
ಬೆಂಗಳೂರು(ಜೂ.13): ಸಾಮಾನ್ಯವಾಗಿ ನಾವೆಲ್ಲಾ ಹೊಟೇಲ್ ನಲ್ಲಿ ಲಾಡ್ಜ್ ಬುಕ್ ಮಾಡಿರುತ್ತೇವೆ. ನಿರ್ದಿಷ್ಟ ದಿನಕ್ಕಾಗಿ ಕೋಣೆ ಬುಕ್ ಮಾಡಿದ ಕೂಡಲೇ ಹೊಟೇಲ್ ಸಿಬ್ಬಂದಿ ಮೊದಲು ಕೊಡುವುದೇ ಒಂದು ಸೋಪ್ ಮತ್ತು ಟವಲ್ ಕಿಟ್‌ನ್ನು. ಆದರೆ ಒಂದೆರಡು ದಿನಗಳ ಬಳಿಕ ಹೊಟೇಲ್ ಬಿಟ್ಟಾಗ ನಾವು ಆ ಸೋಪ್‌ನ್ನೂ ಕೂಡ ಅಲ್ಲೇ ಬಿಟ್ಟು ಬಂದಿರುತ್ತೇವೆ. ಹಾಗೆ ಬಿಟ್ಟು ಬಂದ ಸೋಪ್‌ನ್ನು ಏನು ಮಾಡಲಾಗುತ್ತದೆ ಎಂದು ತಿಳಿಯುವ ಕುತೂಹಲ ಕೂಡ ಯಾರಿಗೂ ಇರುವುದಿಲ್ಲ.
ಆದರೆ ಅಮೆರಿಕದ ಚಾರಿಟಿ ಸಂಸ್ಥೆಯೊಂದು ಹೊಟೇಲ್ ಗಳಲ್ಲಿ ಬಳಸಿ ಬಿಸಾಕಿದ ಸೋಪ್‌ನ್ನು ಪಡೆದು, ಅದನ್ನು ಮತ್ತೆ ಮರುಬಳಕೆಗೆ ಯೋಗ್ಯ ವಸ್ತುವನ್ನಾಗಿ ಮಾಡುತ್ತಿದೆ. ಓರ್ಲ್ಯಾಂಡೋ ಮೂಲದ ‘ಕ್ಲೀನ್ ದ ವರ್ಲ್ಡ್’ ಎಂಬ ಚಾರಿಟಿ ಸಂಸ್ಥೆ ಜಗತ್ತಿನಾದ್ಯಂತ ಹೊಟೇಲ್‌ಗಳಲ್ಲಿ ಬಳಸಿದ ಸೋಪ್‌ಗಳನ್ನು ಸಂಗ್ರಹಿಸಿ ಅದನ್ನು ಮರುಬಳಕೆಗೆ ಸಿದ್ದ ಮಾಡುತ್ತಿದೆ. ಅಮೆರಿಕ ಒಂದರಲ್ಲೇ ದಿನವೊಂದಕ್ಕೆ 1 ಮಿಲಿಯನ್ ಮತ್ತು ಜಗತ್ತಿನಾದ್ಯಂತ 5 ಮಿಲಿಯನ್ ಸೋಪ್‌ಗಳನ್ನು ಬಳಸಿ ಬಿಸಾಡಲಾಗುತ್ತದೆ.
‘ಕ್ಲೀನ್ ದ ವರ್ಲ್ಡ್’ ಚಾರಿಟಿ ಸಂಸ್ಥೆಯ ಮಾಲೀಕ ಶಾನ್ ಸೈಪ್ಲರ್ ಈ ಕುರಿತು ಮಾತನಾಡಿದ್ದು, ಜಗತ್ತಿನಾದ್ಯಂತ ಇರುವ ಹೊಟೇಲ್‌ಗಳಿಂದ ಬಳಸಿ ಬಿಸಾಡಿದ ಸೋಪ್ ಗಳನ್ನು ಸಂಗ್ರಹಿಸಿ ಅದರನ್ನು ಮರು ಬಳಕೆಗೆ ಯೋಗ್ಯವನ್ನಾಗಿ ಮಾಡವುದೇ ಕಂಪನಿ ಉದ್ದೇಶ ಎಂದು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ದಿನವೊಂದಕ್ಕೆ ಸಾವಿರ ಮಕ್ಕಳು ನೈರ್ಮಲ್ಯ ಸಂಬಂಧಿ ಕಾರಣಕ್ಕೆ ಮರಣ ಹೊಂದುತ್ತಿದ್ದಾರೆ. ಈ ಸೋಪ್‌ಗಳನ್ನು ವಿಶ್ವದ ಎಲ್ಲೆಡೆ ಬಡ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಸೈಪ್ಲರ್ ಹೇಳಿದರು.
ಈಗಾಗಲೇ ಕ್ಲೀನ್ ದ ವರ್ಲ್ಡ್ ಚಾರಿಟಿ ಸಂಸ್ಥೆ ಅಮೆರಿಕ, ಭಾರತ, ಹಾಂಗ್ ಕಾಂಗ್ ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೂ ಸುಮಾರು 7 ಮಿಲಿಯನ್ ಸೋಪ್‌ಗಳನ್ನು ತಯಾರಿಸಲಾಗಿದೆ ಎಂದು ಸೈಪ್ಲರ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.