ಬರುತ್ತಿವೆ ಶತಾಬ್ದಿಗೆ ಸಡ್ಡು ಹೊಡೆಯುವ ವಿಶೇಷ ರೈಲುಗಳು

By Suvarna Web DeskFirst Published Jan 24, 2018, 9:20 AM IST
Highlights

ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ ಶೇ.20ರಷ್ಟು ಸಮಯ ಉಳಿಸುವ ಮತ್ತು ಉಲ್ಲಾಸದಾಯಕ ಅನುಭವ ನೀಡುವ ವಿಶ್ವದರ್ಜೆ ಸೌಲಭ್ಯಗಳನ್ನೊಳಗೊಂಡ ಎರಡು ರೈಲುಗಳು ಶೀಘ್ರ ಜನರ ಸೇವೆಗೆ ಲಭ್ಯವಾಗಲಿದೆ.

ಚೆನ್ನೈ: ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ ಶೇ.20ರಷ್ಟು ಸಮಯ ಉಳಿಸುವ ಮತ್ತು ಉಲ್ಲಾಸದಾಯಕ ಅನುಭವ ನೀಡುವ ವಿಶ್ವದರ್ಜೆ ಸೌಲಭ್ಯಗಳನ್ನೊಳಗೊಂಡ ಎರಡು ರೈಲುಗಳು ಶೀಘ್ರ ಜನರ ಸೇವೆಗೆ ಲಭ್ಯವಾಗಲಿದೆ.

ಟ್ರೈನ್-18 ಮತ್ತು ಟ್ರೈನ್-20 ಎಂದು ಸದ್ಯಕ್ಕೆ ಗುರುತಿಸಲ್ಪಟ್ಟಿರುವ ಈ ಎರಡೂ ರೈಲುಗಳ ವಿನ್ಯಾಸವು ಚೆನ್ನೈನ ರೈಲು ಬೋಗಿ ಕಾರ್ಖಾನೆ(ಐಸಿಎಫ್)ಯಲ್ಲಿ ಈಗಾಗಲೇ ಪೂರ್ಣಗೊಂಡಿದೆ. ಟ್ರೈನ್-18  2018ರ ಜೂನ್‌ನಲ್ಲಿ, ಟ್ರೈನ್ 20, 2020ರಲ್ಲಿ ಜನರ ಬಳಕೆಗೆ ಲಭ್ಯವಾಗಲಿದೆ. ಹಾಲಿ ದೇಶದ ಅತಿ ವೇಗದ ರೈಲುಗಳು ಎಂಬ ಖ್ಯಾತಿ ಹೊಂದಿರುವ ರಾಜಧಾನಿ ಮತ್ತು ಶತಾಬ್ದಿ ಗಂಟೆಗೆ 150 ಕಿ.ಮೀ ಓಡುವ ಸಾಮಥ್ಯ ಹೊಂದಿದ್ದವು.

ಅವು ಓಡುವುದು ಗರಿಷ್ಠ 90 ಕಿ.ಮೀ ವೇಗದಲ್ಲಿ. ಆದರೆ ಹೊಸ ರೈಲನ್ನು ಏರೋಡೈನಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗುತ್ತಿದ್ದು, ಇವು ಗಂಟೆಗೆ 160 ಕಿ.ಮೀ ವೇಗದಲ್ಲಿ ಓಡಲಿವೆ. ಟ್ರೈನ್-18 ಬೋಗಿಗಳು ಸ್ಟೀಲ್, ಟ್ರೈನ್-20ನ ಬೋಗಿಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ.

click me!