ಏನದು ಯದುವಂಶಕ್ಕಿರುವ ಅಲಮೇಲಮ್ಮನ ಶಾಪ?

Published : Dec 07, 2017, 06:04 PM ISTUpdated : Apr 11, 2018, 12:48 PM IST
ಏನದು ಯದುವಂಶಕ್ಕಿರುವ ಅಲಮೇಲಮ್ಮನ ಶಾಪ?

ಸಾರಾಂಶ

ಆದರೆ ಈವರೆಗೂ ಶಾಪ ವಿಮೋಚನೆ ಆಗಿಲ್ಲ. ಹೀಗಾಗಿ ತಲೆತಲಾಂತರಗಳಿಂದ ದತ್ತು ಪುತ್ರರ ಮೂಲಕ ವಂಶ ಮುಂದುವರೆಯುತ್ತಿದೆ ಎನ್ನಲಾಗಿದೆ.

‘ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ’ ಎಂದು ಅಲಮೇಲಮ್ಮ ಮೈಸೂರು ಅರಸರಿಗೆ ಶಾಪ ನೀಡಿದ್ದಳು. ಇದರ ವಿಮೋಚನೆಗೆ ಪ್ರತಿ ದಸರಾ ಉತ್ಸವದಲ್ಲೂ ಅಲಮೇಲಮ್ಮ ಮೂರ್ತಿಗೆ ಯದುವಂಶಸ್ಥರು ಪೂಜೆ ಮಾಡುತ್ತಾರೆ.

ಆದರೆ ಈವರೆಗೂ ಶಾಪ ವಿಮೋಚನೆ ಆಗಿಲ್ಲ. ಹೀಗಾಗಿ ತಲೆತಲಾಂತರಗಳಿಂದ ದತ್ತು ಪುತ್ರರ ಮೂಲಕ ವಂಶ ಮುಂದುವರೆಯುತ್ತಿದೆ ಎನ್ನಲಾಗಿದೆ.ಮೈಸೂರು ಪ್ರಾಂತ್ಯದಲ್ಲಿ ಜನಜನಿತವಾಗಿರುವ ಕತೆಯ ಪ್ರಕಾರ, ಹಿಂದೆ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜ್ಯಭಾರ ಮಾಡುತ್ತಿದ್ದ ಶ್ರೀರಂಗರಾಯನಿಗೆ ಬೆನ್ನುಪಣಿ ಎಂಬ ರೋಗ ಬಂದಿತ್ತು. ಇದರ ನಿವಾರಣೆಗೆ ಶ್ರೀರಂಗರಾಯ ತನ್ನ ಪತ್ನಿ ಅಲಮೇಲಮ್ಮ ಜತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಹೋಗಿದ್ದ. ಆ ವೇಳೆ ಶ್ರೀರಂಗಪಟ್ಟಣ ವಶಪಡಿಸಿಕೊಳ್ಳುವುದು ಸುಲಭ ಎಂದು ಮೈಸೂರಿನ ರಾಜ ಮನೆತನದ ಒಡೆಯರು ದಾಳಿ ನಡೆಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯ ತಲಕಾಡಿನಲ್ಲೇ ಮೃತಪಡುತ್ತಾನೆ. ಬಳಿಕ ಮಾಲಂಗಿಯಲ್ಲಿ ನೆಲೆಸುವ ಅಲಮೇಲಮ್ಮನ ಮೇಲೆ ದಂಡೆತ್ತಿ ಹೋಗಲು ಒಡೆಯರ್ ನಿರ್ಧರಿಸುತ್ತಾರೆ. ಅದನ್ನು ತಿಳಿದು ‘ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ’ ಎಂದು ಅಲಮೇಲಮ್ಮ ಶಾಪ ನೀಡಿ ಕಾವೇರಿ ನದಿಗೆ ಹಾರಿದ್ದಾಳೆ ಎನ್ನಲಾಗುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ರಾಷ್ಟ್ರೀಯ ಪ್ರೇರಣಾ ಸ್ಥಳ ಉದ್ಘಾಟನೆ; ಅಟಲ್, ಉಪಾಧ್ಯಾಯ, ಮುಖರ್ಜಿ ಪ್ರತಿಮೆ ಪಾರ್ಕ್‌
ತಿರುಪತಿ ತಿರುಮಲದಲ್ಲಿ ರಾಜ್ಯದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ: ಸಚಿವ ರಾಮಲಿಂಗಾರೆಡ್ಡಿ