ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ಕಾರಣ ಯಾರು..?

By Web DeskFirst Published Dec 25, 2018, 11:15 AM IST
Highlights

ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಇನ್ನು ರಾಮಲಿಂಗಾ ರೆಡ್ಡಿ ಅವರಿಗೂ ಕೂಡ ಸಚಿವ ಸ್ಥಾನ ತಪ್ಪಿದ್ದು, ಇದಕ್ಕೆ ತಾವು ಕಾರಣ ಅಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

ತುಮ​ಕೂರು: ರಾಮ​ಲಿಂಗಾ ರೆಡ್ಡಿ ಅವರಿಗೆ ಮಂತ್ರಿ ಪದವಿ ತಪ್ಪಲು ನಾನು ಕಾರಣವಲ್ಲ. ಅದು ಪಕ್ಷದ ತೀರ್ಮಾನ ಎಂದು ಉಪ​ಮು​ಖ್ಯ​ಮಂತ್ರಿ ಡಾ. ಜಿ. ಪರ​ಮೇ​ಶ್ವರ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿದ ಅವರು, ಸಚಿವ ಸಂಪುಟದ ವಿಸ್ತ​ರಣೆ ವೇಳೆ ಅಸಮಾಧಾನ ಉಂಟಾಗುವುದು ಸಹಜ. ವರಿ​ಷ್ಠರು ಯಾರನ್ನು ಮಂತ್ರಿ ಮಾಡ​ಬೇಕು, ಯಾರಿಗೆ ಆದ್ಯತೆ ನೀಡ​ಬೇಕು ಎಂದು ನಮ್ಮಲ್ಲಿ ಸಲಹೆ ಕೇಳು​ತ್ತಾರೆ ಅಷ್ಟೆ. ಇವ​ರನ್ನೇ ಮಾಡಿ ಅಂತಾ ಹೇಳಿ​ದರೆ ಹೈಕ​ಮಾಂಡ್‌ ಕೇಳಲ್ಲ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತ​ರ​ಣೆ ವೇಳೆ ನನ್ನ ಅಥವಾ ಸಿದ್ದ​ರಾ​ಮಯ್ಯ ಅವರ ಕೈ ಮೇಲಾ​ಗಿದೆ ಎನ್ನು​ವುದು ಮಾಧ್ಯ​ಮ​ದ​ವರ ಊಹೆ. ಯಾರ ಕೈ ಮೇಲೂ ಆಗಿಲ್ಲ, ಕೆಳಗೂ ಆಗಿಲ್ಲ. ಶಾಸಕರು ಹಾಗೂ ಸಚಿವರ ಪ್ರತಿಕ್ರಿಯೆ ಬಗ್ಗೆ ಬರುತ್ತಿರುವ ವಿಚಾರಗಳ ಬಗ್ಗೆ ವಾಸ್ತವ ತಿರುಚಲಾಗುತ್ತಿದೆ ಎಂದರು.

ರಮೇಶ್‌ ಜಾರಕಿಹೊಳಿ ರಾಜೀನಾಮೆ ವಿಚಾರ ಗೊತ್ತಿಲ್ಲ, ಅವರ ಮನ​ವೊ​ಲಿ​ಸುವ ಯತ್ನ ಮಾಡು​ತ್ತೇನೆ. ಹಾಗೆಯೇ ಖರ್ಗೆ ಅವರ ಬಳಿಯೂ ಮಾತ​ನಾ​ಡು​ತ್ತೇನೆ. ಎಂ.ಬಿ.ಪಾಟೀ​ಲ್‌ಗೆ ಗೃಹ ಖಾತೆ ನೀಡುವ ಕುರಿತು ಯಾವುದೇ ಚರ್ಚೆ ನಡೆ​ದಿಲ್ಲ. ಅದನ್ನು ಹೈಕ​ಮಾಂಡ್‌ ನಿರ್ಧ​ರಿ​ಸು​ತ್ತದೆ ಎಂದ​ರು.

ಒಂದು ವಾರದಲ್ಲಿ ಎಲ್ಲ ಗೊಂದಲವೂ ತಿಳಿಯಾಗಲಿದೆ. ಜೆಡಿಎಸ್‌ನಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಅವರು ತುಂಬು​ತ್ತಾರೆ. ಸದ್ಯಕ್ಕೆ ಯಾವುದೇ ತೊಂದ​ರೆ​ಯಿಲ್ಲ. ಸರ್ಕಾರ ಸುಭ​ದ್ರ​ವಾ​ಗಿದೆ ಎಂದರು.

click me!