ಡಿ.ಕೆ.ಶಿವಕುಮಾರ್ ಮುಂದಿನ ದಾರಿ ಏನು ?

By Kannadaprabha NewsFirst Published Sep 4, 2019, 7:25 AM IST
Highlights

ದೆಹಲಿಯ ಫ್ಲ್ಯಾಟ್‌ಗಳಲ್ಲಿ ಸಿಕ್ಕ 8.5 ಕೋಟಿ ರು. ನಗದಿನ ವಿಚಾರವಾಗಿ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ ಅರೆಸ್ಟ್ ಮಾಡಿದ. ಇದೀಗ ಅವರ ಮುಂದಿನ ದಾರಿ ಏನು ? 

ನವದೆಹಲಿ [ಸೆ.04]:  ಎರಡು ವರ್ಷಗಳ ಹಿಂದೆ ದೆಹಲಿಯ ಫ್ಲ್ಯಾಟ್‌ಗಳಲ್ಲಿ ಸಿಕ್ಕ 8.5 ಕೋಟಿ ರು. ನಗದಿನ ವಿಚಾರವಾಗಿ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ನಾಲ್ಕು ದಿನಗಳ ಸುದೀರ್ಘ ವಿಚಾರಣೆ ಬಳಿಕ ಮಂಗಳವಾರ ರಾತ್ರಿ ಬಂಧಿಸಿದೆ. 

ಫ್ಲ್ಯಾಟ್‌ನಲ್ಲಿ ಸಿಕ್ಕ ಹಣದ ಮೂಲದ ಕುರಿತು ಸಮರ್ಪಕ ಉತ್ತರ ನೀಡದಿರುವುದು ಹಾಗೂ ತನಿಖೆಗೆ ಅಸಹಕಾರ ತೋರಿದ ಆರೋಪದ ಮೇರೆಗೆ ಡಿ.ಕೆ.ಶಿವಕುಮಾರ್‌ರನ್ನು ಇ.ಡಿ. ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ವಯ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಡಿ.ಕೆ.ಶಿವಕುಮಾರ್‌ ಬಂಧನ ತರುವಾಯ ನಿಯಮಾವಳಿಯಂತೆ ಅವರನ್ನು ದೆಹಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯಲಾಗಿತ್ತು.   

ಡಿಕೆಶಿ ಮುಂದೇನು?

 ಇ.ಡಿ. ಹಾಜರುಪಡಿಸುವ ಕೋರ್ಟ್‌ ಮುಂದೆ ಜಾಮೀನಿಗೆ ಅರ್ಜಿ ಹಾಕುವುದು

 ಅರ್ಜಿ ತಿರಸ್ಕೃತಗೊಂಡರೆ ಜಾಮೀನಿಗಾಗಿ ಹೈಕೋರ್ಟ್‌ ಮೊರೆ ಹೋಗುವುದು

click me!