ಬಿಜೆಪಿ ಟಿಕೆಟಲ್ಲಿ ಸ್ಪರ್ಧಿಸಿದ್ದವನ ಬಳಿಯಿತ್ತು ಲಕ್ಷಾಂತರ ವೌಲ್ಯದ ಹೊಸ ನೋಟು

By suvarna web deskFirst Published Dec 7, 2016, 1:35 PM IST
Highlights

ರಾಣಿಗಂಜ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹೇಶ್ ಶರ್ಮಾ ಕೇವಲ ಶೇ.18ರಷ್ಟು ಮತಗಳನ್ನು ಪಡೆದು ಸೋಲುಂಡಿದ್ದರು. ಈಗಲೂ ಅವರು ಬಿಜೆಪಿ ಸದಸ್ಯನೇ ಎಂಬುದು ಖಚಿತವಾಗಿಲ್ಲ. ಆದರೆ, ಹಣದ ಅವ್ಯವಹಾರ ಆರೋಪದಲ್ಲಿ ಅವರನ್ನು ಬಂಸಲಾಗಿದ್ದು, ಈ ವೇಳೆ ಲಕ್ಷಾಂತರ ರು.ಗಳು ಸಿಕ್ಕಿವೆ ಎಂದಿದ್ದಾರೆ ಪೊಲೀಸರು.

ನವದೆಹಲಿ(ಡಿ.07): ಬಿಜೆಪಿ ಟಿಕೆಟ್‌ನಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಹೇಶ್ ಶರ್ಮಾ ಎಂಬವರನ್ನು ಮಂಗಳವಾರ ಪೊಲೀಸರು ಬಂಸಿದ್ದು, ಅವರಲ್ಲಿದ್ದ 2 ಸಾವಿರ ಮುಖಬೆಲೆಯ ಹೊಸ ನೋಟುಗಳನ್ನು ಒಳಗೊಂಡ ಲಕ್ಷಾಂತರ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ, ಕಲ್ಲಿದ್ದಲು ಮಾಫಿಯಾಗೆ ಸಂಬಂಧಿಸಿದ ಹಲವು ಮಂದಿ ಶಂಕಿತರನ್ನೂ ವಶಕ್ಕೆ ಪಡೆಯಲಾಗಿದೆ.

click me!