
ಚೆನ್ನೈ (ಮೇ. 31): ಸ್ಟರ್ಲೈಟ್ ಹಿಂಸಾಚಾರದಲ್ಲಿ ಗಾಯಗೊಂಡವರ ಭೇಟಿಗೆ ಆಗಮಿಸಿದ್ದ ನಟ ಕಂ ರಾಜಕಾರಣಿ ರಜನೀಕಾಂತ್ ಅವರನ್ನು ಗಾಯಾಳುವೊಬ್ಬ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ತೂತ್ತುಕುಡಿಯ ಆಸ್ಪತ್ರೆಯಲ್ಲಿ ನಡೆದಿದೆ.
ಗಾಯಾಳುಗಳ ಸ್ಥಿತಿಗತಿ ವಿಚಾರಣೆಗಾಗಿ ಆಸ್ಪತ್ರೆಗೆ ಆಗಮಿಸಿದ ರಜನೀಕಾಂತ್ ಅವರನ್ನು ತಡೆದ ಗಾಯಾಳು ಯುವಕನೋರ್ವ, ‘ನೀನ್ಯಾರು,’ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ರಜನಿ ಸೌಮ್ಯವಾಗಿಯೇ ‘ನಾನು ರಜನೀಕಾಂತ್ ಚೆನ್ನೈನಿಂದ ಬಂದಿದ್ದೇನೆ’ ಎಂದಿದ್ದಾರೆ.
ಈ ಉತ್ತರಕ್ಕೂ ತಣ್ಣಗಾಗದ ಯುವಕ, ‘ನಮ್ಮ ಭೇಟಿಗೆ ಬರಲು ನಿಮಗೆ 100 ದಿನಗಳು ಬೇಕಾಯಿತೇ’ ಎಂದು ಕಿಡಿಕಾರಿದ್ದಾನೆ. ಈ ಮೂಲಕ 100 ದಿನಗಳಿಂದ ಸ್ಟರ್ಲೈಟ್ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರೂ, ಅದಕ್ಕೆ ಸಹಕಾರ ನೀಡದ್ದಕ್ಕೆ
ರಜನೀಕಾಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದೇ ಔಏಳೆ ಸ್ಟರ್ಲೈಟ್ ಹಿಂಸಾಚಾರದಲ್ಲಿ ಸಾವನ್ನಪ್ಪಿದ 13 ಜನರ ಕುಟುಂಬ ಸದಸ್ಯರಿಗೆ ರಜನಿ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.