
ಬಳ್ಳಾರಿ(ಆ.06): ಕೇಂದ್ರ ಸರ್ಕಾರ ಪ್ರತಿಯೊಬ್ಬರ ಆಧಾರ್ ಕಡ್ಡಾಯ ಮಾಡಿದೆ. ಆದರೆ ಆಧಾರ್'ನಿಂದ ಏನು ಲಾಭ ,ಬಡವರಿಗೆ ಏನ್ ಉಪಯೋಗ ಎಂಬ ಪರ,ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆಧಾರ್'ನಿಂದ ಯಾರಿಗೆ ಎಷ್ಟು ಇಪಯೋಗ ಆಗಿದೆಯೋ ಗೊತ್ತಿಲ್ಲ. ಆದರೆ ಮೂರು ಅನಾಥ ಮಕ್ಕಳ ಪೋಷಕರ ಪತ್ತೆಗೆ ಆಧಾರ್ ನೆರವಾಗಿದೆ.
ಸಾರ್ವಜನಿಕರಲ್ಲಿ ಆಧಾರ್ ಕಡ್ಡಾಯದ ಕುರಿತು ಹಲವು ಭಿನ್ನಾಭಿಪ್ರಾಯಗಳಿವೆ. ಆದರೆ ಇದೇ ಆಧಾರ್ ಅನಾಥವಾಗಿದ್ದ ಮೂರು ಮಕ್ಕಳ ವಿಳಾಸವನ್ನ ಹುಡುಕಿ ಕೊಡುವಲ್ಲಿ ಸಹಕಾರಿಯಾಗಿದೆ. ಆಧಾರ್ ನಿಂದಾಗಿ ಅನಾಥವಾಗಿದ್ದ ಮಕ್ಕಳು ಪೋಷಕರ ಮಡಿಲು ಸೇರುವಂತಾಗಿದೆ.
ಅದು ಕಳೆದು ಹೋಗಿದ್ದ ಮಕ್ಕಳು ಪೋಷಕರ ಮಡಿಲು ಸೇರಿದ್ದ ಸಾರ್ಥಕ ಕ್ಷಣಗಳು.ಈ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು ಬಳ್ಳಾರಿ ಬುದ್ಧಿಮಾಂದ್ಯ ಮಕ್ಕಳ ಕೇಂದ್ರ. ಹೌದು ಕಳೆದ ನಾಲ್ಕು ವರ್ಷಗಳ ಹಿಂದೆ ಆಂದ್ರಪ್ರದೇಶದ ಕೃಷ್ಣಗಿರಿ ,ಚಿತ್ತೂರು,ತೆಲಂಗಾಣದಿಂದ ಮೂರು ಮಕ್ಕಳು ಪೋಷಕರಿಂದ ಬೇರ್ಪಟ್ಟಿದ್ರು. ಅನಾಥರಾಗಿದ್ದ ಮಕ್ಕಳು ಬಳ್ಳಾರಿಯ ಬುದ್ದಿಮಾಂದ್ಯ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ರು. ಬಾಲಂದಿರದ ಮಕ್ಕಳಿಗೆ ಆಧಾರ ಕಡ್ಡಾಯವಾಗಿ ನೊಂದಾಯಿಸುವ ಆದೇಶದಿಂದ ಅಧಿಕಾರಿಗಳು ಆಧಾರ್ ಮಾಡಿಸಲು ಮುಂದಾಗಿದ್ರು. ಆದ್ರೆ ಸಾಫ್ಟವೇರ್ ಈ ಮೂವರು ಬಾಲಕರ ಹೆಬ್ಬೆಟ್ಟು ಗುರುತನ್ನ ನಿರಾಕರಿಸಿತ್ತು. ಜೊತೆಗೆ ಈಗಾಗಲೇ ನೊಂದಣಿಯಾಗಿದ್ದ ವಿಳಾಸ ಕೂಡಾ ತಿಳಿದು ಬಂತು. ಈ ಮಾಹಿತಿ ಪಡೆದ ಅಧಿಕಾರಿಗಳು ಪೋಷಕರನ್ನ ಸಂಪರ್ಕಿಸಿದ್ದಾರೆ.
ಒಂದಲ್ಲಾ ಒಂದು ಕಾರಣಕ್ಕೆ ಪೋಷಕರಿಂದ ಬೇರ್ಪಟ್ಟಿದ್ದ ಮಕ್ಕಳ ಪತ್ತೆಗಾಗಿ ಪೋಷಕರು ಪರದಾಟ ನಡೆಸಿದ್ರು. ಆದರೆ ಪ್ರಯೋಜನವಾಗಿರಲಿಲ್ಲ.ಇದೀಗ, ಆಧಾರ್ ನೆರವಿನಿಂದ ಮಕ್ಕಳು ಮಡಿಲು ಸೇರಿರುವುದು ಪೋಷಕರಿಗೆ ಸಂಸತ ತಂದಿದೆ. ಇದೀಗ ಅಧಿಕಾರಿಗಳು ನಿಯಮದಂತೆ ಮುಚ್ಚಳಿಕೆ ಬರೆಸಿಕೊಂಡು ಮಕ್ಕಳನ್ನ ಹಸ್ತಾಂತರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.