ಡಿಕೆ ಶಿವಕುಮಾರ್ ಬಂಧನ ಖಂಡಿಸಿ ರಾಮನಗರ, ಕನಕಪುರ ಬಂದ್/ ಹಲವೆಡೆ ಬಸ್ ಮೇಲೆ ಕಲ್ಲು ತೂರಾಟ/ ಬಸ್ ಗೆ ಬೆಂಕಿ ಹಚ್ಚಿದ ಅಭಿಮಾನಿಗಳು
ಬೆಂಗಳೂರು[ಸೆ. 03] ಅತ್ತ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಡಿ ಡಿಕೆ ಶಿವಕುಮಾರ್ ಅವರ ಬಂಧನ ಮಾಡಿದ್ದರೆ ಇತ್ತ ಕರ್ನಾಟಕದ ಕೆಲವು ಭಾಗದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತರು ರಾಮನಗರ, ಚೆನ್ನಪಟ್ಟಣ ಮತ್ತು ಕನಕಪುರ ಬಂದ್‌ಗೆ ಕರೆ ನೀಡಿದ್ದಾರೆ. ಡಿಕೆಶಿ ಅಭಿಮಾನಿಗಳು ರಾಮನಗರದಲ್ಲಿ ಬಸ್ ಗೆ ಕಲ್ಲು ತೂರಿದ್ದಾರೆ. ಹಲವು ಕಡೆ ಟೈರ್ ಸುಟ್ಟು ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ಮಳವಳ್ಳಿ, ಕುಣಿಗಲ್ ಬಂದ್ ಗೂ ಕರೆ ನೀಡಲಾಗಿದೆ. ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಚಿತ್ರದುರ್ಗದಲ್ಲಿಯೂ ಡಿಕೆಶಿ ಅಭಿಮಾನಿಗಳು ಬೀದಿಗೆ ಇಳಿದಿದ್ದಾರೆ.
undefined
ಡಿಕೆಶಿ ಬಂಧನದ ನಂತ್ರ ದೇವೇಗೌಡರ ನಿವಾಸಕ್ಕೆ ಎಚ್‌ಡಿಕೆ
ಹಳೆ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ನಾಳೆ ಅಂದರೆ ಬುಧವಾರ ಬೆಂಗಳೂರು-ಮೈಸೂರು ಮತ್ತು ಕನಕಪುರ ವ್ಯಾಪ್ತಿಯಲ್ಲಿ ಸಂಚರಿಸುವವರು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಒಳಿತು.
ಸೆ.04ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ