ಉಪ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ

Published : Jul 26, 2018, 02:21 PM ISTUpdated : Jul 26, 2018, 02:22 PM IST
ಉಪ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ

ಸಾರಾಂಶ

ಸರ್ಕಾರಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ನಿಟ್ಟಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ಮುಖಂಡರು ಆಗ್ರಹಿಸಿದ್ದಾರೆ.   

ಬೆಂಗಳೂರು :  ತಮಿಳುನಾಡು ರಾಜಕಾರಣದ ವಿಚಾರವಾಗಿ ಇದೀಗ  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ಹಾಗೂ ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರ ರಾಜೀನಾಮೆಗೆ ಆಗ್ರಹಿಸಲಾಗಿದೆ. 

ಪನ್ನೀರ್ ಸೆಲ್ವಂ ಅವರ ಸಹೋದರ ಬಾಲಮುರುಗನ್ ಅವರನ್ನು  ಮಿಲಿಟರಿ ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ದಿರುವುದು ಇದೀಗ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. 

ಜುಲೈ ಮೊದಲ ವಾರದಲ್ಲಿ ಚೆನ್ನೈನಿಂದ ಮಧುರೈ ಆಸ್ಪತ್ರೆಗೆ ಕರೆದೊಯ್ಯಲು ಆದೇಶ ನೀಡಿದ್ದರು. ಈ ನಿಟ್ಟಿನಲ್ಲಿ  ನಿರ್ಮಲಾ ಸೀತಾರಾಮನ್ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ರಾಜೀನಾಮೆ ನೀಡಬೇಕು ಎಂದು ಡಿಎಂಕೆ ಮುಖಂಡ ಎಂ.ಕೆ ಸ್ಟಾಲಿನ್ ಆಗ್ರಹಿಸಿದ್ದಾರೆ. 

ಚೆನ್ನೈನಲ್ಲಿ ಇದ್ದ ವೇಳೆ ಅವರ ಸಹೋದರಗೆ ತೀವ್ರ ಅನಾರೋಗ್ಯವಾಗಿದ್ದಾಗಿ ಸಂದೇಶ ಬಂದಿದ್ದು ಈ ವೇಳೆ ಮಿಲಿಟರಿ ಆ್ಯಂಬುಲೆನ್ಸ್ ಬಳಸಲು ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದರು.  ಇದರಿಂದ ಮಿಲಿಟರಿ ವಿಮಾನವನ್ನು ಬಳಕೆ ಮಾಡಿಕೊಂಡಿರುವುದು ತಪ್ಪಾಗಿದ್ದು, ಖಾಸಗಿ ಬಳಕೆಗೆ ಸರ್ಕಾರದ ಸೇವೆ ಬಳಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕು ಎಂದು ಸ್ಟಾಲಿನ್ ಅವರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ ಇಂಡಿಯಾ ನೇಮಕಾತಿ: 154 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಕ್ಷಣವೇ ಅರ್ಜಿ ಸಲ್ಲಿಸಿ
Viral Video: ವೇದಿಕೆಯಲ್ಲೇ ಮಹಿಳಾ ವೈದ್ಯೆಯ ಹಿಜಾಬ್‌ ತೆಗೆಯಲು ಯತ್ನಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌