ರೈತರೆಡೆಗೆ ಸರ್ಕಾರದ ನಿಲುವೇನು : ಈ ಬಗ್ಗೆ ಜನರ ಅಭಿಪ್ರಾಯವೇನು..?

Published : Dec 06, 2017, 12:00 PM ISTUpdated : Apr 11, 2018, 01:04 PM IST
ರೈತರೆಡೆಗೆ ಸರ್ಕಾರದ ನಿಲುವೇನು : ಈ ಬಗ್ಗೆ ಜನರ ಅಭಿಪ್ರಾಯವೇನು..?

ಸಾರಾಂಶ

*ಕಾಂಗ್ರೆಸ್ ಸರ್ಕಾರ ಹಲವು ರೈತ ಪರ ಕ್ರಮ ತೆಗೆದುಕೊಂಡಿದೆ. - ಶೇ.22 * ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರದ್ದು ಕೃಷಿಕರ ಪರ ಸರ್ಕಾರವಾಗಿರಬಹುದು ಶೇ.40 *ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಹೀಗಾಗಿ ಸಿದ್ದರಾಮಯ್ಯ ಅವರದ್ದು ರೈತ ಸ್ನೇಹಿ ಸರ್ಕಾರವಲ್ಲ - ಶೇ.29 *ಈ ಬಗ್ಗೆ ನಮಗೆ ಯಾವುದೇ ಮಾಹಿತಿಯೂ ಗೊತ್ತಿಲ್ಲ - ಶೇ.8

ಬೆಂಗಳೂರು(ಡಿ.6): ಸತತ ಬರಗಾಲ, ರೈತರ ಸರಣಿ ಆತ್ಮಹತ್ಯೆ, ಬೆಲೆ ಕುಸಿತದಿಂದಾಗಿ ಸರ್ಕಾರದ ಬಗ್ಗೆ ಈ ಮೊದಲು ಕೃಷಿಕರು ಹಾಗೂ ಶ್ರೀಸಾಮಾನ್ಯರ ವಲಯದಲ್ಲಿ ಅಸಮಾಧಾನ ಕಂಡುಬಂದಿತ್ತು. ಆದರೆ ಸಹಕಾರಿ ಬ್ಯಾಂಕುಗಳಲ್ಲಿ 50 ಸಾವಿರ ರು.ವರೆಗಿನ ಸಾಲ ಮನ್ನಾ ಮಾಡುವ ನಿರ್ಧಾರ ಹಾಗೂ ಈ ವರ್ಷ ಬರಗಾಲ ನೀಗಿಸು ವಷ್ಟು, ಭೀಕರ ಪ್ರವಾಹ ಬಂದು ಸಮಸ್ಯೆ ಆಗದಷ್ಟು ಸಮತೋಲಿತವಾಗಿ ಸುರಿದ ಮಳೆಯಿಂದಾ ಶ್ರೀಸಾಮಾನ್ಯರ ಕೋಪ ತಗ್ಗಿರುವಂತೆ ಕಾಣುತ್ತಿದೆ.

ಸರ್ಕಾರ ರೈತರ ಪರವಾಗಿ ಇರಬಹುದು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗಿದೆ. ಆದರೆ 60 ವರ್ಷ ಮೇಲ್ಪಟ್ಟವರು ಮಾತ್ರ ಇದು ರೈತ ವಿರೋಧಿ ಸರ್ಕಾರ ಎಂಬ ರೀತಿ ಭಾವನೆ ವ್ಯಕ್ತಪಡಿಸಿದ್ದಾರೆ. ಅಹಿಂದ ವರ್ಗದಲ್ಲಿ ಸಿದ್ದು ಸರ್ಕಾರದ ಬಗ್ಗೆ ಒಲವು ಕಂಡುಬಂದಿದೆ. ಒಕ್ಕಲಿಗರು ಮಾತ್ರ ಇದು ಖಂಡಿತವಾಗಿಯೂ ರೈತಸ್ನೇಹಿ ಸರ್ಕಾರವಲ್ಲ ಎಂದು ಹೇಳಿದ್ದಾರೆ. ಆದರೆ ಲಿಂಗಾಯತರಲ್ಲಿ ಅಂತಹ ಆಕ್ರೋಶ ಕಂಡುಬಂದಿಲ್ಲ.  ಮುಂಬೈ- ಕರ್ನಾಟಕದ ಶೇ.76ರಷ್ಟು ಮಂದಿ ಸರ್ಕಾರದ ಪರವಾಗಿ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಳೇ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೈ-ಕದಲ್ಲೂ ಒಳ್ಳೆಯ ಅಭಿಪ್ರಾಯ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ