಾರ್ಯಾ ಚರಣೆ ಮುಂದುವರಿದಿದೆ. 

ಮಾ ಸಾಯ್ (ಥಾಯ್ಲೆಂಡ್): 16 ದಿನಗಳಿಂದ ಇಲ್ಲಿನ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ12  ಬಾಲಕರು ಮತ್ತು ಓರ್ವ ಕೋಚ್ ಪೈಕಿ ನಾಲ್ವರು ಬಾಲಕರನ್ನು ಭಾನುವಾರ ರಾತ್ರಿ ವೇಳೆಗೆ ಸುರಕ್ಷಿ ತವಾಗಿ ಹೊರಕ್ಕೆ ಕರೆತರಲಾಗಿದೆ. ಈ ವೇಳೆ ಕತ್ತಲು ಮುಸುಕಿದ ಕಾರಣ, ಉಳಿದವರ ತೆರವಿನ ಕಾರ್ಯಾ ಚರಣೆ ಸೋಮವಾರಕ್ಕೆ ಮುಂದೂಡಲಾಗಿದೆ. 

ಏನಾಗಿತ್ತು  ‘ವೈಲ್ಡ್ ಬೋರ್’ ಎಂಬ ಫುಟ್‌ಬಾಲ್ ತಂಡದ 12 ಮಕ್ಕಳು ಅಭ್ಯಾಸ ಮುಗಿಸಿ ಜೂ.23 ರಂದು ಈ ತಮ್ಮ ಕೋಚ್ ಜತೆ ಈ ಗುಹೆ ಪ್ರವೇಶಿಸಿದ್ದರು. ವಾಪಸ್ ಬರು ವಷ್ಟರಲ್ಲಿ ಗುಹೆಯೊಳಗೆ ಪ್ರವಾಹದ ನೀರು ತುಂಬಿ ಕೊಂಡಿತ್ತು. ಹೀಗಾಗಿಗುಹೆಯಲ್ಲಿ ಸಿಲುಕಿದ್ದರು. ಹುಡುಕಾಟ ಗುಹೆಯ ಪ್ರವೇಶ ದ್ವಾರದಲ್ಲಿ ಮಕ್ಕಳ ಸೈಕಲ್ ನೋಡಿ ಅವರು ಒಳಗೆ ಸಿಕ್ಕಿಹಾಕಿಕೊಂಡಿರಬಹುದು ಎಂದು ಊಹಿಸಲಾಗಿತ್ತು. ನಂತರ 10 ದಿನ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡ, ಗುಹೆಯೊಳಗೆ ಬಾಲಕರು ತಂಗಿದ್ದ ಸ್ಥಳಕ್ಕೆ ತೆರಳುವಲ್ಲಿ ಯಶಸ್ವಿಯಾಗಿತ್ತು.

ತಕ್ಷಣವೇ ಅವರಿಗೆ ಆಹಾರ, ನೀರು, ಆಮ್ಲಜನಕದ ವ್ಯವಸ್ಥೆ ಮಾಡುವ ಮೂಲಕ ಅವರ ಆರೋಗ್ಯ ಕಾಪಾಡಲು ಎಲ್ಲಾ ಯತ್ನ ಕೈಗೊಳ್ಳಲಾಗಿತ್ತು. ಭಾರೀ ಯತ್ನ ಬಾಲಕರನ್ನು ಗುಹೆಯಿಂದ ಹೊರತರಲು ನಾನಾ ಸಾಹಸ ನಡೆಸಲಾಗಿತ್ತಾದರೂ ಅದು ಫಲ ಕೊಟ್ಟಿರಲಿಲ್ಲ. ಗುಹೆಯ ಪ್ರವೇಶ ದ್ವಾರದಿಂದ ಬಾಲಕರು ಇದ್ದ ಸ್ಥಳದ ನಡುವಿನ 2 ಕಿ.ಮೀ ಅಂತರದ ಪ್ರದೇಶದಲ್ಲಿ ದೊಡ್ಡ ಕಂದಕಗಳಿದ್ದವು. 

ಅಲ್ಲಿ ನೀರು ತುಂಬಿಕೊಂಡ ಕಾರಣ ಬಾಲಕರನ್ನು ಹೊರಕ್ಕೆ ಕರೆತರುವುದು ಅಸಾಧ್ಯವಾಗಿತ್ತು. ಜೊತೆಗೆ ಬಾರೀ ಮಳೆಯ ಮುನ್ಸೂಚನೆ 13 ಜನರ ಪ್ರಾಣದ ಬಗ್ಗೆ ಭೀತಿ ಹುಟ್ಟಿಸಿತ್ತು. ಹರಸಾಹಸ ಈ ನಡುವೆ ಗುಹೆಯಿಂದ 150 ದಶಲಕ್ಷ ಲೀಟರ್ ನೀರು ಹೊರಹಾಕಲಾಗಿತ್ತು. ಪರಿಣಾಮ ಭಾನುವಾರ ರಕ್ಷಣಾ ತಂಡ ಗುಹೆಯೊಳಗೆ ಪ್ರವೇಶಿಸಿತ್ತು. ಬಳಿಕ ಒಬ್ಬ ಬಾಲಕರ ಜೊತೆ ಇಬ್ಬರು ರಕ್ಷಣಾ ತಂಡದ ಸದಸ್ಯರನ್ನು ಒಂದು ತಂಡವಾಗಿ ಮಾಡಿ, ಅವರನ್ನು ಹೊರಕರೆ ತರಲಾಯ್ತು. ಬಳಿಕ ಹೆಲಿಕಾಪ್ಟರ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯ್ತು 

click me!