
ಮೈಸೂರು: ಇನ್ನೊಂದು ಮದುವೆಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮುದುಕನಿಗೆ ಯಾಕೆ ಮತ್ತೊಂದು ಮದುವೆ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇತ್ತೀಚೆಗೆ ಒಂದು ಆತ್ಮಾವಲೋಕನ ಸಭೆಗೆ ಹೋಗಿದ್ದೆ, ಅಲ್ಲಿ ಯಾರೋ ಹೇಳ್ತಾ ಇದ್ರು, ನಿಮಗೆ 71 ಅಲ್ಲ ಸರ್ 21, ನಿಮಗೆ ಮತ್ತೊಂದು ಮದುವೆ ಮಾಡುವ ಉತ್ಸಾಹದಲ್ಲಿದ್ದೇವೆ ಅಂತ ಹೇಳಿದ್ರು. ಅದಕ್ಕೆ ನಾನು ಹೇಳ್ದೆ, ಈ ಮಾತನ್ನ ಯಾರಾದ್ರೂ ಹುಡುಗೀರು ಕೇಳಿಸಿಕೊಂಡ್ರೆ ತಪ್ಪು ತಿಳಿದುಕೊಳ್ಳುತ್ತಾರೆ, ನನಗೆ 71 ವರ್ಷ ಆಗಿದೆ. ಮುದುಕನಿಗೆ ಯಾಕಪ್ಪ ಮತ್ತೊಂದು ಮದುವೆ ಅಂದೆ, ಎಂದು ಸಿದ್ದರಾಮಯ್ಯ ತಮ್ಮ ‘ಮದುವೆ’ ಪ್ರಸ್ತಾಪದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಮೈಸೂರಿನಲ್ಲಿ ವಿಜೇತ, ಪರಾಜಿತ ಅಭ್ಯರ್ಥಿಗಳ ಸಭೆಗೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಈ ರೀತಿ ಲೋಕಾಭಿರಾಮ ಮಾತುಕತೆ ನಡೆಸಿದ್ದಾರೆ. ಹೃದಯವಂತಿಕೆಯಲ್ಲಿ ಸದಾ ಯುವಕರು ಎಂಬ ಮಾತಿಗೆ ಸಿದ್ದರಾಮಯ್ಯ, ಹೌದೌದು, ಹೃದಯವಂತಿಕೆಯಲ್ಲಿ ನಾನು ಯಂಗ್ ಎಂದು ಹೇಳಿದ್ದಾರೆ.
ಬಾದಾಮಿಯಲ್ಲಿ ಕಳೆದ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಅವರು, ಸಿದ್ದರಾಮಯ್ಯ ಅವರ ವಯಸ್ಸು 71 ಆದರೂ ಅವರ ಕೆಲಸ ಕಾರ್ಯಗಳೆಲ್ಲ 21 ವರ್ಷದ ಯುವಕನಂತೆ ಇದೆ. ಈ ಉತ್ಸಾಹ ನೋಡಿದರೆ ಅವರಿಗೆ ಮತ್ತೊಂದು ಮದುವೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದರು.
ಆರೋಗ್ಯ ಚೆನ್ನಾಗಿರುವವರೆಗೂ ರಾಜಕೀಯ:
ನಾನೂ ಈಗ ಎಂಎಲ್‌ಎ ಮಾತ್ರ, ಶಾಸಕನ ಕೆಲಸ ಮಾತ್ರ ಮಾಡುತ್ತೇನೆ. ಅದರ ಜೊತೆಗೆ ಸಮನ್ವಯ ಸಮಿತಿ ಅಧ್ಯಕ್ಷನ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಇದನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತೇನೆ. ನನಗೆ ಈಗಾಗಲೇ ವಯಸ್ಸಾಗಿದೆ. ಹಾಗಾಗಿ ಆರೋಗ್ಯ ಇರುವವರೆಗೂ ಮಾತ್ರ ರಾಜಕಾರಣದಲ್ಲಿ ಇರ್ತಿನಿ. ಆನಂತರ ರಾಜಕಾರಣದ ಬಗ್ಗೆ ಗೊತ್ತಿಲ್ಲ, ಎಂದು ಸಿದ್ದರಾಮಯ್ಯ ತಮ್ಮ ಮುಂದಿನ ರಾಜಕೀಯ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.