ಬಿಜೆಪಿ ಸೋಲಿಗೆ ಕಾರಣಗಳೇನು?

Published : Apr 14, 2017, 05:35 AM ISTUpdated : Apr 11, 2018, 12:46 PM IST
ಬಿಜೆಪಿ ಸೋಲಿಗೆ ಕಾರಣಗಳೇನು?

ಸಾರಾಂಶ

ಗುರುವಾರ ಹೊರಬಿದ್ದ ದೇಶದ ವಿವಿಧ ರಾಜ್ಯಗಳ ಉಪಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಿದ್ದರೂ ಕರ್ನಾಟಕದಲ್ಲಿ ಮಾತ್ರ ಸೋಲು ಕಾಣಬೇಕಾಯಿತು. ಇದು ಸ್ವತಃ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ರಾಜ್ಯದ ಹಿರಿಯ ನಾಯಕರಿಗೆ ಅರಗಿಸಿಕೊ ಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಿದ್ದಾಗ ಸೋಲಿಗೆ ಕಾರಣಗಳೇನು ಎಂಬು ದರ ಬಗ್ಗೆ ಪಕ್ಷದಲ್ಲೇ ಆತ್ಮಾವಲೋಕನ ನಡೆಯತೊಡಗಿದೆ.

ಬಿಜೆಪಿಯ ರಾಷ್ಟ್ರೀಯ ಅಮಿತ್‌ ಶಾ ಮತ್ತವರ ತಂಡ ದಕ್ಷಿಣ ಭಾರತದತ್ತ ದಾಂಗುಡಿ ಇಡಲು ಸಜ್ಜಾಗುತ್ತಿರುವ ವೇಳೆ ಕರ್ನಾಟಕದ 2 ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲುಂಟಾಗಲಿದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ. ಗುರುವಾರ ಹೊರಬಿದ್ದ ದೇಶದ ವಿವಿಧ ರಾಜ್ಯಗಳ ಉಪಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಿದ್ದರೂ ಕರ್ನಾಟಕದಲ್ಲಿ ಮಾತ್ರ ಸೋಲು ಕಾಣಬೇಕಾಯಿತು. ಇದು ಸ್ವತಃ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ರಾಜ್ಯದ ಹಿರಿಯ ನಾಯಕರಿಗೆ ಅರಗಿಸಿಕೊ ಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಿದ್ದಾಗ ಸೋಲಿಗೆ ಕಾರಣಗಳೇನು ಎಂಬು ದರ ಬಗ್ಗೆ ಪಕ್ಷದಲ್ಲೇ ಆತ್ಮಾವಲೋಕನ ನಡೆಯತೊಡಗಿದೆ.
1)ಉಪಚುನಾವಣೆ ಆರಂಭವಾಗುವ ಮೊದ ಲೇ ಸಾಕಷ್ಟುಅಬ್ಬರ ಮೂಡಿಸಿದ್ದು ಆಮೆ- ಮೊಲದ ಓಟದ ಕಥೆಯಂತಾಗಿದೆ. ಆರಂಭದಲ್ಲಿ ಸಾಕಷ್ಟುಉತ್ಸಾಹದಿಂದ ಓಡಿದ ಬಿಜೆಪಿ ನಂತರ ಸುಸ್ತಾಗತೊಡಗಿತು. ಹೀಗಾಗಿ ಕಾಂಗ್ರೆಸ್‌ ಕೊನೆಯ ಅವಧಿಯಲ್ಲಿ ಉತ್ತಮ ಸಾಧನೆ ತೋರಿ ಗೆಲುವು ತನ್ನದಾಗಿಸಿಕೊಂಡಿತು.

2)ಚುನಾವಣಾ ರಣತಂತ್ರ ಹೆಣೆಯುವಲ್ಲಿ ಪಕ್ಷದ ಎಲ್ಲ ಹಿರಿಯ ನಾಯಕರ ಒಳಗೊಳ್ಳುವಿಕೆ ಇರಲಿಲ್ಲ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆ ದುಕೊಳ್ಳದೆ ತಮ್ಮ ಬೆಂಬಲಿಗರದ್ದೇ ಆದ ಪಡೆ ಕಟ್ಟಿಕೊಂಡು ತಂತ್ರ ರೂಪಿಸಿದರು. ಪರಿಣಾಮ, ಹಿರಿಯ ನಾಯಕರು ಕೇವಲ ಬಹಿರಂಗ ಪ್ರಚಾ ರಕ್ಕೆ ಮಾತ್ರ ಸೀಮಿತವಾಗುವಂತಾಯಿತು.

3)ಉಭಯ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾ ಯತ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿ ಇದ್ದುದರಿಂದ ಯಡಿಯೂರಪ್ಪ ಆ ಮತದಾರರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದರು. ಆದರೆ, ಇದರಿಂದ ಇತರ ಸಣ್ಣ ಪುಟ್ಟಸಮುದಾಯಗಳ ಮತದಾ ರರು ಸಂಘಟಿತರಾಗಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿದರು.

4)ಸ್ಥಳೀಯ ಲಿಂಗಾಯತ ಮತ್ತು ದಲಿತರ ನಡುವಿನ ಹಳೆಯ ಸಂಘರ್ಷವನ್ನು ತೊಡೆದು ಹಾಕುವಲ್ಲಿ ಬಿಜೆಪಿ ನಾಯಕರು ಪೂರ್ಣ ಯಶ ಸ್ವಿಯಾಗಲಿಲ್ಲ. ಹೀಗಾಗಿ, ಯಡಿಯೂರಪ್ಪ ಅವರ ಮುಖ ನೋಡಿದರೂ ಲಿಂಗಾಯತ ಸಮುದಾಯದ ಮತಗಳು ಬಿಜೆಪಿಗೆ ಪೂರ್ಣ ಬೆಂಬಲ ನೀಡಲಿಲ್ಲ.

5)ಎಲ್ಲಕ್ಕಿಂತ ಹೆಚ್ಚಾಗಿ ನಂಜನಗೂಡಿನ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್‌ ಮುಖಂಡ ರನ್ನು ಗುರಿಯಾಗಿಸಿ ಸತತ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಅವರೂ ಇದನ್ನೇ ಅನುಸರಿಸಿ ದರು. ಹಲವು ತೀಕ್ಷ್ಣ ಪದಗಳು ಬಳಕೆಯಾದವು. ಇದು ಕಾಂಗ್ರೆಸ್‌ ಪರವಾಗಿ ಜನರಲ್ಲಿ ಸಹಾ ನುಭೂತಿ ಬೆಳೆಯುವುದಕ್ಕೆ ಕಾರಣವಾಯಿತು.

6)ಸಂಘ ಪರಿವಾರದ ಮುಖಂಡರು ಅಥವಾ ಕಾರ್ಯಕರ್ತರನ್ನು ಚುನಾವಣಾ ಪ್ರಚಾರದ ಒಂದು ಭಾಗವಾಗಿ ಗಂಭೀರವಾಗಿ ಪರಿಗಣಿಸದೇ ಕಡೆಗಣಿಸಲಾಯಿತು.

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದ 2ನೇ ರಾಜಧಾನಿ ಬೆಳಗಾವಿಗೆ ಉತ್ತಮ ಭವಿಷ್ಯ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಲೋಕಸಭೆಯಲ್ಲಿ 2 ರೈತಪರ ಮಸೂದೆ ಮಂಡನೆ: ಸಂಸದ ಡಾ.ಕೆ.ಸುಧಾಕರ್