
ಬೆಂಗಳೂರು(ಆ.06): ಡಿಕೆಶಿ ಸಾಮ್ರಾಜ್ಯದ ಮೇಲೆ ನಡೆದ ಐಟಿ ದಾಳಿ ಮುಕ್ತಾಯವಾಗಿದೆ. ನಾಲ್ಕು ದಿನಗಳ ಸುದೀರ್ಘ ದಾಳಿಯ ಬಳಿಕ ಡಿಕೆಶಿ ಮುಂದಿನ ಹಾದಿಯ ಬಗ್ಗೆ ಚರ್ಚೆ ಆರಂಭವಾಗಿದೆ. ಹಾಗಾದರೆ, ಐಟಿ ದಾಳಿ ಡಿಕೆಶಿಗೆ ಮುಳುವಾಗಲಿದೀಯಾ..? ಅಥವಾ ಐಟಿ ದಾಳಿಗಷ್ಟೇ ಸೀಮಿತವಾಗಲಿದೀಯಾ ವಿರೋಧಿಗಳ ರಣತಂತ್ರ..!!! ಮುಂದೇನು..? ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಡಿಕೆಶಿ ಸಾಮ್ರಾಜ್ಯದ ಮೇಲೆ ಐಟಿ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ವಿವರ ಪಡೆದುಕೊಂಡಿದೆ. ಧವನಂ ಜ್ಯೂವಲರ್ಸ್, ಶರ್ಮಾ ಟ್ರಾವೆಲ್ಸ್, ಗೂರೂಜಿ ದ್ವಾರಕಾನಾಥ್ ನಿವಾಸ ಸೇರಿ ಮುಂತಾದ ಕಡೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಡಿಕೆಶಿಗೆ ಪ್ರಶ್ನೆಗಳ ಸುರಿಮಳೆಗೇರಿದಿದ್ದರು. ಇದೀಗ ಐಟಿ ದಾಳಿ ಮುಕ್ತಾಯವಾಗಿದ್ದು, ಡಿಕೆಶಿಗೆ ಮುಂದಿನ ಹಾದಿ ಕಂಟಕವಾಗಲಿದೀಯಾ ಅನ್ನುವ ಪ್ರಶ್ನೆ ಎದುರಾಗಿದೆ.
ಸಹಜವಾಗಿ ಐಟಿ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಘೋಷಿತ ಆದಾಯ ಮತ್ತು ಪ್ರತಿ ವರ್ಷ ಕಟ್ಟಲಾಗುವ ತೆರಿಗೆಯನ್ನ ಅಂದಾಜಿಸಿ ಮೌಲ್ಯ ಹಾಕಲಾಗುತ್ತದೆ. ಒಂದು ವೇಳೆ, ಘೋಷಿತ ಆದಾಯಕ್ಕಿಂತ, ಹೆಚ್ಚು ಆದಾಯ ಗಳಿಸುತ್ತಿದ್ದು ಕಂಡು ಬಂದರೆ, ಆದಾಯ ತೆರಿಗೆ ಅಧಿಕಾರಿಗಳು ಗಳಿಸಿದ ಆದಾಯದ ಮೇಲೆ ಶೇಕಡಾವಾರು ಪೆನಾಲ್ಟಿ ಹಾಕಲಾಗುವ ಅಧಿಕಾರಿವನ್ನೇಷ್ಟೇ ಹೊಂದಿರುತ್ತಾರೆ. ಆದರೆ, ಆದಾಯ ತೆರಿಗೆ ಅಧಿಕಾರಿಗಳ ದಾಳಿ ವೇಳೆ, ಹಣ ವಿನಿಮಯ ಆಗಿದ್ದರೆ, ಅಥವಾ ವಿದೇಶಗಳಲ್ಲಿ ಹಣ ಹೂಡಿಕೆ ಮಾಡಿದ್ರೆ, ಮಾತ್ರ, ಈಡಿ ಅಧಿಕಾರಿಗಳಿಗೆ ಸಂಬಂಧಪಟ್ಟ ಹೂಡಿಕೆಗಳ ಬಗ್ಗೆ ಮಾಹಿತಿ ನೀಡಬಹುದು. ಡಿಕೆಶಿ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಈ ಎರಡು ಅಂಶಗಳು ಕಂಡುಬಂದರೆ, ಮಾತ್ರ ಈಡಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ.
ಇಡಿ ಎಂಟ್ರಿ ಆದ್ರೆ ಮುಂದೇನು..?
ಐಟಿ ಅಧಿಕಾರಿಗಳು ನೀಡುವ ಮಾಹಿತಿ ಆಧಾರದ ಮೇಲೆ ಈಡಿ ಅಧಿಕಾರಿಗಳ ನಿರ್ಧಾರ ನಿಂತಿರುತ್ತದೆ. ಹೀಗಾಗಿ, ಐಟಿ ಅಧಿಕಾರಿಗಳ ವರದಿಯ ಮೇಲೆಯೇ ಡಿಕೆಶಿ ಭವಿಷ್ಯ ನಿಂತಿದೆ ಎನ್ನಬಹುದು. ಒಂದು ವೇಳೆ, ವಿದೇಶದಲ್ಲಿ ಹಣ ಹೂಡಿಕೆ, ಅಥವಾ, ಹಣ ವಿನಿಮಯ ಆಗಿದ್ದಂಥ ಅಂಶಗಳ ಬಗ್ಗೆ, ಈಡಿ ಅಧಿಕಾರಿಗಳಿಗೆ, ಮಾಹಿತಿ ಹೋದ್ರೆ, ಎಫ್ಐಆರ್ ದಾಖಲಿಸಬಹುದು. ಡಿಕೆಶಿ ಅವ್ರನ್ನು ಬಂಧಿಸಿ ವಿಚಾರಣೆಗೊಳಪಡಿಸಬುದು.
ಒಟ್ನಲ್ಲಿ ಐಟಿ ದಾಳಿಯ ನೇತೃತ್ವ ವಹಿಸಿದ್ದ ಅಧಿಕಾರಿಗಳು ನೀಡುವ ವರದಿಯೇ ಮೇಲೆಯೇ, ಡಿಕೆಶಿ ಭವಿಷ್ಯ ನಿಂತಿದೆ ಎನ್ನಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.