ಬಂಗಾಳ ಅಲ್ರಿ ‘ಬಂಗ್ಲಾ’ ಅನ್ನಿ: ಹೆಸರು ಬದಲಾವಣೆಗೆ ದೀದಿ ಮುಂದು!

Published : Jul 26, 2018, 02:58 PM ISTUpdated : Jul 26, 2018, 06:21 PM IST

ಸಾರಾಂಶ

ಪಶ್ಚಿಮ ಬಂಗಾಳ ಹೆಸರು ಬದಲಾವಣೆಗೆ ಮುಂದಾದ ಮಮತಾ ಬಂಗಾಳದ ಬದಲು ಬಂಗ್ಲಾ ಎಂದು ಹೆಸರಿಸಲು ಮುಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ ಗೃಹ ಸಚಿವಾಲಯದ ಅನುಮತಿಗಾಗಿ ಕೇಂದ್ರಕ್ಕೆ ರವಾನೆ

ಕೋಲ್ಕತ್ತಾ(ಜು.26): ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರನ್ನು ಬಾಂಗ್ಲಾ' ಎಂದು ಮರು ನಾಮಕರಣ ಮಾಡಲು ಮುಂದಾಗಿದ್ದಾರೆ.

ರಾಜ್ಯದ ಹೆಸರು ಬದಲಾಣೆಗೆ ಈ ಹಿಂದೆಯೇ ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿತ್ತಾದರೂ, ಇದಕ್ಕೆ ಪರ-ವಿರೋಧ ಚರ್ಚೆಗಳು ಎದುರಾಗಿದ್ದರಿಂದ ಕೆಲ ಕಾಲ ಈ ವಿವಾದಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಸ್ವತಃ ತೃಣಮೂಲ ಕಾಂಗ್ರೆಸ್ ಪಕ್ಷ ಬಂಗಾಳ ವಿಧಾನಸಭೆಯಲ್ಲಿ ಈ ಬಗ್ಗೆ ಮಸೂದೆಯನ್ನು ಮಂಡಿಸುವ ಮೂಲಕ ಮತ್ತೆ ಹಳೆಯ ವಿವಾದವನ್ನು ಕೆದಕಿದೆ.

ಇಂದು ನಡೆದ ವಿಧಾನಸಭೆ ಕಲಾಪದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರು ನಾಮಕರಣ ಮಾಡುವ ಮಸೂದೆಯನ್ನು ಮಂಡಿಸಿತು. ಇದಕ್ಕೆ ಟಿಎಂಸಿ ಸೇರಿದಂತೆ ಕೆಲ ಸ್ಥಳೀಯ ಪಕ್ಷೇತರ ಶಾಸಕರೂ ಬೆಂಬಲ ನೀಡುವುದರೊಂದಿಗೆ ಮಸೂದೆಗೆ ಅನುಮೋದನೆ ದೊರೆತಿದೆ ಎನ್ನಲಾಗಿದೆ. ಇನ್ನು ವಿಧಾನಸಭೆಯ ನಿರ್ಣಯಕ್ಕೆ ಗೃಹ ಸಚಿವಾಲಯ ಅನುಮೋದನೆ ನೀಡಿದ್ದೇ ಆದರೆ ಆಗ ಪಶ್ಚಿಮ ಬಂಗಾಳದ ಹೆಸರು ಅಧಿಕೃತವಾಗಿ 'ಬಾಂಗ್ಲಾ' ಆಗಲಿದೆ.

ಈ ಹಿಂದೆಯೇ ಪಶ್ಚಿಮ ಬಂಗಾಳ ಸರ್ಕಾರ ಹೆಸರು ಬದಲಾವಣೆದೆ ಮಸೂದೆ ಮಂಡಿಸಿ ಅನುಮೋದನೆಯನ್ನೂ ಪಡೆದಿತ್ತು. ಆದರೆ ಇಂಗ್ಲೀಷ್ ನಲ್ಲಿ ಬೆಂಗಾಲ್ ಎಂದು ಬೆಂಗಾಲಿ ಮತ್ತು ಹಿಂದಿ ಭಾಷೆಯಲ್ಲಿ ಬಾಂಗ್ಲಾ ಎಂದು ನಾಮಕರಣ ಮಾಡಲು ಮುಂದಾಗಿತ್ತು. ಆದರೆ ಸರ್ಕಾರದ ಈ ಪ್ರಸ್ತಾಪಕ್ಕೆ ಗೃಹಸಚಿವಾಲಯ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಅಂದಿನ ಮಸೂದೆ ವಿಫಲವಾಗಿತ್ತು. ಇದೀಗ ಮೂರೂ ಭಾಷೆಗಳಲ್ಲೂ ರಾಜ್ಯದ ಹೆಸರನ್ನು ಬಾಂಗ್ಲಾ ಎಂದು ಎಂದು ನಿರ್ಧರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ