
ಬೆಂಗಳೂರು(ನ.02): ಬೆಂಗಳೂರಿನಲ್ಲಿ ಅಸಲಿ ನೋಟಿಗೆ ಪೈಪೋಟಿ ಕೊಡುವಂತಿರುವ ನಕಲಿ ನೋಟುಗಳು ಮೈಸೂರು ರಸ್ತೆಯ ಎಸ್ಬಿಐ ಬ್ಯಾಂಕ್ ಎಟಿಎಂನಲ್ಲಿ ಬಂದಿವೆ.
ನಾಯಂಡಹಳ್ಳಿ ಬಸ್ ನಿಲ್ದಾಣ ಬಳಿ ಇರುವ ಎಸ್ಬಿಐ ಶಾಖೆಯ ಎಟಿಎಂನಲ್ಲಿ ಗ್ರಾಹಕ ರಂಜೇಶ್, ಪವನ ಕುಮಾರ್ ಎಂಬುವವರಿಗೆ ಇಸವಿ ಇಲ್ಲದ 500ರೂ. ಮುಖಬೆಲೆಯ ನಾಲ್ಕು ನೋಟುಗಳು ಡ್ರಾ ಆಗಿವೆ.
ಇದನ್ನ ನೋಡಿ ಅನುಮಾನಗೊಂಡ ರಂಜೇಶ್, ಪವನ ಕುಮಾರ್ ತಕ್ಷಣ ಬ್ಯಾಟರಾಯನಪೂರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಎಸ್ಬಿಐ ಕೇಂದ್ರ ಕಚೇರಿಗೆ ತೆರಳುವಂತೆ ಸೂಚಿಸಿದ್ದಾರೆ.
ನಂತರ ಠಾಣೆಯಿಂದ ಎಟಿಎಂಗೆ ಯುವಕರು ವಾಪಸ್ ಆಗುವಷ್ಟರಲ್ಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಎಟಿಎಂ ಬಾಗಿಲು ಮುಚ್ಚಿ ಪರಾರಿ ಆಗಿದ್ದಾನೆ. ಸದ್ಯ ಹಣ ಡ್ರಾ ಮಾಡಿ ಕಂಗಾಲಾಗಿರುವ ಈ ಇಬ್ಬರು ಯುವಕರು, ಎಂಟಿಎಂನಲ್ಲಿ ಬಂದಿರುವ ಖೋಟಾ ನೋಟುಗಳ ಬಗ್ಗೆ ತನಿಖೆ ನಡೆಯಬೇಕು. ತಪ್ಪಿಸ್ಥತರ ವಿರುದ್ಧ ಕ್ರಮ ಕೈಗೊಳ್ಳುವಂತ್ತೆ ಒತ್ತಾಯಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.