ಅಜ್ಜನಂತೆ ಸಂಸತ್ತಿನಲ್ಲಿ ಕನ್ನಡದ ಧ್ವನಿಯಾಗ್ತಾರಾ ಪ್ರಜ್ವಲ್?

By Web Desk  |  First Published Jul 2, 2019, 1:37 PM IST

ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ ಕರ್ನಾಟಕದ ನೂತನ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರಜ್ವಲ್ ರೇವಣ್ಣ ಮಾತುಗಳು ಎಲ್ಲರ ಗಮನ ಸೆಳೆದಿವೆ. ಜತೆಗೆ ಮಹುವಾ ಮೊಯಿತ್ರಾ ಸಹ ಭರವಸೆ ಮೂಡಿಸಿದ್ದಾರೆ. ಜತೆಗೆ ತಾತನಂತೆ ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗುವ ಭರವಸೆಯನ್ನು ಪ್ರಜ್ವಲ್ ಮಾತು ಹುಟ್ಟಿಸಿದೆ...


ರಾಷ್ಟ್ರಪತಿ ಭಾಷಣದ ವಂದನೆ ಮೇಲಿನ ಚರ್ಚೆಯಲ್ಲಿ ಮೊದಲ ಬಾರಿ ಸಂಸದರಾದ ತೇಜಸ್ವಿ ಸೂರ್ಯ, ಮಹುವಾ ಮೊಯಿತ್ರಾ ಮತ್ತು ಪ್ರಜ್ವಲ್ ರೇವಣ್ಣ ಮಾತುಗಳು ಹೆಚ್ಚು ವೈರಲ್  ಆದವು. ತೇಜಸ್ವಿಯ ಆಂಗ್ಲ ಭಾಷೆಯ ಮೇಲಿನ ಹಿಡಿತ, ಏರಿಳಿತ ಮತ್ತು ಆತ್ಮವಿಶ್ವಾಸ ಹೆಚ್ಚು ಗಮನ ಸೆಳೆಯಿತು.

ಅಧಿಕಾರ ಕಳೆದುಕೊಂಡ ನಂತರ 2 ಬೆಡ್‌ರೂಂ ಫ್ಲಾಟ್‌ಗೆ ಸುಷ್ಮಾ ಸ್ವರಾಜ್ ಶಿಫ್ಟ್!

Tap to resize

Latest Videos

undefined

ಆದರೆ ಹಿಂದುತ್ವದ ಜೊತೆಜೊತೆಗೆ ಸ್ವಲ್ಪ ಆಡಳಿತ, ಸಂವಿಧಾನ, ಯುವಕರ ಪ್ರಸಕ್ತ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಅಬ್ಬರದ ಜೊತೆಗೆ ಪ್ರಬುದ್ಧತೆ ಕೂಡ ಬರಬಹುದು. ಬರೀ ಹಿಂದುತ್ವ ಮಾತನಾಡಿದರೆ ಅದೇ ವಿಷಯ ಮಾತನಾಡುವ ಕರ್ನಾಟಕದ ಇನ್ನೊಬ್ಬ ಸಂಸದರಂತೆ ಆಗಿಬಿಡುವ ರಿಸ್ಕ್‌ ಕೂಡ ಇದೆ. 

ಕಾವೇರಿ ಕಾವು: ಸುಮಲತಾ ನಡೆ ಹೇಗಿರಬಹುದು?

ಇನ್ನೊಂದು ವಿಷಯ ಎಂದರೆ, ಪಾರ್ಲಿಮೆಂಟ್‌ನಲ್ಲಿ ಘಟಾನುಘಟಿಗಳ ಹೆಸರು ಹೇಳುವಾಗ ಬರೀ ಬಿಜೆಪಿ ನಾಯಕರ ಹೆಸರು ಹೇಳಿ, ಪಂಡಿತ್‌ ನೆಹರು, ಲೋಹಿಯಾ, ಇಂದಿರಾ, ಇಂದ್ರಜಿತ್‌ ಗುಪ್ತಾ, ಪೀಲೂ ಮೋದಿ ಹೆಸರು ಕೂಡ ಅವರು ಎತ್ತಲಿಲ್ಲ. 28 ವರ್ಷದ ಯುವ ಸಂಸದನಿಗೆ ಇಷ್ಟೊಂದು ಮಡಿವಂತಿಕೆ ಬೇಕೆ? ಇನ್ನು ಪ್ರಜ್ವಲ್ ಗೂ ಇಂಗ್ಲಿಷ್‌ ಮೇಲೆ ಹಿಡಿತವಿದ್ದು, ಸ್ಟೈಲ್ ಕೂಡ ಇದೆ. 

ಇನ್ನಷ್ಟು ತಯಾರಿ ಮಾಡಿಕೊಂಡು ಬಂದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಜ್ವಲ್‌ ಅಜ್ಜನಂತೆ ದಿಲ್ಲಿಯಲ್ಲಿ ಕನ್ನಡದ ಗಟ್ಟಿದನಿ ಆಗಬಹುದು. ಅಂದಹಾಗೆ ಉಡುಪಿಯ ಶೋಭಾ ಕರಂದ್ಲಾಜೆ ಹಿಂದಿ ಭಾಷಣ ಮಾಡಿದ್ದು ಕೂಡ ಸಖತ್‌ ವೈರಲ್ ಗಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ  ಕ್ಲಿಕ್ ಮಾಡಿ 

click me!