ಪರ್ವೇಜ್ ಮುಶ್ರಫ್ ವಿರುದ್ಧ ಬಂಧನ ವಾರೆಂಟ್ ಜಾರಿ

By Suvarna web DeskFirst Published Nov 28, 2016, 2:32 PM IST
Highlights

ಬಲೂಚಿಸ್ತಾನದ ರಾಷ್ಟ್ರೀಯತಾವಾದಿ ನವಾಬ್ ಅಕ್ಬರ್ ಭುಗ್ತಿ ಹತ್ಯೆ ಆರೋಪ ಎದುರಿಸುತ್ತಿರುವ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ವಿರುದ್ಧ ಅಲ್ಲಿನ ಸ್ಥಳೀಯ ನ್ಯಾಯಾಲಯ ಬಂಧನ ವಾರೆಂಟ್ ಜಾರಿಗೊಳಿಸಿದೆ.

ಇಸ್ಲಮಾಬಾದ್ (ನ.28): ಬಲೂಚಿಸ್ತಾನದ ರಾಷ್ಟ್ರೀಯತಾವಾದಿ ನವಾಬ್ ಅಕ್ಬರ್ ಭುಗ್ತಿ ಹತ್ಯೆ ಆರೋಪ ಎದುರಿಸುತ್ತಿರುವ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ವಿರುದ್ಧ ಅಲ್ಲಿನ ಸ್ಥಳೀಯ ನ್ಯಾಯಾಲಯ ಬಂಧನ ವಾರೆಂಟ್ ಜಾರಿಗೊಳಿಸಿದೆ.

ಹತ್ಯೆಯಾದ ಅಕ್ಬರ್ ಭುಗ್ತಿ ಮಗ ಜಾಮಿಲ್ ಭುಗ್ತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾ.ಜಾಮಲ್ ಮಂಡೋಕಿಲ್ ಹಾಗೂ ಜಹೀರುದ್ದೀನ್ ಕಾಕರ್ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಿದೆ.

ಭದ್ರತಾ ಕಾರಣದಿಂದ ಪರ್ವೇಜ್ ಮುಷ್ರಫ್ ನ್ಯಾಯಾಲಯ ವಿಚಾರಣೆಗೆ ಹಾಜರಾಗಲಿಲ್ಲ. ಅವರ ಪರ ವಕೀಲರಾದ ಅಕ್ತರ್ ಶಾ ಹಾಜರಾಗಿದ್ದರು. ಸಾಕಷ್ಟು ಬಾರಿ ಆದೇಶ ನೀಡಿದ್ದರೂ ಸಹ ಮುಷ್ರಫ್ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಭುಗ್ತಿ ಪರ ವಕೀಲ ಆರೋಪಿಸಿದ್ದಾರೆ. ಇದನ್ನು ಪರಿಗಣಿಸಿರುವ ನ್ಯಾಯಾಲಯ ಪರ್ವೇಜ್ ಅವರು ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆದೇಶಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಷ್ರಫ್ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದೆ. 

 

click me!