
ಬೆಂಗಳೂರು(ಏ.14): ಇಂಥಾ ನೀಚ ಕೃತ್ಯ ಮಾಡಿದ್ದು ಸುರೇಶ್ ಆಲಿಯಾಸ್ ಡೆಲ್ಲಿ ಎಂಬಾತ. ಪರರ ಸಂಗ ಮಾಡಿದ ಈತ ಸಿಲಿಕಾನ್ ಸಿಟಿಯಲ್ಲಿ ಪಿಂಪ್ ಕೆಲಸ ಮಾಡಿಕೊಂಡು ಗಲ್ಲಿ ಗಲ್ಲಿ ಅಲೆಯುತ್ತಿದ್ದ.
ಮಸಾಜ್ ಪಾರ್ಲರ್ ಮೂಲಕ ದಂಧೆ ಮಾಡಲು ಸ್ಕೆಚ್ ಹಾಕಿದ್ದ. ಈತನ ಪಕ್ಕದ ಮನೆಯ ಅರುಣ್ ಎಂಬುವರ ಬಳಿ 6 ಲಕ್ಷ ಹಣ ಕೇಳಿದ್ದಾನೆ. ಆದರೆ, ಸ್ನೇಹಿತ ಅರುಣ್, ಮಸಾಜ್ ಪಾರ್ಲರ್ ತೆರೆಯಲು ಹಣ ಕೋಡೋದಿಲ್ಲ ಅಂತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಸುರೇಶ್, 10ನೇ ತಾರೀಖು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಶ್ರಿರಾಂಪುರದ ತನ್ನ ಮನೆಯಿಂದ ಅರುಣ್ ಕೆಲಸಕ್ಕೆ ಹೋಗಿದ್ದನ್ನ ನೋಡಿದ್ದಾನೆ. ಬಳಿಕ ಸುರೇಶ್ ಸೀದಾ ಅರುಣ್ ಮನೆಗೆ ನುಗ್ಗಿದ್ದಾನೆ. ಮನೆಯಲ್ಲಿ ಮಲಗಿದ್ದ ಅರುಣ್ ಪತ್ನಿ ಸುಧಾಗೆ ಪೆಪ್ಪರ್ ಸ್ಪ್ರೆ ಯಿಂದ ಹೊಡೆದಿದ್ದಾನೆ. ಅಲ್ಲದೇ ಕೊರಳಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾನೆ. ಈತನ ಕೃತ್ಯಕ್ಕೆ ಸುಧಾ ವಿರೋಧ ವ್ಯಕ್ತಪಡಿಸಿದಾ ಮಾಂಗಲ್ಯ ಸರವನ್ನ ಕಿತ್ತುಕೊಂಡು ತನ್ನ ಎರಡು ಕೈಗಳಿಂದ ಆಕೆಯ ಕಣ್ಣಿನ ಗುಡ್ಡೆಗಳನ್ನ ತೆಗೆಯಲು ಮುಂದಾಗಿದ್ದಾನೆ. ಸುಧಾ ಕಿರುಚುತ್ತಿದ್ದಂತೆ ಸುರೇಶ್ ಪರಾರಿಯಾಗಿದ್ದಾನೆ.
ಈ ಘಟನೆಯ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾರಣಾಂತಿಕ ಹಲ್ಲೆಗೊಳಗಾದ ಮಹಿಳೆಯ ಬಲಕಣ್ಣಿಗೆ ನಾರಾಯಣ ನೇತ್ರಾಲಯದಲ್ಲಿ ಮೇಜರ್ ಸರ್ಜರಿ ಮಾಡಿದ್ದಾರೆ. ವೈದ್ಯರು ಹೇಳಿರೋ ಪ್ರಕಾರ ಸುಧಾ ಬಲಗಣ್ಣು ಇನ್ಮುಂದೆ ಕಾಣಿಸುವುದು ಅಷ್ಟಕಷ್ಟೆ ಅಂತ ಹೇಳಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.