ಜಿಲ್ಲಾಧಿಕಾರಿ ಹೆಂಡ್ತಿಗೆ ಅಶ್ಲೀಲ ಮೆಸೇಜ್: ಮುಂದೆ ಆಗಿದ್ದೇ ಬೇರೆ..!

By Web DeskFirst Published Jan 7, 2019, 10:01 PM IST
Highlights

ಪೊಲೀಸ್​ ಠಾಣೆಯಲ್ಲಿ ಯುವಕನೊಬ್ಬನಿಗೆ ಪಶ್ಚಿಮ ಬಂಗಾಳದ ಜಿಲ್ಲಾಧಿಕಾರಿ ಹಿಗ್ಗಾಮುಗ್ಗಾ ಥಳಿಸುವ ವಿಡಿಯೋ ವೈರಲ್​ ಆಗಿದೆ. 

ಕೋಲ್ಕತ್ತಾ, [ಜ.07]:ಪೊಲೀಸ್​ ಠಾಣೆಯಲ್ಲಿ ಯುವಕನೊಬ್ಬನಿಗೆ ಪಶ್ಚಿಮ ಬಂಗಾಳದ ಜಿಲ್ಲಾಧಿಕಾರಿ ಹಿಗ್ಗಾಮುಗ್ಗಾ ಥಳಿಸುವ ವಿಡಿಯೋ ವೈರಲ್​ ಆಗಿದೆ. 

ಅಲಿಪುರ್ದ್ವಾರ್​ ಜಿಲ್ಲಾಧಿಕಾರಿ ನಿಖಿಲ್​ ನಿರ್ಮಾಲ್​ ಅವರ ಪತ್ನಿಗೆ ವಿನೋದ್ ಕುಮಾರ್ ಸರ್ಕಾರ್ ಎನ್ನುವ ಯುವಕನೊರ್ವ ಫೇಸ್​ಬುಕ್​ ಮೂಲಕ ಅಶ್ಲೀಲ ಮೆಸೇಜ್​ಗಳನ್ನು ಕಳುಹಿಸಿ ಪೀಡಿಸುತ್ತಿದ್ದನಂತೆ. 

See how Bengal IAS officer, Nikhil Nirmal, district magistrate of Alipurduar district take law in his own hands. He & his wife beat up a youth for making lewd comments on his wife’s Facebook profile. Incident unfolds inside the police station & infront IC of Police pic.twitter.com/iRCO7SnRa6

— Pooja Mehta (@pooja_zeenews)

ಈ ನಿಟ್ಟಿನಲ್ಲಿ ಯುವಕನನ್ನು  ಪೊಲೀಸ್ ಠಾಣೆಗೆ ಕರೆಸಿದ ಜಿಲ್ಲಾಧಿಕಾರಿ, ಯುವಕನ ಕೊರಳಪಟ್ಟಿ ಹಿಡಿದುಕೊಂಡು ಮನಬಂದಂತೆ ಥಳಿಸಿದ್ದಾರೆ. ಬಳಿಕ ಯುವಕನ್ನು  ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. 

click me!