ತಿರುಪತಿ ಟ್ರಸ್ಟ್‌ಗೆ ಕರ್ನಾಟಕದಿಂದ ಯಾರು?

By Web Desk  |  First Published Jul 2, 2019, 2:12 PM IST

ತಿರುಪತಿ ವೆಂಕಟೇಶ ದೇವಸ್ಥಾನದ ಟ್ರಸ್ಟ್‌ ಬೈಲಾನಲ್ಲಿ ಆಡಳಿತ ಮಂಡಳಿಯ ಒಬ್ಬ ಸದಸ್ಯರನ್ನು ಕರ್ನಾಟಕದಿಂದಲೇ ತೆಗೆದುಕೊಳ್ಳಬೇಕೆಂಬ ನಿಯಮವಿದೆ. ಈ ಬಾರಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲವಿದೆ. 


ತಿರುಪತಿ ವೆಂಕಟೇಶ ದೇವಸ್ಥಾನದ ಟ್ರಸ್ಟ್‌ ಬೈಲಾನಲ್ಲಿ ಆಡಳಿತ ಮಂಡಳಿಯ ಒಬ್ಬ ಸದಸ್ಯರನ್ನು ಕರ್ನಾಟಕದಿಂದಲೇ ತೆಗೆದುಕೊಳ್ಳಬೇಕೆಂಬ ನಿಯಮವಿದೆ.

ಅಜ್ಜನಂತೆ ಸಂಸತ್ತಿನಲ್ಲಿ ಕನ್ನಡದ ಧ್ವನಿಯಾಗ್ತಾರಾ ಪ್ರಜ್ವಲ್?

Tap to resize

Latest Videos

undefined

ಹಿಂದೆ ಯುಪಿಎ ಸರ್ಕಾರ ಇದ್ದಾಗ ಆರ್‌ ವಿ ದೇಶಪಾಂಡೆ, ನಂತರ ಪೇಜಾವರ ಮಠದ ಸ್ವಾಮೀಜಿ ಕಾರ್ಯದರ್ಶಿ ಅನಂತ ಅಲ್ಲಿ ಸದಸ್ಯರಾಗಿದ್ದರು. ಇದೊಂದು ರೀತಿ ಪವರ್‌ಪುಲ್ ಪೋಸ್ಟ್‌. ಇವರ ಪತ್ರ ತೆಗೆದುಕೊಂಡು ತಿರುಮಲಕ್ಕೆ ಹೋದರೆ ಅತಿಥಿ ಗೃಹ, ಬೆಳಗ್ಗೆ ನಡೆಯುವ ಕಟ್‌ ಅಂದರೆ ಉಳಿದವರನ್ನು ನಿಲ್ಲಿಸಿ ನಡೆಯುವ ವಿಶೇಷ ದರ್ಶನ ಪ್ರಾಪ್ತವಾಗುತ್ತದೆ.

ಅಧಿಕಾರ ಕಳೆದುಕೊಂಡ ನಂತರ 2 ಬೆಡ್‌ರೂಂ ಫ್ಲಾಟ್‌ಗೆ ಸುಷ್ಮಾ ಸ್ವರಾಜ್ ಶಿಫ್ಟ್!

ಆದರೆ ಚಂದ್ರಬಾಬು ಮತ್ತು ಬಿಜೆಪಿ ಸಂಬಂಧ ಹಳಸಿದ ನಂತರ ಇಲ್ಲಿವರೆಗೆ ಯಾರೂ ಹೊಸ ಸದಸ್ಯರ ನೇಮಕ ಆಗಿಲ್ಲ. ಆದರೆ ಈಗ ಜಗನ್‌ ರೆಡ್ಡಿ ಗೆದ್ದ ನಂತರ ಪ್ರಕ್ರಿಯೆ ಆರಂಭವಾಗಿದೆ. ಮಂತ್ರಾಲಯ ಮಠ, ಪೇಜಾವರ ಹಾಗೂ ಅದಮಾರು ಮಠದವರು ತಮ್ಮ ಶಿಷ್ಯರನ್ನು ಸದಸ್ಯರನ್ನಾಗಿ ಮಾಡಲು ಯತ್ನಿಸುತ್ತಿದ್ದಾರಂತೆ. ಆದರೆ, ಅದು ಯಶಸ್ವಿಯಾಗಬೇಕು ಅಂದರೆ ಗೃಹ ಸಚಿವ ಅಮಿತ್‌ ಶಾ ಅವರು ಜಗನ್‌ಗೆ ಪತ್ರ ಬರೆಯಬೇಕು. ತಿರುಪತಿ ವೆಂಕಟೇಶ ಅಂದರೆ ಸಾಮಾನ್ಯನೇ ಸ್ವಾಮಿ!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ ಕ್ಲಿಕ್ ಮಾಡಿ 

click me!