
ನವದೆಹಲಿ(ನ.28): ಟ್ವಿಟರ್'ಗಳ ಮೂಲಕ ಸದಾ ವಿವಾದಕ್ಕೀಡಾಗುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಈಗ ಮತ್ತೊಮ್ಮೆ ಅಪಮಾನಕ್ಕೀಡಾಗಿದ್ದಾರೆ.
ಇತ್ತೀಚಿಗಷ್ಟೆ ಬಿಜೆಪಿ ಸಂಸದ ಮಹೇಶ್ ಶರ್ಮಾ ಅವರ ಮಗಳ ಮದುವೆಯ ಖರ್ಚನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದ ಅರವಿಂದ್ ಕೇಜ್ರೀವಾಲ್ ಬಿಜೆಪಿ ಸಂಸದರು ಕೇವಲ ರೂ.2.5 ಲಕ್ಷದಲ್ಲಿ ಹೇಗೆ ಅವರ ಮಗಳ ಮದುವೆಯನ್ನು ಮಾಡಿದರು. ಮದುವೆಯ ಎಲ್ಲ ವೆಚ್ಚದ ಪಾವತಿಗಳನ್ನು ಚೆಕ್ ಮೂಲಕ ಹೇಗೆ ಪಾವತಿಸಿದರು.ಹೇಗೆ ರದ್ದಾದ ನೋಟುಗಳನ್ನು ವಿನಿಮಯ ಮಾಡಿಕೊಂಡರು ? ಎಂದು ಟ್ವಿಟರ್'ನಲ್ಲಿ ಪ್ರಶ್ನಿಸಿದ್ದರು.
ಇದಕ್ಕೆ ಟ್ವಿಟರ್'ನಲ್ಲಿಯೇ ಪ್ರತಿಕ್ರಿಯೆ ನೀಡಿದ ಸಂಸದ ಮಹೇಶ್ ಶರ್ಮಾ 'ಕೇಜ್ರೀವಾಲ್ ಅವರು ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಲಿ. ಅದು ನನ್ನ ಮಗನ ಮದುವೆ ಮಗಳ ಮದುವೆಯಲ್ಲ. ಮದುವೆಯ ವೆಚ್ಚದ ಎಲ್ಲ ಪಾವತಿಗಳನ್ನು ಚೆಕ್ ಮೂಲಕ ಪಾವತಿ ಮಾಡಿದ್ದೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಕೇಜ್ರೀವಾಲ್ ಈ ರೀತಿ ತಪ್ಪಾದ ಟ್ವೀಟ್'ಗಳನ್ನು ಮಾಡುತ್ತಿರುವುದು ಇದೇ ಮೊದಲೇನಲ್ಲ. ಅಲ್ಲದೆ ತಪ್ಪು ಮಾಡಿದ ನಂತರವೂ ಕ್ಷಮೆಯನ್ನು ಕೂಡ ಯಾಚಿಸುವ ಗೋಜಿಗೂ ಹೋಗುತ್ತಿಲ್ಲ. ನಕಾರಾತ್ಮಕ ಮರು ಟ್ವೀಟ್'ಗಳು ಹೆಚ್ಚಾದರೆ ತಾವು ಹಾಕಿದ ಟ್ವೀಟನ್ನು ಡೆಲಿಟ್ ಮಾಡಿ ಬಿಡುತ್ತಾರೆ.
ಕೆಲವು ದಿನಗಳ ಹಿಂದೆ ಯುವಕನೊಬ್ಬನ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಟ್ ರದ್ದತಿಗೆ ತಾಳೆ ಹಾಕಿ ಟ್ವೀಟ್ ಮಾಡಿದ್ದರು. ಆದರೆ ವಾಸ್ತವದಲ್ಲಿ ಆತ ಬೇರೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ನಿಜ ಎಲ್ಲಡೆ ಗೊತ್ತಾದ ಬಳಿಕ ತಮ್ಮ ಟ್ವೀಟನ್ನು ಡೆಲಿಟ್ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.