
ಕೋಲ್ಕತಾ (ಜ.24): ಶಹಜಹಾನ್ ತನ್ನ ಮಡದಿ ಮೇಲಿನ ಪ್ರೀತಿಗಾಗಿ ತಾಜ್ ಮಹಲ್ ಅನ್ನೇ ಕಟ್ಟಿಸಿದರೆ, ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಕಳೆದ ವರ್ಷ ವಿಧಿವಶರಾದ ತಮ್ಮ ಪ್ರೀತಿಯ ಪತ್ನಿಯ ನೆನಪಿಗಾಗಿ ನಾಯಿಗಳ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ.
‘ನಾಯಿಗಳ ಮೇಲೆ ಅತೀವವಾದ ಪ್ರೀತಿ, ಕರುಣೆ ಇಟ್ಟುಕೊಂಡಿದ್ದ ತನ್ನ ಪ್ರೀತಿಯ ಪತ್ನಿಗೆ ನೆನಪಿಗಾಗಿ, ನಾಯಿ ಆಸ್ಪತ್ರೆ ಕಟ್ಟಿಸುತ್ತಿದ್ದೇನೆ. ಇದರ ಹೊರತಾಗಿ ನನ್ನ ಪತ್ನಿಗೆ ಗೌರವ ಸಲ್ಲಿಸಲು ಅನ್ಯ ಮಾರ್ಗಗಳು ನನಗಿಲ್ಲ,’ ಎಂದಿದ್ದಾರೆ.
‘ನನ್ನ ಪತ್ನಿ ಶ್ವಾನ ಪ್ರಿಯೆಯಾಗಿದ್ದರು. ಅವುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಈ ಮೂಲಕ ಶ್ವಾನಾಸ್ಪತ್ರೆ ಉದ್ಘಾಟಿಸುವ ಮೂಲಕ ಗೌರವ ಸಲ್ಲಿಸುವುದಾಗಿ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.