ಖೇಣಿ ಕಾಂಗ್ರೆಸ್ ಸೇರ್ಪಡೆಗೆ ಖರ್ಗೆ ಅಸಮಾಧಾನ

By Suvarna Web DeskFirst Published Mar 12, 2018, 12:23 PM IST
Highlights

ಕರ್ನಾಟಕ ಮಕ್ಕಳ ಮಕ್ಷದ ಶಾಸಕ, ನೈಸ್ ಕಂಪನಿ ಮಾಲೀಕ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಗೆ ಪಕ್ಷದ ಹಿರಿಯ ನಾಯಕ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿ: ಕರ್ನಾಟಕ ಮಕ್ಕಳ ಮಕ್ಷದ ಶಾಸಕ, ನೈಸ್ ಕಂಪನಿ ಮಾಲೀಕ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಗೆ ಪಕ್ಷದ ಹಿರಿಯ ನಾಯಕ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿ ಗಾರರ ಜತೆ ಮಾತನಾಡಿದ ಅವರು, ಖೇಣಿ ಕಾಂಗ್ರೆಸ್ ಸೇರ್ಪಡೆ ವಿಚಾರವೇ ತಮಗೆ ಗೊತ್ತಿಲ್ಲ. ಖೇಣಿ ಅವರನ್ನು ಯಾರು, ಯಾವ ಕಾರಣಕ್ಕಾಗಿ ಕಾಂಗ್ರೆಸ್ಸಿಗೆ ಕರೆತಂದರೋ ಗೊತ್ತಿಲ್ಲ. ಅವರನ್ನು ಪಕ್ಷಕ್ಕೆ ಕರೆತರುವ ಮುನ್ನ ಯಾರೂ ನನ್ನೊಂದಿಗೆ ಕುಳಿತು ಚರ್ಚಿಸಿಲ್ಲ. ಖೇಣಿ ಆಗಮನದಿಂದ ಪಕ್ಷಕ್ಕೆ ಯಾವ ಲಾಭಗಳಿವೆ ಎಂಬುದು ನನಗಂತೂ ಗೊತ್ತಿಲ್ಲ. ಈ ಕುರಿತು ಖೇಣಿ ಅವರನ್ನು ಯಾರು ಕರೆತಂದಿದ್ದಾರೋ ಅವರೇ ಉತ್ತರಿಸಬೇಕು ಎಂದರು.

ಖೇಣಿ ಸೇರ್ಪಡೆಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ದಿ. ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಹಾಗೂ ಅಳಿಯ ಕೂಡ ಆಗಿರುವ ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಚಂದ್ರಹಾಸ ಸಿಂಗ್ ಅವರು ವಿರೋಧ ವ್ಯಕ್ತಪಡಿಸಿದ್ದರು.

click me!