ಬಸ್ಸಿನಲ್ಲೇ ಹೀಗೆ ಮಾಡೋದಾ? ಸ್ಲೀಪರ್ ಸೀಟ್ ಬುಕ್ ಮಾಡಿದ ಪ್ರೇಮಿಗಳು.. ಆಮೇಲೆ ನಡೆದದ್ದೇ ಬೇರೆ!

Published : Feb 18, 2026, 06:36 PM IST
sleeper bus

ಸಾರಾಂಶ

Public Indecency Case AP: ಬೈಕ್ ಮತ್ತು ಮೆಟ್ರೋ ರೈಲುಗಳ ನಂತ್ರ ಈಗ ಖಾಸಗಿ ಬಸ್‌ಗಳೂ ಪ್ರೇಮಿಗಳ ಅಸಭ್ಯ ಚಟುವಟಿಕೆಗಳ ಅಡ್ಡವಾಗುತ್ತಿದೆ. ಆಂಧ್ರದ ಮಚಲಿಪಟ್ಟಣಂನಲ್ಲಿ ಪ್ರೇಮಿಗಳಿಬ್ಬರು ತಮ್ಮ 'ಪ್ರೈವೆಸಿ'ಗಾಗಿ ಬಸ್ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ತಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಮಿತಿ ಮೀರುತ್ತಿದ್ದಾರೆ. ಹಿಂದೆ ಪಾರ್ಕ್ ಅಥವಾ ಸಿನಿಮಾ ಥಿಯೇಟರ್‌ಗಳಿಗೆ ಸೀಮಿತವಾಗಿದ್ದ ಪ್ರೇಮಿಗಳ ಅಸಭ್ಯ ಚಟುವಟಿಕೆಗಳು ಈಗ ಪ್ರಯಾಣಿಸುವ ವಾಹನಗಳಿಗೂ ಹಬ್ಬಿವೆ. ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಬಂದರ್ (ಮಚಿಲಿಪಟ್ಟಣಂ) ಗೆ ತೆರಳಲು ಖಾಸಗಿ ಬಸ್‌ನಲ್ಲಿ ಸ್ಲೀಪರ್ ಸೀಟ್ ಬುಕ್ ಮಾಡಿದ ಪ್ರೇಮಿಗಳಿಬ್ಬರು ಮಾಡಿದ ರಾದ್ಧಾಂತಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

ಅಸಲಿ ವಿಷಯ ಇಲ್ಲಿದೆ

ಆಂಧ್ರಪ್ರದೇಶದ ಈ ಪ್ರೇಮಿಗಳು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಹೈದರಾಬಾದ್‌ನಿಂದ ಬಂದರ್‌ಗೆ ಹೋಗಲು ಖಾಸಗಿ ಟ್ರಾವೆಲ್ಸ್‌ಗೆ ಸೇರಿದ ಎಸಿ ಸ್ಲೀಪರ್ ಬಸ್‌ನಲ್ಲಿ ಪಕ್ಕಪಕ್ಕದ ಸೀಟುಗಳನ್ನು ಬುಕ್ ಮಾಡಿದ್ದರು. ನಿಯಮದಂತೆ, ಸ್ಲೀಪರ್ ಬಸ್‌ಗಳಲ್ಲಿ ಮಹಿಳೆಯ ಪಕ್ಕದ ಸೀಟನ್ನು ಮಹಿಳೆಯರಿಗೆ ಅಥವಾ ಅವರ ಸಂಬಂಧಿಕರಿಗೆ ಮಾತ್ರ ನೀಡಲಾಗುತ್ತದೆ. ಆದರೆ ಈ ಜೋಡಿ, ಖಾಸಗಿ ಬಸ್ ಅಲ್ವಾ ಯಾರೂ ಕೇಳಲ್ಲ ಎಂದುಕೊಂಡು ಎರಡು ಸೀಟುಗಳನ್ನು ಹುಡುಗಿಯರ ಹೆಸರಿನಲ್ಲೇ ಬುಕ್ ಮಾಡಿದ್ದರು!

ಬಸ್ ಹತ್ತುವಾಗ ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿ ಪಕ್ಕಪಕ್ಕದ ಸೀಟಿನಲ್ಲಿ ಮಲಗಿ ಪ್ರಯಾಣಿಸಲು ಮುಂದಾದಾಗ ಡ್ರೈವರ್ ಅಡ್ಡಿಪಡಿಸಿದರು. ಆದರೆ ಇವರಿಬ್ಬರೂ ಒಟ್ಟಿಗೇ ಇರಬೇಕೆಂದು ಪಟ್ಟು ಹಿಡಿದರು, ಆದರೆ ಡ್ರೈವರ್ ನಿಯಮ ಮೀರಿ ಅವಕಾಶ ನೀಡಲು ನಿರಾಕರಿಸಿದರು. ಈ ವೇಳೆ ಡ್ರೈವರ್ ಮತ್ತು ಜೋಡಿಯ ನಡುವೆ ಜೋರಾದ ಗಲಾಟೆ ನಡೆಯಿತು. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಡ್ರೈವರ್ ಪರವಾಗಿ ಮಾತನಾಡಿದ್ದರಿಂದ ಬೇರೆ ದಾರಿಯಿಲ್ಲದೆ ಜೋಡಿ ದೂರದೂರದ ಸೀಟುಗಳಲ್ಲಿ ಕುಳಿತು ಪ್ರಯಾಣ ಬೆಳೆಸಿದರು.

ತಮ್ಮನ್ನು ದೂರ ಮಾಡಿದ್ದಕ್ಕೆ ಡ್ರೈವರ್ ಮೇಲೆ ಸಿಟ್ಟಿನಿಂದ ಕುದಿಯುತ್ತಿದ್ದ ಈ ಜೋಡಿ, ಮಚಿಲಿಪಟ್ಟಣಂ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮತ್ತೆ ಗಲಾಟೆ ಶುರು ಮಾಡಿದರು. ಹುಡುಗಿಯ ಮುಂದೆ ತಾನು ಶೋ ತೋರಿಸಲು ಹೋದ ಯುವಕ, ಬಸ್ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಾನೆ. ಚಿಲಕಪುಡಿ ಸೆಂಟರ್ ಬಳಿ ಡ್ರೈವರ್‌ಗೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಬಸ್ ಡ್ರೈವರ್ ಪೊಲೀಸ್‌ಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಾಚಿಕೆಗೇಡಿನ ಸಂಗತಿ

ಪೊಲೀಸರು ಪ್ರೇಮಿಗಳ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಆದರೆ ಸಾರ್ವಜನಿಕ ಸಾರಿಗೆಯಲ್ಲಿ ತಮ್ಮ 'ಪ್ರೈವೆಸಿ'ಗಾಗಿ ಇಷ್ಟು ಕೆಳಮಟ್ಟಕ್ಕೆ ಇಳಿದು ರಾದ್ಧಾಂತ ಮಾಡಿದ ಈ ಜೋಡಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸುದ್ದಿ ತಿಳಿದವರೆಲ್ಲಾ "ಎಂತಹ ಕೆಟ್ಟ ಕಾಲ ಬಂತು, ಬಸ್ಸಿನಲ್ಲೂ ಇಂತಹ ಅಸಭ್ಯ ವರ್ತನೆಯೇ?" ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಬೈಕ್ ಮೇಲೆ ವಿಚಿತ್ರ ಭಂಗಿ
ಇಷ್ಟೇ ಅಲ್ಲ, ಒಂದು ವಾರದ ಹಿಂದೆ ಮತ್ತೊಂದು ಜೋಡಿ ರಾತ್ರಿಯ ಸಮಯದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಮೇಲೆ ವಿಚಿತ್ರವಾದ ಭಂಗಿಯಲ್ಲಿ ಕುಳಿತು ರೋಮ್ಯಾನ್ಸ್ ಮಾಡುತ್ತಾ ಹೋಗುತ್ತಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ "ಫಿಫ್ಟಿ ಶೇಡ್ಸ್ ಆಫ್ ಇಂಡಿಯನ್ ಚಾಪ್ರಿ ಕಪಲ್ ರೋಮ್ಯಾನ್ಸ್ ಆನ್ ರೋಡ್" ಎಂದು ಕಾಮೆಂಟ್ ಮಾಡಲಾಗಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.. 

ಮೆಟ್ರೋ ರೈಲಿನಲ್ಲಿ ಮಜಾ..
ಇದು ಮಾತ್ರವಲ್ಲದೆ, ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಅಪ್ಪಿಕೊಂಡು ಆಕೆಯ ಮೇಲೆ ವಾಲಿ ಹೋಗುತ್ತಾ ರೋಮ್ಯಾಂಟಿಕ್ ಆಗಿ ಮಾತನಾಡುತ್ತಿದ್ದ ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

ಬೈಯ್ದು ಹಾಕುತ್ತಿರುವ ನೆಟ್ಟಿಗರು..
ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುತ್ತಿರುವ ರೀತಿಯನ್ನು ಕಂಡು ಜವಾಬ್ದಾರಿಯುತ ನಾಗರಿಕರು "ಯುವಜನತೆಗೆ ಬುದ್ಧಿ ಭ್ರಮಣೆಯಾಗಿದೆಯೇ ಅಥವಾ ಕೊಬ್ಬು ಏರಿದೆಯೇ?" ಎಂದು ಕಟುವಾಗಿ ಟೀಕಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣಗೆ ಮತ್ತೆ ಹಿನ್ನಡೆ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಕೈಬಿಡಲು ಕೋರ್ಟ್‌ ನಕಾರ
ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ