ಡಿಕೆಶಿ ವಿಚಾರಣೆ ನಡೆಸ್ತಿರುವ ಇಡಿ ಮತ್ತು ಐಟಿ ಡಿಫರೆನ್ಸ್

By Web DeskFirst Published Sep 1, 2019, 5:44 PM IST
Highlights

ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ನಡುವಣ ವ್ಯತ್ಯಾಸ ಏನು?/ ಎರಡು ಇಲಾಖೆಗಳ ನಡುವಿನ ಸಾಮ್ಯತೆ ಏನು/  ವಿಚಾರಣೆ ವ್ಯಾಪ್ತಿ ವಿಸ್ತಾರ ಎಷ್ಟು?

ಬೆಂಗಳೂರು[ಸೆ. 01] ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ನಡುವಿನ ವ್ಯತ್ಯಾಸ ಬಗ್ಗೆ ತಿಳಿದುಕೊಳ್ಳುವುದು ಪ್ರಸ್ತುತ. ಐಟಿ ಮತ್ತು ಇಡಿ ಎರಡು ಸಂಸ್ಥೆಗಳು ಕೇಂದ್ರ ಸರ್ಕಾರದ ನಿಯಂತಯ್ರಣ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ ನಿರ್ವಹಣೆ ಮತ್ತು ಕಾರ್ಯಚಟುವಟಿಕೆ ಕ್ರಮ ಬೇರೆ ಬೇರೆ.

ಸರಳವಾಗಿ ಹೇಳಬೇಕೆಂದರೆ ಆದಾಯ ತೆರಿಗೆ ಇಲಾಖೆ ಅಂದರೆ ಐಟಿ ದೇಶದ ಒಳಗಣ ಹಣಕಾಸು ವ್ಯವಹಾರ ಲೆಕ್ಕ ಹಾಕಿದರೆ, ಜಾರಿ ನಿರ್ದೇಶನಾಲಯ ಇಡಿ ದೇಶದ ಹೊರಗಿನ ಹಣಕಾಸು ವ್ಯವಹಾರಗಳನ್ನು ಪ್ರಮುಖವಾಗಿರಿಸಿಕೊಂಡು ಲೆಕ್ಕ ಹಾಕುತ್ತದೆ.

ಡಿಕೆ ಶಿವಕುಮಾರ್‌ಗೆ ದೆಹಲಿ ಇಡಿ ಕಚೇರಿಯಲ್ಲೆ ‘ಗೌರಿ-ಗಣೇಶ’ ಹಬ್ಬ

ಭಾರತದ ಒಳಗಡೆ ಗಳಿಸುವ ಆದಾಯದಲ್ಲಿ ಲೆಕ್ಕಾಚಾರ ಹಿಂದೆ ಮುಂದೆ ಆದಾಯ ಆದಾಯ ತೆರಿಗೆ ಇಲಾಖೆ ಪ್ರಶ್ನೆ ಮಾಡುತ್ತದೆ. ಭಾರತದಲ್ಲಿ ಗಳಿಸಿದ್ದಾರೆ ಎನ್ನುವ ಕಪ್ಪು ಹಣವನ್ನು ವಿದೇಶಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಮತ್ತೆ ಇಲ್ಲಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಅಥವಾ ಇನ್ಯಾವುದೋ ಮಾದರಿಯಲ್ಲಿ ಕಪ್ಪು ಹಣವನ್ನು ವೈಟ್ ಮನಿ ಮಾಡಿ ತರುವ ವಿಚಾರಗಳ ಮೇಲೆ ಇಡಿ ಕಣ್ಣಿಡುತ್ತದೆ. 

ಎರಡು ಸಂಸ್ಥೆಗಳು ಆರ್ಥಿಕ ಅಪರಾಧಗಳಿಗೆ ಸಂಬಧಿಸಿದ್ದೆ ಆದರೂ ಇಡಿಯ ವ್ಯಾಪ್ತಿ ದೊಡ್ಡದು. ಮನಿ ಲ್ಯಾಂಡರಿಂಗ್, ಹವಾಲಾ ಹಣದ ಬಗ್ಗೆಯೂ ಇಡಿ ಸಮಗ್ರ ತನಿಖೆ ಮಾಡಬಲ್ಲದು.

 

click me!