
ಬೆಂಗಳೂರು(ಡಿ.6): ಕನ್ನಡಿಗರ ಅಸ್ಮಿತೆಯನ್ನು ಬಡಿದೆಬ್ಬಿಸಿ ಸ್ವಾಭಿಮಾನದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಸಿದ್ದರಾಮಯ್ಯ ಇತ್ತೀಚೆಗೆ ಪ್ರತ್ಯೇಕ ಕನ್ನಡ ಧ್ವಜದ ಪ್ರಸ್ತಾಪ ಮಾಡಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ರಾಷ್ಟ್ರೀಯವಾದವನ್ನು ಪ್ರತಿಪಾದಿಸುವ ಬಿಜೆಪಿಯವರು ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಬೇಕಿಲ್ಲ, ದೇಶಕ್ಕೊಂದೇ ತ್ರಿವರ್ಣ ಧ್ವಜ ಇರಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಸಮೀಕ್ಷೆಯಲ್ಲಿ ಕನ್ನಡಿಗರು ಪ್ರತ್ಯೇಕ ನಾಡಧ್ವಜದ ಬಗ್ಗೆ ಪ್ರಬಲವಾಗಿ ವಕಾಲತ್ತು ವಹಿಸಿರುವುದು ಕಾಣಿಸುತ್ತಿದೆ. ಶೇ.78ರಷ್ಟು ಜನರು ಕರ್ನಾಟಕಕ್ಕೆ ಅಧಿಕೃತ ರಾಜ್ಯಧ್ವಜ ಇರಬೇಕು ಎಂಬ ಅಭಿಪ್ರಾಯದ ಪರವಾಗಿದ್ದಾರೆ.
ಇದೂ ಕೂಡ ಬಿಜೆಪಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಬಹುದು. ಹೆಚ್ಚುಕಮ್ಮಿ ರಾಜ್ಯದ ಎಲ್ಲಾ ಭಾಗದಲ್ಲೂ ಪ್ರತ್ಯೇಕ ಧ್ವಜ ಇರಲಿ ಎನ್ನುವವರ ಸಂಖ್ಯೆ ಶೇ.70ಕ್ಕಿಂತ ಜಾಸ್ತಿಯಿದೆ. ಮಧ್ಯ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಂತೂ ಶೇ.90ಕ್ಕಿಂತ ಹೆಚ್ಚು ಜನ ಪ್ರತ್ಯೇಕ ಧ್ವಜದ ಪರವಾಗಿದ್ದಾರೆ. ವಿಶೇಷವೆಂದರೆ ಶೇ.70ಕ್ಕಿಂತ ಹೆಚ್ಚು ಮುಸ್ಲಿಮರು ಕೂಡ ಪ್ರತ್ಯೇಕ ಧ್ವಜದ ಪರ ಬ್ಯಾಟಿಂಗ್ ಮಾಡಿದ್ದು, ಇದು ಕಾಂಗ್ರೆಸ್ಸಿಗೆ ನಿಸ್ಸಂಶಯವಾಗಿ ಖುಷಿಯ ವಿಚಾರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.