
ನವದೆಹಲಿ(ಸೆ.29): ಉರಿ ಸೇನಾ ನೆಲೆಯ ಮೇಲೆ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸಿ 19 ಯೋಧರನ್ನು ಹತ್ಯೆಗೈದ ಘಟನೆಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಸೇನಾ ನೆಲೆಗಳ ಮೇಲೆ ಬುಧವಾರ ರಾತ್ರಿ ಸರ್ಜಿಕಲ್ ಅಟ್ಯಾಕ್ ಮೂಲಕ ಕ್ಷಿಪ್ರ ಕಾರ್ಯಾಚರಣೆ ಸುಮಾರು 40 ಉಗ್ರರನ್ನು ಹತ್ಯೆಗೈದಿದ್ದಾರೆ.
ಹಾಗಾದರೆ ಸರ್ಜಿಕಲ್ ದಾಳಿ ಎಂದರೆ ಏನು ಅದರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ
1) ಭಾರತದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಪ್ರತ್ಯೇಕ ತಂಡವೇ ಇರುತ್ತೆ
2) ಎಲ್ಲಿ ದಾಳಿ ಮಾಡಬೇಕು..? ಎಲ್ಲೆಲ್ಲಿ ಏನೇನಿದೆ..? ಎಷ್ಟು ಜನ ದಾಳಿ ಮಾಡಬೇಕು..? ಎಲ್ಲವೂ ನಿರ್ಧಾರವಾಗಿರುತ್ತೆ
3) ಎಷ್ಟು ಹೊತ್ತಿನಲ್ಲಿ ದಾಳಿ ಮುಗಿಸಬೇಕು ಅನ್ನೋದು ನಿರ್ಧಾರವಾಗಿರುತ್ತೆ. ನಿಮಿಷವೂ ವ್ಯತ್ಯಾಸವಾಗುವಂತಿಲ್ಲ
4) 30 ನಿಮಿಷದಲ್ಲಿ ದಾಳಿ ಮುಗಿಸಬೇಕು ಎಂದರೆ, 30 ನಿಮಿಷ ಅಷ್ಟೆ. 31ನೇ ನಿಮಿಷಕ್ಕೆ ದಾಳಿ ವಿಸ್ತರಣೆ ಆಗಲ್ಲ
5) ಈ ತಂಡಕ್ಕೆ, ಐಬಿ, ರಾ ಸೇರಿದಂತೆ ಗುಪ್ತಚರ ಇಲಾಖೆ ಮಾಹಿತಿಗಳು ರವಾನೆಯಾಗುತ್ತಲೇ ಇರುತ್ತವೆ
6) ಮೂರೂ ಪಡೆಗಳು ಒಟ್ಟಾಗಿ ದಾಳಿ ಮಾಡಬೇಕೆಂದರೆ, ಮೊದಲೇ ಪ್ಲಾನ್ ಆಗುತ್ತೆ
7) ದಾಳಿ ಮಾಡಬೇಕಾದ ಸ್ಥಳಕ್ಕೆ ಹೆಲಿಕಾಪ್ಟರ್ನಲ್ಲಿ ಶಸ್ತ್ರಸಜ್ಜಿತ ಕಮಾಂಡೋಗಳನ್ನು ಬಿಡಲಾಗುತ್ತೆ
8) ಯೋಜನೆ ಸರಿಯಾಗಿದ್ದರೆ, ದಾಳಿ ಮಾಡಿದ ತಂಡದಲ್ಲಿ ಪ್ರಾಣಹಾನಿಯಾಗುವುದಿಲ್ಲ
9) ಇಂದಿನ ದಾಳಿ ಎಷ್ಟು ಯೋಜಿತವಾಗಿತ್ತು ಎಂದರೆ, ನಮ್ಮ ಒಬ್ಬ ಸೈನಿಕರೂ ಕೂಡಾ ಗಾಯಾಳುವಾಗಿಲ್ಲ
10) ಈ ತಂಡದ ಕಾರ್ಯಾಚರಣೆ, ತಂಡದಲ್ಲಿ ಯಾರಿರುತ್ತಾರೆ ಎಲ್ಲವೂ ಮುಖ್ಯಸ್ಥರಿಗಷ್ಟೇ ಗೊತ್ತಿರುತ್ತೆ
11) ಕಾರ್ಯಾಚರಣೆ ಎಷ್ಟು ನಿಗೂಢವಾಗಿರುತ್ತೆ ಎಂದರೆ, ಬೇರೆಯವರಿಗೆ ಮುಗಿಯುವವರೆಗೂ ಗೊತ್ತಾಗುವುದಿಲ್ಲ
12) ಹೀಗಾಗಿಯೇ ಇಂದಿನ ದಾಳಿಯ ವಿವರ ಅಧಿಕಾರಿಗಳು ಪ್ರೆಸ್ಮೀಟ್ ಮಾಡುವವರೆಗೆ ಗೊತ್ತಾಗಲಿಲ್ಲ
--
ಸರ್ಜಿಕಲ್ ಅಟ್ಯಾಕ್
1) ದಾಳಿ ಸ್ಥಳಕ್ಕೆ ಹೆಲಿಕಾಪ್ಟರ್ನಲ್ಲಿ ಶಸ್ತ್ರಸಜ್ಜಿತ ಕಮಾಂಡೋಗಳನ್ನು ಬಿಡಲಾಗುತ್ತೆ
2) ಯೋಜನೆ ಸರಿಯಾಗಿದ್ದರೆ, ದಾಳಿ ಮಾಡಿದ ತಂಡದಲ್ಲಿ ಪ್ರಾಣಹಾನಿಯಾಗುವುದಿಲ್ಲ
3) ಈ ದಾಳಿ ಎಷ್ಟು ಯೋಜಿತವಾಗಿತ್ತು ಅಂದರೆ ನಮ್ಮ ಸೈನಿಕರಿಗೆ ಗಾಯವಾಗಿಲ್ಲ
4) ಇದರ ಕಾರ್ಯಾಚರಣೆ, ತಂಡದಲ್ಲಿ ಯಾರಿರುತ್ತಾರೆ ಎಲ್ಲವೂ ಮುಖ್ಯಸ್ಥರಿಗಷ್ಟೇ ಗೊತ್ತಿರುತ್ತೆ
5) ಹೀಗಾಗಿಯೇ ದಾಳಿಯ ವಿವರ ಪ್ರೆಸ್ಮೀಟ್ ಮಾಡುವವರೆಗೆ ಗೊತ್ತಾಗಲಿಲ್ಲ
ಹೇಗಿತ್ತು ಗೊತ್ತಾ ಆಪರೇಷನ್?
---
ಸಂಚು ರೂಪಿಸಿದ್ದ ಉಗ್ರರು
ಆಪರೇಷನ್ ಹೈಲೈಟ್ಸ್!
ಇಂಥಾ ದಾಳಿ.. ಇದೇ ಮೊದಲು..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.