
ಬೆಂಗಳೂರು (ಮಾ. 12): ಹ್ಯಾರೀಸ್ ಪುತ್ರ ನಲಪಾಡ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಲಪಾಡ್ ಪ್ರಕರಣದಲ್ಲಿ ಕರ್ತವ್ಯ ನಿರ್ವಹಣೆ ಲೋಪದಡಿ ಎತ್ತಂಗಡಿಯಾಗಿದ್ದ ಎಸಿಪಿ ಮಂಜುನಾಥ್ ತಳವಾರ್’ಗೆ ಮತ್ತೆ ಕಬ್ಬನ್ ಪಾರ್ಕ್’ನಲ್ಲೇ ಮರುಪೋಸ್ಟಿಂಗ್ ಭಾಗ್ಯ ಸಿಕ್ಕಿದೆ.
ಕರ್ತವ್ಯ ಲೋಪದಡಿ ಇಬ್ಬರು ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗಿತ್ತು. ಠಾಣಾ ಇನ್ಸ್ಪೆಕ್ಟರ್ ವಿಜಯ ಹಡಗಲಿ ಅಮಾನತುಗೊಂಡಿದ್ದರು. ಎಸಿಪಿ ಮಂಜುನಾಥ್ ತಳವಾರ ಎತ್ತಂಗಡಿಯಾಗಿದ್ದರು. ವಿದ್ವತ್ ಹಲ್ಲೆ ಪ್ರಕರಣದಲ್ಲಿ ನಲಪಾಡ್ ಮೇಲೆ ಎಫ್ಐಆರ್ ಹಾಕದಂತೆ ಎಸಿಪಿ ಮಂಜುನಾಥ್ ತಳವಾರ್ ಒತ್ತಡ ಹಾಕಿದ್ದರು. ಇದು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಯಿತು. ಆಕ್ರೋಶದ ಕಾವು ಹೆಚ್ಚಾದಾಗ ಗೃಹ ಸಚಿವರು ಮಂಜುನಾಥ್’ರನ್ನು ಎತ್ತಂಗಡಿ ಮಾಡಿದ್ದರು.
ಇದೀಗ ಪ್ರಕರಣ ತಣ್ಣಗಾದ ಬಳಿಕ ಮತ್ತೆ ಅದೇ ಜಾಗಕ್ಕೆ ಎಸಿಪಿಗೆ ಪೋಸ್ಟಿಂಗ್ ಸಿಕ್ಕಿದೆ. ಹ್ಯಾರೀಸ್ ಒತ್ತಡಕ್ಕೆ ಮಣಿಯಿತಾ ರಾಜ್ಯ ಸರ್ಕಾರ? ಪ್ರಕರಣದಲ್ಲಿ ನ್ಯಾಯ ಸಿಗುತ್ತಾ ಹೀಗಾದರೆ..!? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.