
ಬಳ್ಳಾರಿ(ನ.04): ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತೆ. ಆದ್ರೆ, ನಮ್ಮ ರಾಜಕೀಯ ನಾಯಕರು ಮಾತ್ರ ಶ್ರೀ ವಿರೂಪಾಕ್ಷ ಎದುರಿಗೆ ಬರೋಲ್ಲ.
ವಿರೂಪಾಕ್ಷನ ದರ್ಶನ ಪಡೆದ್ರೆ ರಾಜಕೀಯ ಅಧಿಕಾರ ಹೋಗುತ್ತೆ ಎಂಬ ನಂಬಿಕೆ ರಾಜಕೀಯ ನಾಯಕರಲ್ಲಿ ಮನೆ ಮಾಡಿದೆ ಎನ್ನಲಾಗಿದೆ.
ಮಾಜಿ ಸಿಎಂ ಬಂಗಾರಪ್ಪ ಕೂಡ ದೇವಸ್ಥಾನಕ್ಕೆ ಕಾಲಿಟ್ಟಿದ್ದರು. ಕಾಕತಾಳೀಯ ಅನ್ನೋ ರೀತಿ ಒಂದು ವರ್ಷದೊಳಗೆ ಅಧಿಕಾರ ಕಳೆದುಕೊಂಡಿದ್ದರು.
ಆಮೇಲೆ ಜೆ.ಎಚ್. ಪಟೇಲ್, ಮಾಜಿ ಸಿಎಂಗಳದ ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಕೂಡ ಬಳ್ಳಾರಿಗೆ ಬಂದ್ರೂ ಅಪಕೀರ್ತಿ ಖ್ಯಾತಿಯ ಟೆಂಪಲ್ ಒಳಗೆ ಕಾಲಿಟ್ಟಿಲ್ಲ.
ಆಮೇಲೆ ಗಣಿಧಣಿ ಜನಾರ್ದನ ರೆಡ್ಡಿ. ಹಾಲಿ ಸಚಿವರಾದ ಎಚ್.ಕೆ. ಪಾಟೀಲ್, ಆರ್.ವಿ.ದೇಶಪಾಂಡೆ, ಸಂತೋಷ್ ಲಾಡ್ ಮತ್ತು ಉಮಾಶ್ರೀ ಕೂಡ ಬಳ್ಳಾರಿಗೆ ಬಂದರು ವಿರೂಪಾಕ್ಷನ ಸನ್ನಿಧಿಗೆ ಹೋಗಿಲ್ಲ.
ಅಚ್ಚರಿ ಅಂತಂದ್ರೆ.. ನಿನ್ನೆ ಸಿಎಂ ಸಿದ್ರಾಮಯ್ಯ ಕೂಡ ಹಂಪಿ ಉತ್ಸವಕ್ಕೆ ಚಾಲನೆ ಕೊಟ್ಟಿದ್ದರೂ ಇತ್ತ ವಿರೂಪಾಕ್ಷನಿಗೆ ಕೈ ಮುಗಿಯದೆ ವಾಪಸ್ ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.