
ನವದೆಹಲಿ(ನ. 23): ಐನ್ನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ದಿಢೀರನೇ ರದ್ದುಗೊಳಿಸಿದ ಕೇಂದ್ರ ಸರಕಾರ ಕ್ರಮದಿಂದ ಹೆಚ್ಚೂಕಡಿಮೆ 2,300 ಕೋಟಿ ನೋಟುಗಳು ಮೌಲ್ಯ ಕಳೆದುಕೊಂಡಿವೆ. ಇಷ್ಟು ಪ್ರಮಾಣದ ನೋಟುಗಳನ್ನ ಏನು ಮಾಡಲಾಗುವುದು? ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ವರ್ಷವೂ ಹರಿದ ಹಾಗೂ ಹಾಳಾದ ನೋಟುಗಳನ್ನು ಕಸಕ್ಕೆ ಎಸೆದುಬಿಡುತ್ತದೆ. ಈ ಬಾರಿಯೂ ಬಹುತೇಕ ನೋಟುಗಳನ್ನು ಅದೇ ರೀತಿಯಲ್ಲಿ ಕಸಕ್ಕೆ ಹಾಕಿಬಿಡುವ ಸಾಧ್ಯತೆ ಇದೆ. ಜೊತೆಗೆ, ಕಾರ್ಖಾನೆಗಳಿಗೆ ಬೆಂಕಿ ನೀಡುವ ಬ್ರಿಕೆಟ್'ಗಳ ತಯಾರಿಗೆ ಈ ನೋಟುಗಳನ್ನು ಬಳಸಬಹುದು. ವಿವಿಧ ರೀತಿಯ ಅಲಂಕಾರಿಕ ವಸ್ತುಗಳ ತಯಾರಿಗೂ ಈ ನೋಟುಗಳು ಬಳಕೆಯಾಗಬಹುದು ಎಂದು ಆರ್'ಬಿಐ ಮೂಲಗಳು ತಿಳಿಸಿವೆ.
ಎವರೆಸ್ಟ್ ಶಿಖರಕ್ಕಿಂತ 300 ಪಟ್ಟು ಎತ್ತರ:
ಭಾರತದಲ್ಲಿ ಸದ್ಯಕ್ಕೆ ರದ್ದಾದ ಹಳೆಯ ನೋಟುಗಳನ್ನ ಒಂದೆಡೆ ಸೇರಿಸಿದರೆ ಏನಾಗಬಹುದು? ಈ 2300 ಕೋಟಿ ನೋಟುಗಳನ್ನು ಒಂದರ ಮೇಲೊಂದು ಪೇರಿಸುತ್ತಾ ಹೋದರೆ ಎವರೆಸ್ಟ್ ಶಿಖರಕ್ಕಿಂತ 300 ಪಟ್ಟು ಹೆಚ್ಚು ಎತ್ತರಕ್ಕೇರುತ್ತದಂತೆ. ಒಂದರ ಪಕ್ಕ ಒಂದು ಜೋಡಿಸುತ್ತಾ ಹೋದರೆ ಭೂಮಿಯಿಂದ ಚಂದ್ರನಿಗೆ 5 ಬಾರಿ ಸುತ್ತುಹಾಕಿ ಬರಬಹುದಂತೆ. ಇಷ್ಟು ಬೃಹತ್ ಪ್ರಮಾಣದ ನೋಟುಗಳನ್ನು ನಾಶ ಮಾಡುವುದೂ ಕೂಡ ಒಂದು ದೊಡ್ಡ ಕಾರ್ಯವೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.